SC/ ST ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಮತ್ತು ಪಿಸಿಆರ್ ಕಾಯ್ದೆಯ ಬಗ್ಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘ/ಸಂಸ್ಥೆಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ/ಅರಿವು ಮೂಡಿಸಲು ವಿಚಾರಗೋಷ್ಟಿ ಮತ್ತು ಕಾರ್ಯಾಗಾರಗಳನ್ನು ನಡೆಸಲು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ವಯಂ ಸೇವಾ ಸಂಘ/ಸಂಸ್ಥೆಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ/ಸಂಸ್ಥೆಗಳವರು ದಿ: 16-01-2025 ರ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬನಗರ ಶಿವಮೊಗ್ಗ ಈ ಕಚೆರಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು.
SC/ ST ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ, ನವೀಕರಣ ಪ್ರಮಾಣ ಪತ್ರ, ಕಳೆದ 3 ವರ್ಷದ ಆಡಿಟ್ ರಿಪೋರ್ಟ್(2021-22 ರಿಂದ 23-24 ರರೆಗೆ), ಸಂಘ ಸಂಸ್ಥೆಯು ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ದಿಗಾಗಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದೃಢೀಕೃತ ದಾಖಲೆ, ಈ ಹಿಂದೆ ಸಂಘ/ಸಂಸ್ಥೆಯು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಪತ್ರಿಕಾ ವರದಿ, ಸಂಸ್ಥೆಯು ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989 ರ ಅನುಷ್ಟಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವ ಬಗ್ಗೆ ದಾಖಲೆಗಳು, ಪ್ರಕಟಣೆಗಳು, ಕರಪತ್ರ, ಭಿತ್ತಿಪತ್ರ ಇತ್ಯಾದಿಗಳನ್ನು ಲಗತ್ತಿಸಿ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.