Klive Special ದೇವರ ಸ್ವರೂಪ
ಗರ್ಭದಲ್ಲಿ ಹೊತ್ತು
ನವಮಾಸಕ್ಕೆ ಹೆತ್ತು
ಮೌಲ್ಯಗಳನ್ನೇ ಬಿತ್ತು
ಸಲಹಿದೆ ನೀಡಿ ಕೈತುತ್ತು
ಅಮ್ಮ ನಿನ್ನೊಲವು
ಅದುವೇ ಬಣ್ಣಿಸಲಸದಳವು
ಜಗಕ್ಕೆ ನೀ ಜೀವಾಮೃತವು
ನೀನಾದೆ ದೇವರ ಸ್ವರೂಪವು
ಅದೆಂತಹ ಮಮತೆ ನಿನ್ನಲ್ಲಿ
ನಿನ್ನ ಸಾಂಗತ್ಯವೇ ಸ್ವರ್ಗವಿಲ್ಲಿ
ಜಗ ಮರೆತೆ ನಿನ್ನ ಮಡಿಲಿನಲ್ಲಿ
ನಿನ್ನಿಂದಲೇ ಸಿಕ್ಕಿದ ಭಾಗ್ಯವಿಲ್ಲಿ
ಜೀವಕ್ಕೆ ಜೀವವಾಗಿ
ಸಹನೆಯ ಮೂರ್ತಿಯಾಗಿ
ವಾತ್ಸಲ್ಯದ ಅಮೃತಧಾರೆಯಾಗಿ
ದೇವರ ರಾಯಭಾರಿ ನೀನಾಗಿ
ನಿನ್ನ ಅಂತರಾಳದ ಭಾವ
ಮರೆ ಮಾಚಿದೇ ನಿನ್ನೆಲ್ಲ ನೋವ
ಮರೆಯಲುಂಟೇ ನೀ ತುಂಬಿದ ಛಲವ
ತೀರಿಸಲಾಗದು ಆ ನಿನ್ನ ಋಣವ
ಶೋಭಾ ಸತೀಶ್
ಸ.ಹಿ.ಪ್ರಾ.ಶಾಲೆ, ಚಿಲಕಾದ್ರಿಹಳ್ಳಿ
ದೂ.ಸ 8762603511