Sunday, June 7, 2026
Sunday, June 7, 2026

D S Arun ಪ್ರತೀವರ್ಷವೂ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿ- ಡಿ.ಎಸ್.ಅರುಣ್

Date:

D S Arun ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯಕ. ಇಂತಹ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಮಾ. 2ರಂದು ಆಯೋಜನೆಯಾಗಲಿರುವ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಆರ್ ಆರ್ ಸ್ಮಾಷರ್ಸ್‌ ನ ಜರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಷಟಲ್ ಬ್ಯಾಡ್ಮಿಂಟನ್ ಅವಶ್ಯಕತೆ ಇತ್ತು. ಇಂತಹ ಒಂದು ಪ್ರಯತ್ನಕ್ಕೆ ಸದಾ ಬೆಂಬಲ ಇರುತ್ತದೆ. ಪ್ರತಿ ವರ್ಷವೂ ಕೂಡ ಪಂದ್ಯಾವಳಿ ಆಯೋಜಿಸಬೇಕು ಎಂದು ತಿಳಿಸಿದರು.
ಆರ್ ಆರ್ ಸ್ಮಾಷರ್ಸ್‌ ನ ತಂಡದ ಮಾಲೀಕ ಎನ್.ರಮೇಶ್ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ಷಟಲ್ ಬ್ಯಾಡ್ಮಿಂಟನ್‌ಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತೇನೆ. ಈ ಒಂದು ಪ್ರಯತ್ನಕ್ಕೆ ಶಿವಮೊಗ್ಗದ ಎಲ್ಲ ಆಟಗಾರರು ಬೆಂಬಲ ನೀಡಬೇಕು ಎಂದರು.
D S Arun ಕಾರ್ಯಕ್ರಮದ ಸಂಯೋಜಕ ದೀಪಕ್ ಮಾತನಾಡಿ, ಐಪಿಎಲ್ ಮಾದರಿಯ ಷಟಲ್ ಬ್ಯಾಡ್ಮಿಂಟನ್‌ನಿಂದ ಅನೇಕ ಆಟಗಾರರು ಮುಂಚೂಣಿಗೆ ಬರಬೇಕು. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚಾಗಬೇಕು ಎಂದು ತಿಳಿಸಿದರು.
ಮಾ.2ರಂದು ಐಪಿಎಲ್ ಮಾದರಿಯಲ್ಲಿ ರಾವ್ ಅರೇನಾದಲ್ಲಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ರಾವ್ ಅರೆನಾದ ಮಾಲೀಕ ಆದಿತ್ಯ ಎಸ್ ರಾವ್ ಮತ್ತು ಮತ್ತೋರ್ವ ತಂಡದ ಮಾಲೀಕರಾದ ಮಹಾರುದ್ರಪ್ಪ ಮತ್ತು ತಂಡದ ಎಲ್ಲ ಆಟಗಾರರು ಹಾಗೂ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಸಂತೋಷ್.ಬಿ.ಎ. ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...