Department of Industrial Training and Employment ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಶಿಕಾರಿಪುರ ವತಿಯಿಂದ ಮಾ.3 ಪೂರ್ವಾಹ್ನ 10.30 ರಿಂದ 1.30 ರವೆಗೆ ಗಾಜನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ ಸ್ಕೀಮ್ ಹಾಗೂ ಪ್ರೆöÊಮ್ ಮಿನಿಸ್ಟರ್ ಇಂಟರ್ನ್ಶಿಪ್ ಸ್ಕೀಮ್ ಯೋಜನೆಯ ಬಗ್ಗೆ ಉದ್ದಿಮೆದಾರರಿಗೆ ಹಾಗೂ ತರಬೇತಿದಾರರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು, 21 ರಿಂದ 24 ವರ್ಷದವರಾಗಿರಬೇಕು, ಸೆಕೆಂಡರಿ ಸ್ಕೂಲ್ ಸರ್ಟಿಫಿಕೆಟ್ ಅಥವಾ ಸಮಾನ/ಹೈಯರ್ ಸ್ಕೂಲ್ ಸರ್ಟೀಫಿಕೆಟ್ ಅಥವಾ ಸಮಾನ/ಐಟಿಐ ಕಂಪ್ಲಿಟೆಡ್ ಕ್ಯಾಂಡಿಡೇಟ್/ಡಿಪ್ಲೋಮಾ/ಗ್ರಾಜುಯೇಷನ್ ಡಿಗ್ರಿ ಬಿಎ, ಬಿಎಸ್‌ಸಿ, ಬಿ.ಕಾಂ, ಬಿಸಿಎ, ಬಿಬಿಎ, ಬಿ ಫಾರ್ಮ ಈ ಅರ್ಹತೆಗಳನ್ನು ಹೊಂದಿರುವವರು https://pminternship.mca.gov.in/login/ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಶಿಕಾರಿಪುರ ನೋಡಲ್ ಅಧಿಕಾರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿಜಯಕುಮಾರ್ ಸಪಲಿ ತಿಳಿಸಿದ್ದಾರೆ.
Department of Industrial Training and Employment ಮಾ.3 ರಂದು ಉದ್ದಿಮೆದಾರರು ಮತ್ತು ತರಬೇತಿದಾರರಿಗೆ ಕಾರ್ಯಾಗಾರ
Date: