CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ನಂದಿನಿ ಹಾಲಿನ ಬೆಲೆ ಏರಿಕೆಗೆ ಅನುಮತಿ ನೀಡದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆಎಸ್‌ಎಚ್‌ಎ) ಧನ್ಯವಾದ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರಾದ ಶ್ರೀ ಜಿ ಕೆ ಶೆಟ್ಟಿ, ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಸಂಬಂಧ ಸಂಘದ ಮನವಿಯನ್ನು ಪುರಸ್ಕರಿಸಿ, ಹೋಟೆಲುಗಳ ಹಾಗೂ ಗ್ರಾಹಕರ ಹಿತ ರಕ್ಷಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಣದುಬ್ಬರದಿಂದಾಗಿ ಜನ ಸಾಮಾನ್ಯರು ಬಳಲುತ್ತಿದ್ದು ಈ ಸಂದರ್ಭದಲ್ಲಿ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಅವರಿಗೆ ಇನ್ನಷ್ಟು ತೊಂದರೆ ಉಂಟು ಮಾಡುತ್ತಿತ್ತು. ಇದರ ಜೊತೆಗೆ, ಹೋಟೆಲ್ ಉದ್ಯಮಕ್ಕೆ ಕೂಡಾ ಈ ಬೆಲೆ ಏರಿಕೆ ಆಘಾತ ಉಂಟುಮಾಡುವ ಸಾಧ್ಯತೆ ಇತ್ತು.
ಈ ಹಿನ್ನಲೆಯಲ್ಲಿ ಸಂಘ, ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿತ್ತು. ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
CM Siddharamaiah ನಂದಿನ ಹಾಲಿನ ದರ ಏರಿಕೆಗೆ ಅನುಮತಿ ನೀಡದ ಸೀಎಂ ಅವರಿಗೆ ಹೋಟೆಲ್ ಮಾಲೀಕರ ಸಂಘದ ಕೃತಜ್ಞತೆ ಹಾಲು ಹಾಗು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಹೋಟೆಲ್ ಪದಾರ್ಥಗಳ ಬೆಲೆ ಏರಿಕೆಯನ್ನು ಅನಿವಾರ್ಯವಾಗಿಸುತ್ತಿತ್ತು. ಇದು ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇತ್ತು. ಈ ಹಿನ್ನಲೆಯಲ್ಲಿ ಸಂಘ ಬೆಲೆ ಏರಿಕೆ ಮಾಡದಂತೆ ಮನವಿ ಸಲ್ಲಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಹೆಚ್ಚಿನ ಮಾಹಿತಿಗೆ 98440 06736 ಸಂಪರ್ಕಿಸಬಹುದು