Puttaraja Gavai ಶಿವಮೊಗ್ಗ ನಗರದ ಸಾಗರ ರಸ್ತೆ ಆಟೋ ಕಾಂಪ್ಲೆಕ್ಸ್ ಪಕ್ಕದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯದಲ್ಲಿ (ಶ್ರೀ ವೀರೇಶ್ವರ ಪುಣ್ಯಾಶ್ರಮ) ಡಿ. 20ರ ನಾಳೆ ಸಂಜೆ 6:30 ರಿಂದ ಗಾನಲಹರಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.
Puttaraja Gavai ಪಂಡಿತ್ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ ವೇ. ಮೂ. ಮಹಾಂತಯ್ಯ ಅಸ್ತಿçಗಳು ಭಾಗವಹಿಸಲಿದ್ದಾರೆ. ಶ್ರೀರಾಮ ಕ್ಷತ್ರೀಯ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಲಿದ್ದು, ಆಶ್ರಮದ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಧಾರವಾಡದ ಹಿಂದೂಸ್ತಾನಿ ಯುವ ಗಾಯಕ ಬಸವರಾಜ ವಂದಲಿ ಅವರಿಂದ ಸಂಗೀತ ಸೇವೆ ನಡೆಯಲಿದೆ. ರಾಮಣ್ಣ ಬಜಂತ್ರಿ ಅವರಿಂದ ಶಹನಾಯಿ, ವೀರಭದ್ರಯ್ಯ ಶಾಸ್ತ್ರೀ ವೇದ ಘೋಷ, ತುಕಾರಾಮ ರಂಗದೋಳ್, ವಿನಾಯಕ ಭಟ್ ತಬಲ, ರವಿಶಂಕರ ಆಚಾರ್ ಹರ‍್ಮೋನಿಯಂ, ಶಿವರಾಜಪ್ಪ, ಸಿದ್ದಪ್ಪ ಬಡಿಗೇರ, ಇಂದಿರಾ ಸಾಥ್ ನೀಡಲಿದ್ದಾರೆ. ಆಸಕ್ತರು ಪಾಲ್ಗೊಳ್ಳಲು ಕೋರಿದೆ.