Klive Special Article ಬದುಕು ಕಟ್ಟಿಕೊಳ್ಳಲು ನೆರವಾದ ‘ಗೃಹಲಕ್ಷಿö್ಮ’ ಯೋಜನೆ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷಿö್ಮ’ ಯೋಜನೆಯು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವರದಾನವಾಗಿದೆ.
ಉದ್ಯೋಗ, ಸ್ವಂತ ವೃತ್ತಿಯಲ್ಲಿ ತೊಡಗದೇ ಇರುವ ಅನೇಕ ಮಹಿಳೆಯರು ತಾವು ಬಯಸಿದ ವಸ್ತು/ಸೇವೆ ಪಡೆಯಲು ಇಂದಿಗೂ ತಂದೆ, ಗಂಡನ ಮೇಲೆ ಅವಲಂಬಿತರಾಗಿದ್ದು ಸರ್ಕಾರದ ಈ ಯೋಜನೆಯು ಅವರನ್ನು ಆರ್ಥಿಕವಾಗಿ ಸಲಬರನ್ನಾಗಿಸಿದೆ.
ಆಗಸ್ಟ್ 30 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಮೈಸೂರಿನಲ್ಲಿ ಚಾಲನೆ ನೀಡಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2000 ಹಣವನ್ನು ಜಮೆ ಮಾಡುತ್ತಿದೆ ಸರ್ಕಾರ.
ಜಿಲ್ಲೆಯಲ್ಲಿ ಒಟ್ಟು 424570 ಪಡಿತರ ಚೀಟಿಗಳು ಇದ್ದು, ಇದರಲ್ಲಿ 385921 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿರುತ್ತಾರೆ ಹಾಗೂ ಡಿಬಿಟಿ ಮೂಲಕ 384717 ಫಲಾನುಭವಿಗಳ ಖಾತೆಗೆ ಅಕ್ಟೋಬರ್ ಅಂತ್ಯದವರೆಗೂ ಭತ್ಯೆ ಜಮೆ ಮಾಡಲಾಗಿದೆ. ಇ-ಕೆವೈಸಿ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಿ, ಅರ್ಹ ಮಹಿಳೆಯರಿಗೆ ಸಹ ಗೃಹಲಕ್ಷ್ಮೀ ಹಣ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.
ಮಹಿಳೆಯರು ತಮ್ಮ ವೈದ್ಯಕೀಯ ಖರ್ಚು, ಮಕ್ಕಳ ಶಾಲೆ ಶುಲ್ಕ, ದಿನಸಿ ಖರೀದಿ, ಇತರೆ ಖರ್ಚುಗಳು ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗಿರುತ್ತಿದ್ದರೆ ಇನ್ನೂ ಕೆಲ ಮಹಿಳೆಯರು ಇದೇ ಹಣವನ್ನು ಕೂಡಿಟ್ಟು ಸ್ವಂತ ವ್ಯಾಪಾರ, ಹೈನುಗಾರಿಕೆ, ಇತರೆ ಆದಾಯ ತರುವ ಚಟುವಟಿಕೆಯನ್ನು ಆರಂಭಿಸಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ಕುಟುಂಬ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಯಜಮಾನಿಯರಿಗೆ ಸರ್ಕಾರ ನೀಡಿದ ಈ ಆರ್ಥಿಕ ಸ್ವಾವಲಂಬನೆ ಜೀವನದಲ್ಲಿ ಭರವಸೆ ಮತ್ತು ಪುಷ್ಟಿ ನೀಡಿದೆ.
ಫ್ಯಾನ್ಸಿ ಅಂಗಡಿ ತೆರೆದುಕೊಟ್ಟ ದಾಕ್ಷಾಯಿಣಿ ಪಾಟೀಲ..
ಭದ್ರಾವತಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಎಂಬುವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟು, ಸೊಸೆಗಾಗಿ ಮನೆಯ ಬಾಗಿಲಲ್ಲೇ ಫ್ಯಾನ್ಸಿ ಅಂಗಡಿ ತೆರೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ 20 ಸಾವಿರ ಹಣವನ್ನು ದಾಕ್ಷಾಯಿಣಿ ಅವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಸೊಸೆ ಕುಮಾರಿಗೆ ಅದೇ ಹಣದಲ್ಲಿ ಫ್ಯಾನ್ಸಿ ಅಂಗಡಿಯನ್ನು ತೆರೆದು ಕೊಟ್ಟಿದ್ದಾರೆ.
ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದು, ಇಂತಹ ಘಟನೆಗಳು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿವೆ.
ಸ್ವಂತ ಅಂಗಡಿ ತೆರೆದ ಕಾವ್ಯ:
ಭದ್ರಾವತಿ ತಾಲೂಕಿನ ಜಯನಗರ ಗ್ರಾಮದ ಫಲಾನುಭವಿ ಕಾವ್ಯ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದಿದ್ದ ಹಣವನ್ನು ಕೂಡಿಟ್ಟು, ಸ್ವಂತ ಅಂಗಡಿಯನ್ನು ತೆರೆದು ಸಣ್ಣದಾಗಿ ವ್ಯಾಪಾರ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 10 ಕಂತಿನಲ್ಲಿ ಬಂದಿದ್ದ 20 ಸಾವಿರ ಹಣವನ್ನು ಫಲಾನುಭವಿಯವರು ಬ್ಯಾಂಕ್ ಖಾತೆಯಲ್ಲಿಯೇ ಕೂಡಿಟ್ಟಿದ್ದರು. ಸ್ವಂತ ಉದ್ಯೋಗ ಆರಂಭಿಸಲು ಯೋಚಿಸಿದ್ದ ಅವರು ತಮ್ಮ ಸಣ್ಣಪುಟ್ಟ ಇತರೆ ಉಳಿತಾಯದೊಂದಿಗೆ ಗೃಹಲಕ್ಷಿö್ಮ ಹಣವನ್ನೂ ಸೇರಿಸಿ ಅಂಗಡಿಯನ್ನು ತೆರೆದುಕೊಂಡಿದ್ದಾರೆ.
