Sunday, December 7, 2025
Sunday, December 7, 2025

Department of Science and Technology ಗಣಿತದ ಬಗ್ಗೆ ಮಕ್ಕಳಲ್ಲಿನ ನಿರಾಸಕ್ತಿ ಭಯ ದೂರಗೊಳಿಸಿ- ಸೈಯದ್ ರಹಮತ್ ಪ್ಯಾರಿ

Date:

Department of Science and Technology ಗಣಿತ ಕ್ಷೇತ್ರಕ್ಕೆ ಆರ್ಯಭಟ, ಬ್ರಹ್ಮಗುಪ್ತ, ವರಹಮೀರ, ಭಾಸ್ಕರ, ಶ್ರೀರಾಮಾನುಜನ್ ಸೇರಿದಂತೆ ಭಾರತೀಯ ಮಹನೀಯರನೇಕರು ನೀಡಿದ ಕೊಡುಗೆಗಳಿಂದ ಗಣಿತಕ್ಷೇತ್ರ ಶ್ರೀಮಂತಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀಮತಿ ಸೈಯದ್ ರಹಮತ್ ಪ್ಯಾರಿ ಅವರು ಹೇಳಿದರು.

ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ಗಣಿತದ ಮಹತ್ವದ ಕುರಿತು ಅರಿವು ಮೂಡಿಸಲು ಕೇಂದ್ರ ಸರ್ಕಾರವು ಪ್ರತಿವರ್ಷ ಡಿಸೆಂಬರ್ 22ರಂದು ಗಣಿತ ದಿನಾಚರಣೆಯನ್ನಾಗಿ ಆಚರಿಸಲು ಮಾರ್ಗದರ್ಶನ ನೀಡಿದೆ ಎಂದ ಅವರು, ಪ್ರತಿ ವ್ಯಕ್ತಿಯ ದೈನಂದಿನ ಬದುಕು ಗಣಿತದೊಂದಿಗೆ ಆರಂಭಗೊಂಡು ಗಣಿತದೊಂದಿಗೆ ಅಂತ್ಯಗೊಳ್ಳುತ್ತದೆ. ಇಷ್ಟೊಂದು ಮಹತ್ವದ ವಿಷಯ ತಮಗೆ ಅರಿವಿಲ್ಲದಂತೆ ನಮ್ಮೆಲ್ಲರ ಬದುಕಿನೊಂದಿಗೆ ಮಿಳಿತಗೊಂಡಿದೆ ಎಂದವರು ನುಡಿದರು.

ಗಣಿತ ವಿಷಯವೆಂಬುದು ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಕಬ್ಬಿಣದಂತಾಗಿದೆ. ಗಣಿತದ ಕಲಿಕೆಗೆ ತಾತ್ಸಾರ ಸಲ್ಲದು ಎಂದ ಅವರು, ಮಕ್ಕಳಲ್ಲಿ ಗಣಿತ ಕಲಿಕೆಯಲ್ಲಿನ ನಿರಾಸಕ್ತಿ – ಭಯವನ್ನು ದೂರಗೊಳಿಸಿ, ಸಕಾರಾತ್ಮಕ ಭಾವನೆ ಮೂಡಿಸುವ ಮೂಲಕ ಹಾಗೂ ನಿರಂತರ ಕಲಿಕೆಯಿಂದ ಗಣಿತವನ್ನು ಸರಳವಾಗಿ ಕಲಿಯಬಹುದಾಗಿದೆ. ಈ ವಿಷಯವನ್ನು ಸವಾಲಾಗಿ ಸ್ವೀಕರಿಸಿ ಸಾಧನೆಗೆ ಮುಂದಾದಲ್ಲಿ ವಿದ್ಯಾರ್ಥಿಗಳಿಗೆ ಖಂಡಿತಾ ಯಶಸ್ಸು ದೊರೆಯಲಿದೆ ಎಂದವರು ನುಡಿದರು.

Department of Science and Technology ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರು ಮಾತನಾಡಿ, ಗಣಿತದ ಅನೇಕ ಪ್ರಕಾರಗಳನ್ನು ಪ್ರಪಂಚಕ್ಕೆ ಪರಿಚಯಿಸಿದ ಗಣಿತಜ್ಞ ಶ್ರೀರಾಮಾನುಜನ್ ಅವರು ಭಾರತದ ಗಣಿತದ ಪಿತಾಮಹ ಎಂದೇ ಗುರುತಿಸಲ್ಪಡುತ್ತಾರೆ. ಈ ತಮ್ಮ ಅತ್ಯಲ್ಪ ಜೀವಿತಾವಧಿಯಲ್ಲಿ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಚಿರಂತನವಾದುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಗಣಿತದ ಮಾದರಿಗಳನ್ನು ಗಣ್ಯರು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಗಣಿತಜ್ಞ ಶ್ರೀರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಕೆ.ಎಮ್.ಮೋಹನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿ.ವಿ.ಎಸ್.ಸಂಯುಕ್ತ ಪದವಿಪೂರ್ವ ಕಾಲೇಜಿನ ಗಣಿತ ಶಿಕ್ಷಕ ಕೇಶವಪ್ರಸಾದ್, ಭದ್ರಾವತಿ ಸಿಲ್ವರ್ ಜ್ಯುಬಿಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಪ್ರಾಯೋಗಿಕ ಪ್ರಾತ್ಯಕ್ಷಿತೆಗಳೊಂದಿಗೆ ವಿಶೇಷ ಉಪನ್ಯಾಸ ನೀಡಿದರು.

ಗಣಿತ ಕಲಿಕೆಯ ಸರಳ ವಿಧಾನಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಶಂಕರ್, ಶಿಕ್ಷಕರಾದ ಗಂಗಾನಾಯ್ಕ್, ಶ್ರೀಮತಿ ಮೀನಾಕ್ಷಿ ಹೆಚ್.ಟಿ. ಶ್ರೀಮತಿ ಮಹಾದೇವಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...