Wednesday, January 22, 2025
Wednesday, January 22, 2025

SN Channabasappa ವೇಮನರ ವಚನಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಲಿ- ಶಾಸಕ ಚನ್ನಬಸಪ್ಪ

Date:

SN Channabasappa ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಜನಮಾನಸಕ್ಕೆ ತಲುಪಿಸುವ ವೇಮನರ ಜೀವನದ ಆದರ್ಶಗಳನ್ನು ನಾವು ಪಾಲನೆ ಮಾಡಬೇಕಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘದ ಸಹಯೋಗದೊಂದಿಗೆ ಭಾನುವಾರ ನಗರದ ಕುವೆಂಪು ರಂಗಮಂದಿರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇಮನರ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಬೇಕಿದೆ. ಆ ಮೂಲಕ ವಚನ ಸಾಹಿತ್ಯ, ಕವಿ ಪರಂಪರೆಯನ್ನು ಒಪ್ಪಿಕೊಂಡು ಮುಂದೆ ತೆಗೆದುಕೊಂಡು ಹೊಗಬೇಕಿದೆ ಎಂದರು.

ಮೂಲತಃ ಆಂಧ್ರಪ್ರದೇಶದವರಾದ ವೇಮನ ಅವರು ವಚನ ಸಾಹಿತ್ಯವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಿರುವಳ್ಳುವರ್‌ ಮಾದರಿಯಲ್ಲಿ ವೇಮನರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವೇಮನ ಮಾಡಿದ ಅನೇಕ ಒಳ್ಳೆಯ ಸಂಗತಿಗಳನ್ನು ವಚನಗಳ ಮೂಲಕ ತೋರಿಸಿದ್ದಾರೆ.

ಕರ್ನಾಟಕ ಸರ್ಕಾರ ವೇಮನವರನ್ನು ಬೇರೆ ರಾಜ್ಯದವರು ಎಂಬ ಆಲೋಚನೆ ಮಾಡದೇ ಪ್ರಾಶಸ್ತ್ಯ ನೀಡಬೇಕು. ಭಾಷೆ ಬೇರೆ ಇರಬಹುದು ಆದರೆ ಭಾವನೆ ಒಂದೇ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೂಡ ಮುತುವರ್ಜಿ ವಹಿಸಿ ವೇಮನರ ಕುರಿತು ಕೈಪಿಡಿಯನ್ನು ಸಿದ್ಧಪಡಿಸಬೇಕು.
ವರ್ತಮಾನದಲ್ಲಿ ಮೊಬೈಲಿನ ಗೀಳು ಹೆಚ್ಚಾಗಿ ಅದರಿಂದ ಇಂದಿನ ಯುವ ಸಮೂಹಕ್ಕೆ ವಚನ, ಸಾಹಿತ್ಯಗಳ ಜ್ಞಾನವೇ ಇಲ್ಲದಂತಾಗಿದೆ. ಅವರ ನೆನಪಿನ ಶಕ್ತಿಯೆನೆಲ್ಲಾ ಹಾಳು ಮಾಡುತ್ತಿದೆ, ಬಸವಣ್ಣ, ಸರ್ವಜ್ಞ, ವೇಮನ ಸಮಕಾಲೀನರಾದರೂ ವೇಮನ ಯುವ ಸಮೂಹಗಳನ್ನು ಹೆಚ್ಚಾಗಿ ತಲುಪಲಿಲ್ಲ ಹಾಗಾಗಿ ಪುಸ್ತಕದ ಮೂಲಕ ಅವರನ್ನು ಜನಮಾನಸಕ್ಕೆ ತಲುಪಿಸಬೇಕಿದೆ ಎಂದರು.

SN Channabasappa ನಿವೃತ್ತ ಶಿಕ್ಷಣಾಧಿಕಾರಿ ಆರ್‌. ರತ್ನಯ್ಯ ಮಾತನಾಡಿ, ವೇಮನ 15 ರಿಂದ 17 ಶತಮಾನದೊಳಗೆ ಇದ್ದರೆಂದು ಇಂಗ್ಲಿಷಿನ ಕವಿಯೊಬ್ಬರು ಉಲ್ಲೇಖಿಸಿದ್ದಾರೆ.
ಆತನ ಕುರಿತು 5 ಸಾವಿರ ಪದ್ಯ ಇರುವ ಪುಸ್ತಕ ಇದೆ ಎಂದರು.

ವೇಮನ ರೆಡ್ಡಿ ಕುಲದಲ್ಲಿ ಜನಿಸಿದರೂ‌ ಆತನೊಬ್ಬ ಮಹಾಯೋಗಿ. ಆಧ್ಯಾತ್ಮಿಕ, ಸಾಹಿತ್ಯ ಪಾರಂಗತ ವಾದವನ್ನು ಸಮಾಜಕ್ಕೆ ತಿಳಿಸಿದವನು. ಈಗಲೂ ಕೂಡ ಆಂಧ್ರ ಮತ್ತು ತೆಲಂಗಾಣದಲ್ಲಿ ರೈತರು ನಾಟಿ ಅಥವಾ ಬೇಸಾಯ ಮಾಡುವಾಗ ಸಹಜನಾಗಿ ವೇಮನ ಪದ್ಯವನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ. ಆ ಮೂಲಕ ಅವರು ಪ್ರಜಾಕವಿ ಆಗಿದ್ದಾರೆ. ತನ್ನ ವೇದಾಂತ ಸಾರಾಂಶವನ್ನು ಆಂಧ್ರದವರೆಗೂ ಕಾಪಿಟ್ಟುಕೊಂಡಿದ್ದಾರೆ.

ವಚನಗಳ ಮೂಲಕ ಜ್ಞಾನ, ಆತ್ಮಜ್ಞಾನವನ್ನು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿನ ವಿಂಡಂಬನೆ ವಿಶ್ಲೇಷಿಸಿ ಗಂಡ, ಹೆಂಡತಿ, ಮಕ್ಕಳು ಇವರುಗಳ ಜವಬ್ದಾರಿ ಏನೆಂದು ತಿಳಿಸಿದ್ದಾರೆ ಎಂದರು.
ಯುವ ಪಿಳೀಗೆಗೆ ವೇಮನ ಯಾರೆಂದು ತಿಳಿದಿಲ್ಲ. ಅದನ್ನು ತಿಳಿಸುವ ಜವಬ್ದಾರಿ ರೆಡ್ಡಿ ಸಮುದಾಯದ್ದಾಗಿದೆ. ಆತನ ಬಗ್ಗೆ ಕನ್ನಡದಲ್ಲಿ ಪುಸ್ತಕ ಇದೆ. ಅದನ್ನು ಓದುವಂತೆ ಪ್ರೇರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಭೀಮಾ ರೆಡ್ಡಿ ಮಾತನಾಡಿ, ವೇಮನರು ದೊಡ್ಡ ಭಂಡಾರವಿದ್ದಂತೆ. ತಿರುವಳ್ಳುವರ್, ಸರ್ವಜ್ಞ ರಂತೆ ವೇಮನ ರನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಹಾದಿಯಲ್ಲೆ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್‌.ಉಮೇಶ್‌, ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷ ಮೋಹನ್‌ ರೆಡ್ಡಿ ಹಾಗೂ ರೆಡ್ಡಿ ಸಂಘದ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....