Sunday, February 23, 2025
Sunday, February 23, 2025

Klive Special Article ಹೊಸ ಹೊಳಹುಗಳ ಬಳುಕಿನಲ್ಲಿ ಸಾಗುವ ” ಸೀತಾಪಹರಣ” ಯಕ್ಷಗಾನ ಪ್ರದರ್ಶನ. ಸಮೀಕ್ಷೆ -ಡಾ.ಮೈತ್ರೇಯಿ‌ ಆದಿತ್ಯ ಪ್ರಸಾದ್

Date:

Klive Special Article ಯಕ್ಷಗಾನವು ನಮ್ಮ ಸಂಸ್ಕೃತಿಯ ಪ್ರತೀಕ. ಅದು ತನ್ನ ವಿಶಿಷ್ಟ ಶೈಲಿಯಿಂದಲೇ ಜನರ ಮನರಂಜಿಸಿದೆ. ಎಲ್ಲ ಪ್ರಕಾರಗಳಿಗೂ ಇರುವಂತೆ ಇದಕ್ಕೊಂದು ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಗೆ ಸಹೃದಯನ ಮನಸ್ಸು ಗೆಲ್ಲುವ ತಾಕತ್ತಿದೆ ರಸಾಸ್ವಾದಕ್ಕೆ ಅದು ಸ್ಪಂದಿಸುತ್ತದೆ. ಹೊಸತನಕ್ಕೆ ತೆರೆದುಕೊಳ್ಳುವ ಭರದಲ್ಲಿ ಒಮ್ಮೊಮ್ಮೆ ಮೂಲ ಸಾಂಪ್ರದಾಯಿಕತೆಯನ್ನು ಬಿಟ್ಟು ಹೋಗುವ ಅಪಾಯಕ್ಕೆ ಸಿಲುಕಿರುವ ಕಲೆಗಳಲ್ಲಿ ಯಕ್ಷಗಾನವೂ ಒಂದು. ಆದರೆ ಇಡಗುಂಜಿಯ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ತನ್ನೆಲ್ಲ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುತ್ತಲೇ ಹೊಸ ಹೊಳಹುಗಳಿಗೆ ತೆರೆದುಕೊಳ್ಳುತ್ತಾ ಅದು UNESCO ದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಅನೇಕ ಕಲಾ ಪ್ರಕಾರಗಳಿದ್ದರೂ ಸಹ ಸಧ್ಯಕ್ಕೆ ಮಾನ್ಯತೆ ದೊರೆತಿರುವುದು ಕೇವಲ 8 ಕಲಾ ಪ್ರಕಾರಗಳಿಗೆ ಮಾತ್ರ. ಅದರಲ್ಲಿ ನಮ್ಮ ಕರ್ನಾಟಕದ ಗಂಡುಮಟ್ಟಿದ ಕಲೆ ಎಂದೇ ಖ್ಯಾತಿಯಾಗಿರುವ ( ಇದೀಗ ಸ್ತ್ರೀಯರು ಪಾಲ್ಗೊಳ್ಳುತ್ತಿರುವ ) ಯಕ್ಷಗಾನವು ಒಂದೆಂಬ ಹೆಮ್ಮೆ ನಮ್ಮನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರಸಿದ್ಧವಾದ ಈ ಕಲೆ ಪ್ರಸ್ತುತ ಎಲ್ಲೆಡೆ ಹರಡುತ್ತಿದೆ. ಇತ್ತೀಚಿನ ಎಷ್ಟೋ ಯಕ್ಷಗಾನ ಮೇಳಗಳು ಪ್ರೇಕ್ಷಕ ಪ್ರಭುಗಳನ್ನು ತನ್ನತ್ತ ಸೆಳೆಯಲು ಮಾಡುವ ಏನೇನೋ ಗಿಮಿಕ್ಕುಗಳು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿಬಿಡುತ್ತಿದೆ. ಹಳೆ ಬೇರಿನೊಂದಿಗೆ ಹೊಸ ಚಿಗುರಿದ್ದರೆ ಮರ ಸೊಗಸೆನಿಸುವಂತೆ ಆಗಬೇಕೆ ಹೊರತು ಪೂರ್ಣ ಹೊಸತನಕ್ಕೆ ತೆರೆದುಕೊಳ್ಳುವುದಲ್ಲ. ಆ ರೀತಿಯಲ್ಲಿ 90ರ ವಸಂತದಲ್ಲಿ ತುಂಬು ಶ್ರೀಮಂತವಾಗಿ ತನ್ನ ಘನತೆ ಗಾಂಭೀರ್ಯವನ್ನು ಹಾಗೆ ಉಳಿಸಿಕೊಂಡು ಬಂದಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಶಿವಾನಂದ ಹೆಗಡೆಯವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. Klive Special Article ಸಾಂಪ್ರದಾಯಿಕತೆಗೆ ಈ ಮೇಳ ಎಷ್ಟು ಒಗ್ಗಿಕೊಂಡಿದೆ ಎಂದರೆ, ಎಷ್ಟೋ ಮನೆಗಳಲ್ಲಿ ತಂದೆ ಕೃಷಿ ಜಮೀನನ್ನು ಮಾಡುತ್ತಿದ್ದರೆ ಅದು ತುಂಬಾ ಕಷ್ಟದ ಕೆಲಸ ನೀನು ಬೇರೆ ಯಾವುದಾದರೂ ಹೆಚ್ಚು ಸಂಬಳ ತರುವ ಉದ್ಯೋಗ ಮಾಡು ಮಗನೇ. ಈ ಕಷ್ಟಗಳು ನಮಗೆ ಕೊನೆಯಾಗಲಿ ಎಂದು ಹೇಳಿ ಕಳುಹಿಸುವ ತಂದೆ ತಾಯಿಯರೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಹಳ್ಳಿಗಳು ಬರಿದಾಗುತ್ತಿವೆ ಕೇವಲ ವೃದ್ಧಾಶ್ರಮಗಳಂತೆ ಆಗುತ್ತಿದೆ. ಹಾಗಾದಾಗ ಮೂಲ ಸ್ರೋತವನ್ನೇ ಮರೆಯುವ ಸ್ಥಿತಿ ಬಂದಿದೆ. ಅದೇ ರೀತಿಯಲ್ಲಿ ನಮ್ಮ ಶಿವಾನಂದಣ್ಣ ಯೋಚನೆ ಮಾಡಿದರೆ ಮುಂದಿನ ತಲೆಮಾರು ರಂಗದ ಮೇಲೆ ಬರದೆ ಅಲ್ಲಿಗೆ ಕೊನೆಯಾಗುವಂತಾಗುತ್ತಿತ್ತು ಈ ಮೇಳ. ಆದರೆ ಬಹು ಸಮರ್ಥವಾಗಿ ತಮ್ಮ ಹೆಗಲಿನ ನೊಗವನ್ನು ಮುಂದೆ ತನ್ನ ಮಗನ ಹೆಗಲಿಗೆ ದಾಟಿಸಿದಂತೆ ಭಾಸವಾಗುತ್ತಿದೆ. ಅಷ್ಟು ಸಾಂಪ್ರದಾಯಿಕತೆಯನ್ನು ರಕ್ತಗತ ಮಾಡಿಕೊಂಡು ಬಂದಿದ್ದಾರೆಂದರೆ ಅತಿಶಯೋಕ್ತಿ ಅಲ್ಲ.

ಇಷ್ಟೆಲ್ಲಾ ಬರೆಯಲು ಕಾರಣವೇನೆಂದರೆ ಇತ್ತೀಚಿಗೆ ಅಭ್ಯುದಯ ಹಾಗೂ ಶ್ರೀಮಯ ಶಿವಮೊಗ್ಗ ಇವರುಗಳು ಸೇರಿ ಆಯೋಜಿಸಿದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗಡೆಯವರಿಗೆ ಸನ್ಮಾನ ಹಾಗೂ ಅದೇ ಮೇಳದ ‘ಸೀತಾಪಹರಣ ‘ ಎಂಬ ಪ್ರಸಂಗ ನೋಡಿ ಬಂದದ್ದರಿಂದ. ನಿಜಕ್ಕೂ ಅದ್ಭುತವಾಗಿ ಮೂಡಿ ಬಂದ ಪ್ರಸಂಗ. ಸೀತಾಪಹರಣ ಎಂಬುದು ತುಂಬಾ ಸಣ್ಣ ಕಥಾ ಹಂದರ ಅದನ್ನು ಪ್ರಸ್ತುತಪಡಿಸಿದ ರೀತಿ ಹೃನ್ಮನಗಳಿಗೆ ರಸದೌತಣ ಮಾಡಿಸಿದಂತೆ ಇತ್ತು. ಕಣ್ಣಿಗೆ ಹಬ್ಬ, ಮನಕ್ಕೆ ಆನಂದ ತಂದಿತು.

