D S Arun ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯಕ. ಇಂತಹ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಮಾ. 2ರಂದು ಆಯೋಜನೆಯಾಗಲಿರುವ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಆರ್ ಆರ್ ಸ್ಮಾಷರ್ಸ್ ನ ಜರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಷಟಲ್ ಬ್ಯಾಡ್ಮಿಂಟನ್ ಅವಶ್ಯಕತೆ ಇತ್ತು. ಇಂತಹ ಒಂದು ಪ್ರಯತ್ನಕ್ಕೆ ಸದಾ ಬೆಂಬಲ ಇರುತ್ತದೆ. ಪ್ರತಿ ವರ್ಷವೂ ಕೂಡ ಪಂದ್ಯಾವಳಿ ಆಯೋಜಿಸಬೇಕು ಎಂದು ತಿಳಿಸಿದರು.
ಆರ್ ಆರ್ ಸ್ಮಾಷರ್ಸ್ ನ ತಂಡದ ಮಾಲೀಕ ಎನ್.ರಮೇಶ್ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ಷಟಲ್ ಬ್ಯಾಡ್ಮಿಂಟನ್‌ಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತೇನೆ. ಈ ಒಂದು ಪ್ರಯತ್ನಕ್ಕೆ ಶಿವಮೊಗ್ಗದ ಎಲ್ಲ ಆಟಗಾರರು ಬೆಂಬಲ ನೀಡಬೇಕು ಎಂದರು.
D S Arun ಕಾರ್ಯಕ್ರಮದ ಸಂಯೋಜಕ ದೀಪಕ್ ಮಾತನಾಡಿ, ಐಪಿಎಲ್ ಮಾದರಿಯ ಷಟಲ್ ಬ್ಯಾಡ್ಮಿಂಟನ್‌ನಿಂದ ಅನೇಕ ಆಟಗಾರರು ಮುಂಚೂಣಿಗೆ ಬರಬೇಕು. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚಾಗಬೇಕು ಎಂದು ತಿಳಿಸಿದರು.
ಮಾ.2ರಂದು ಐಪಿಎಲ್ ಮಾದರಿಯಲ್ಲಿ ರಾವ್ ಅರೇನಾದಲ್ಲಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ರಾವ್ ಅರೆನಾದ ಮಾಲೀಕ ಆದಿತ್ಯ ಎಸ್ ರಾವ್ ಮತ್ತು ಮತ್ತೋರ್ವ ತಂಡದ ಮಾಲೀಕರಾದ ಮಹಾರುದ್ರಪ್ಪ ಮತ್ತು ತಂಡದ ಎಲ್ಲ ಆಟಗಾರರು ಹಾಗೂ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಸಂತೋಷ್.ಬಿ.ಎ. ಪಾಲ್ಗೊಂಡಿದ್ದರು.
Date: