Karnataka Dalitha Sangarsha Samiti ಕರ್ನಾಟಕದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಡಾ. ಜಿ ಪರಮೇಶ್ವರ್ ರವರು ಗೃಹ ಮಂತ್ರಿ ಆಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೀರಿ. ಆದಕಾರಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರವೂ ಕೂಡ ಒಂದು. ಶಿವಮೊಗ್ಗ ಜಿಲ್ಲೆಯು ಅತೀ ಹೆಚ್ಚಿನ ಮತೀಯ ಸೂಕ್ಷ್ಮತೆಯಿಂದ ಕೂಡಿದ್ದಾಗಿರುವುದರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸ ಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕೋರುತ್ತದೆ.
ಶಿವಮೊಗ್ಗ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ಆರೋಪಿಗಳನ್ನು ಅರೆಸ್ಟ್ ಮಾಡಿದಾಗ ಅವರನ್ನು ಜೈಲಿಗೆ ಬಿಟ್ಟು ಬರಬೇಕೆಂದರೆ ಬೈಕ್‌ಗಳಲ್ಲಿ ಬಿಟ್ಟು ಬರುವುದು ಆಗುತ್ತಿದೆ. ಹಾಗೂ ಏನಾದರೂ ಇನ್ಸಿಡೆಂಟ್ ಆದರೆ ಸ್ಪಾಟ್ ಗೆ ಹೋಗಲು ಮತ್ತು ಸಿಬ್ಬಂದಿಗಳನ್ನ ಸ್ಪಾಟ್ ಗೆ ಕರೆದುಕೊಂಡು ಹೋಗಲು ವಾಹನಗಳ ಅವಶ್ಯಕತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಪೂರೈಸಬೇಕು.
Karnataka Dalitha Sangarsha Samiti ಶಿವಮೊಗ್ಗ ಹೆಚ್ಚು ವಾಹನ ದಟ್ಟಣೆ ಇರುವಂತಹ ನಗರ. ಟ್ರಾಫಿಕ್ ಸ್ಟೇಷನ್ಗಳಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚು ಇದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಚ್ಚು ಇನ್ಸು÷್ಟçಮೆಂಟ್ಸ್, ಸೈನ್ ಬೋರ್ಡ್ ಇತ್ಯಾದಿಗಳನ್ನು ನೀಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೈಂ ಸಂಖ್ಯೆ ಹೆಚ್ಚಿರುವುದರಿಂದ ಠಾಣೆಗಳಲ್ಲಿ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಗಳ ಅಗತ್ಯ ಮತ್ತು ಅವಶ್ಯಕತೆ ಇರುವುದರಿಂದ ತಾವುಗಳು ಸಿಬ್ಬಂದಿಗಳನ್ನು ನೇಮಕ ಮಾಡಬೇಕು.
ಜಿಲ್ಲೆ ಗೊಂದು ಫಾರೆನ್ಸಿಕ್ ಟೀಮ್ ನೀಡಿದ್ದೀರಿ.ಅವರುಗಳ ಕೆಲಸ ನಿರ್ವಹಣೆಗೆ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇರುವುದರಿಂದ ಮೇಲ್ಕಂಡ ಹಕ್ಕುತಾಯಗಳನ್ನು ತಾವುಗಳು ಈಡೇರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.
Karnataka Dalitha Sangarsha Samiti ಶಿವಮೊಗ್ಗ ನಗರ ಪೋಲಿಸ್ ಇಲಾಖೆಗೆ ತುರ್ತು ಅಗತ್ಯ ಪೂರೈಸಲು ರಾಜ್ಯ ಗೃಹಸಚಿವರಿಗೆ ದಸಂಸ ಮನವಿ
Date: