Rotary Club Shimoga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.
ಗೋಪಾಳದಲ್ಲಿನ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕಂಪಾನಿಯೋ ಅವರ ಸಹಯೋಗದಲ್ಲಿ ಆಯೋಜಿಸಿದ್ದ 14 ದಿನಗಳ ಉಚಿತ ಫುಟ್ ತೆರಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫುಟ್ ತೆರಪಿಂದ ರಕ್ತ ಸಂಚಾರ ಮತ್ತು ನರಗಳ ದೌರ್ಬಲ್ಯಕ್ಕೆ ಸಹಕಾರಿಯಾಗಲಿದೆ. ವಿವಿಧ ಅಂಗಗಳಲ್ಲಿ ಪಾದವು ಸಹ ಒಂದು. ಪಾದಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಹಾಗೂ ಪಾದಗಳಿಗೆ ಮಸಾಜ್ ಮಾಡುವುದರಿಂದ ಹಲವು ಕಾಯಿಲೆಗಳು ನಿವಾರಣೆ ಆಗುತ್ತವೆ. ಅರ್ಧ ತಾಸು ತೆರೆಪಿ ತೆಗೆದುಕೊಳ್ಳುವುದರಿಂದ ಐದು ಕಿಲೋಮೀಟರ್ ವಾಕ್ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
Rotary Club Shimoga ಫುಟ್ ತೆರಪಿಯು ಹಲವು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರಕ್ಕೆ ಸಹಕಾರಿಯಾಗಲಿದೆ. ಬಿಪಿ ಶುಗರ್ ಥೈರಾಯ್ಡ್ ಸ್ನಾಯುಗಳ ಎಳೆತ ಮತ್ತು ನರ ರೋಗದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ. ರೋಟರಿ ಸಂಸ್ಥೆಯು ಅನೇಕ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದು, ಈ ಬಾರಿ ಕಂಪಾನಿಯೋ ಸಂಸ್ಥೆಯ ಉನ್ನತ್ ಅವರ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಹಾಯಕ ಗವರ್ನರ್ ರವಿ ಕೋಟೊಜಿ, ಜಿ.ವಿಜಯಕುಮಾರ್, ರಮೇಶ್.ಎನ್, ಗುರುರಾಜ್, ಸ್ಪಂದನ ಹೊಳ್ಳ, ಧರ್ಮೇಂದ್ರ ಸಿಂಗ್, ಸೆಂಟ್ರಲ್ ಕ್ಲಬ್ಬಿನ ಸದಸ್ಯರು ಮತ್ತು ಕಂಪಾನಿಯೋ ಉನ್ನತ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.