Klive Special Article ಹಸು ಖರೀದಿಸಿದ ಅನಿತಾ :
ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮದ ಅನಿತಾ ಗೃಹಲಕ್ಷ್ಮಿ ಹಣವನ್ನು ಖರ್ಚು ಮಾಡಿದರೆ ಖಾಲಿ ಆಗುತ್ತದೆ ಎಂದು 9 ತಿಂಗಳ ಹಣ ಅಂದರೆ ರೂ.18 ಸಾವಿರ ಹಣವನ್ನು ಕೂಡಿಟ್ಟು, ಹಸುವನ್ನು ಖರೀದಿ ಮಾಡಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಹಾಗೂ ಪ್ರತಿ ತಿಂಗಳು ಜಮೆಯಾಗುವ ಗೃಹಲಕ್ಷಿö್ಮ ಹಣದೊಂದಿಗೆ ಮತ್ತುಷ್ಟು ಸೇರಿಸಿ ಕಿಡ್ನಿ ಸಮಸ್ಯೆ ಇದ್ದ ಪತಿಗೆ ಆಪರೇಷನ್ ಮಾಡಿಸಿದ್ದಾರೆ.
ಈ ಬಗ್ಗೆ ಅವರು ಮಾತನಾಡಿ, ಆಪರೇಷನ್ ವೆಚ್ಚವನ್ನು ಹಸುವಿನ ಹಾಲು ಮಾರಿ ಭರಿಸುತ್ತಿದ್ದೇನೆ. ಇಂಥ ಯೋಜನೆ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಮತ್ತಷ್ಟು ಜಯ ಸಿಗಲಿ. ಬಡವರಿಗೆ ಇನ್ನಷ್ಟು ಯೋಜನೆಗಳನ್ನು ನೀಡಲಿ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡವರು ಮಾಡಲಿ. ಆದರೆ, ನಮ್ಮಂಥ ಬಡವರಿಗೆ ಅನುಕೂಲ ಆಗಿದೆ. ಗ್ಯಾರಂಟಿಗಳನ್ನು ಇದೇ ರೀತಿ ಮುಂದುವರಿಸಲಿ ಎಂದು ಮನವಿ ಮಾಡಿದ್ದಾರೆ.
ಮನೆ ರಿಪೇರಿ ಮಾಡಿಸಿದ ವಂದನ ಜೈನ್:
ಸಾಗರ ತಾಲ್ಲೂಕು, ಆವಿನಹಳ್ಳಿ ಗ್ರಾಮದ ವಂದನ ಜೈನ್ ಇವರಿಗೆ ಗಂಡ ಹಾಗೂ ಮಕ್ಕಳು ಯಾರು ಇರುವುದಿಲ್ಲ. ಇವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಹಾಗೂ ಜೀವನ ನಡೆಸಲು ತುಂಬ ಕಷ್ಟಕರವಾಗಿದ್ದು ಇವರಿಗೆ ಯಾವುದೇ ಜಮೀನು ಆಸ್ತಿ ಇರುವುದಿಲ್ಲ. ಕೂಲಿ ಕಾರ್ಮಿಕರಾಗಿರುತ್ತಾರೆ. ಮತ್ತು ದುಡಿಯಲು ಕೂಡ ಅಶಕ್ತರಾಗಿರುತ್ತಾರೆ ಇವರು ವಾಸವಾಗಿರುವ ಮನೆ ಮಳೆ ಬಂದರೆ ಸೋರುತ್ತದೆ. ಮನೆಗೆ ಹೊದಿಸಿರುವ ತಗಡುಗಳು ಗಾಳಿಗೆ ಹಾರಿ ಹೋಗಿ ಜೀವನ ತುಂಬಾ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಇವರಿಗೆ ಸಹಕಾರಿಯಾಗಿದೆ. ಗೃಹಲಕ್ಷ್ಮಿ ಹಣವನ್ನು ಒಟ್ಟುಗೂಡಿಸಿ ಮನೆಯನ್ನು ರಿಪೇರಿ ಮಾಡಿಸುತ್ತಿದ್ದು, ಸರ್ಕಾರಕ್ಕೆ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ಹೀಗೆ ಎಲ್ಲ ಮನೆಯ ಯಜಮಾನಿಯರು ಗೃಹಲಕ್ಷಿö್ಮ ಹಣವನ್ನು ತಾವು ಹಾಗೂ ತಮ್ಮ ಕುಟುಂಬಗಳ ಅಗತ್ಯ ಖರ್ಚುಗಳಿಗೆ, ಆದಾಯ ತರುವಂತಹ ಚಟುವಟಿಕೆಗಳಲ್ಲಿ ಸದ್ವಿನಿಯೋಗಪಡಿಸುತ್ತಿರುವುದು ಅಭಿನಂದನೀಯವಾಗಿದ್ದು, ಯೋಜನೆ ಅನುಷ್ಟಾನದ ಸಾರ್ಥಕತೆಗೆ ಕೈಗನ್ನಡಿಯಾಗಿದೆ.
- ಭಾಗ್ಯ ಎಂ ಟಿ
ವಾರ್ತಾ ಸಹಾಯಕರು, ವಾರ್ತಾ ಇಲಾಖೆ