Klive Special Article ದಂಡಕಾರಣ್ಯದಲ್ಲಿ ರಾಮ ಸೀತೆ ಲಕ್ಷ್ಮಣರಿರುವಾಗಲೇ ಶೂರ್ಪನಖಿಗೆ ಆದ ಅವಮಾನ. ಅದನ್ನು ಅಣ್ಣ ರಾವಣನಿಗೆ ಹೇಳಿ ತನಗಾದ ನೋವು ಅವಮಾನ ಅದು ರಾಜನಾದ ನಿನಗೂ ಲಂಕೆಗೂ ಅವಮಾನ ಎಂದು ಬಿಂಬಿಸುವುದು. ನಂತರ ರಾವಣ ಮಾರೀಚನ ಬಳಿ ತೆರಳಿ ಸೀತೆ ಅಪಹರಿಸಲು ಸಹಾಯ ಬೇಡಿದಾಗ ರಾಮನ ತಂಟೆಗೆ ಹೋಗಲು ಮೊದಲು ಒಪ್ಪದ ಮಾರೀಚ ರಾಮಬಾಣಕ್ಕೆ ಜೀವ ಅಥವಾ ಜೀವನದ ಗತಿ ಬದಲಿಸುವ ಶಕ್ತಿ ಇದೆ ಎಂದು ಹೇಳಿ ಪರಿಪರಿಯಾಗಿ ರಾಮನ ತಂಟೆಗೆ ಹೋಗುವುದು ಬೇಡ ಎಂದಾಗ ಒಪ್ಪದ ರಾವಣನು ಮಾರೀಚನನ್ನು ಸಾಯಿಸಲು ಮುಂದಾಗುತ್ತಾನೆ. ಆಗ ಮಾರೀಚ ತನಗೆ ಹೇಗೂ ಶಿಕ್ಷೆ ಆಗುವುದಾದರೆ ಅದು ಯಾರಿಂದ ಆಗುತ್ತದೆ ಎಂಬುದು ಸಹ ಮುಖ್ಯ. ಹಾಗಾಗಿ ಹೇಗೂ ಪ್ರಾಣ ಬಿಡುವುದೇ ಆದರೆ ನಾನು ರಾಮನ ಬಾಣಕ್ಕೆ ತುತ್ತಾಗುತ್ತೇನೆ ಎಂದೆನ್ನುವ ಸುಂದರ ಸನ್ನಿವೇಶ, ಇವುಗಳು ಕಟ್ಟಿಕೊಡುತ್ತಿದ್ದ ಮೌಲ್ಯಗಳೆಷ್ಟು ಸೊಗಸು ಎಂದು ಅಂದುಕೊಂಡೆ. ಏಕೆಂದರೆ ಇದೇ ಸನ್ನಿವೇಶ ಇಟ್ಟುಕೊಂಡೆ ಮಕ್ಕಳಿಗೆ ತರಗತಿಯಲ್ಲಿ ಶಿಕ್ಷಕರ ಬಳಿ ಶಿಕ್ಷೆಗೊಳಗಾಗದೆ ಆರಕ್ಷಕರ ಬಳಿ ಶಿಕ್ಷ ಪಡೆಯುವಂತಾಗಿದೆ ಎಂದು ಹೇಳುತ್ತಿರುತ್ತೇನೆ. ಎಷ್ಟು ನಿಜ ಅಲ್ವಾ.
ಈ ಎಲ್ಲವನ್ನು ಅದ್ಭುತವಾಗಿ ನಿರೂಪಿಸುತ್ತಲೇ ಮಾಯಾಜಿಂಕೆಯಾಗಿ ಮಾರೀಚ ಬಂದಾಗ ಮತ್ತಷ್ಟು ಯಕ್ಷಗಾನ ಕಳೆಗಟ್ಟಿತ್ತು. ನಂತರ ಬಂದ ಸನ್ಯಾಸಿಯ ವೇಷದ ರಾವಣ, ಆನಂತರ ತನ್ನ ನಿಜ ರೂಪ ತೋರಿಸುವ ಬಗೆ, ಸೀತೆಯನ್ನು ಕೊಂಡೊಯ್ಯುವ ಸನ್ನಿವೇಶ, ಸಂಪಾತಿಯ ಆಗಮನ ಇವೆಲ್ಲವೂ ರೋಚಕತೆಯಿಂದ ಕೂಡಿ ಕಣ್ಮನಗಳಿಗೆ ಸಂತೋಷ ನೀಡಿ ಅದು ಪ್ರದರ್ಶನವಾಗದೆ ದರ್ಶನದ ಅನುಭವ ತಂದೊಡ್ಡಿತು. ಎಲ್ಲರೂ ಅದ್ಭುತವಾಗಿ ನಟಿಸಿದವರೇ. ಅಲ್ಲಿ ಬಳಸುವ ಸ್ವಚ್ಛ ಕನ್ನಡದ ಭಾಷೆ ನೋಡಿದರೆ ಕಲಾ ಮಾಧ್ಯಮಗಳಲ್ಲಿ ಯಕ್ಷಗಾನದಲ್ಲಿ ಮಾತ್ರ ಸ್ವಚ್ಛ ಕನ್ನಡ ಭಾಷೆ ಜೀವಂತವಾಗಿರುವುದು. ಹಾಗಾಗಿ ಒಟ್ಟಾರೆ ಹೇಳುವುದಾದರೆ ಬಹಳ ದಿನಗಳ ನಂತರ ಶಾಸ್ತ್ರೀಯ ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ನೋಡಲು ಅವಕಾಶ ಮಾಡಿಕೊಟ್ಟ ಸಹೃದಯರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಹಾಗೂ ಪ್ರಸಂಗ ಒಂದು ಚೆನ್ನಾಗಿ ಜನ ವೀಕ್ಷಿಸುವಂತಾಗಲು ಸಿನಿಮಾ ಹಾಡು ಬೇಕು ಗಿಮಿಕ್ಸ್ ಬೇಕು ಪ್ರೇಕ್ಷಕರು ಕೇಳ್ತಾರೆ ಅದನ್ನು ಅಂತೆಲ್ಲ ಅಭಿಮಾನದಿಂದ ಹೇಳುವವರು ಇಡಗುಂಜಿ ಮೇಳದ ಆಟವನ್ನು ಒಮ್ಮೆ ನೋಡಬೇಕು. ಜನ ಮೆಚ್ಚಿ ಕುತೂಹಲದಿಂದ ವೀಕ್ಷಿಸುವಂತೆ ಮಾಡಿದ 90ರ ಸಂಭ್ರಮದಲ್ಲಿರುವ ಮೇಳಕ್ಕೂ ಅಭಿನಂದನೆಗಳು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ.
ಚಿತ್ರಕೃಪೆ : ಸಿದ್ದಾರ್ಥ ಎ ಕಶ್ಯಪ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ :ಹಿತರಕ್ಷಣಾ ವೇದಿಕೆ ಮುಖ್ಯಸ್ಥ ಸುರೇಶ್

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು...

ಫೆ.25 ಎಂದು ಆಶ್ರಯ ಮನೆಗಳ ಹಂಚಿಕೆ ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಮಾಹಿತಿ

ಫೆ.25 ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ...