Datta Jayanti 2024 “ಚಿತ್ತ ಏಕಾಗ್ರತೆಯು ಭಕ್ತಿಗೆ ಅವಶ್ಯ” -ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ- (“ಅಸೂಯಾ ರಹಿತರು ದೇವರಿಗೆ ಪ್ರೀತಿ ಪಾತ್ರರು” ಚಿಂತಕ ಜಗನ್ನಾಥ ನಾಡಿಗೇರ್) ದಾವಣಗೆರೆ.ಡಿ.14. ಚಾಂಚಲ್ಯ ಮುಕ್ತ ಏಕಾಗ್ರ ಮನವು ಭಗವದ್ ಭಕ್ತಿಗೆ ಅವಶ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು. ಅವರಿಂದು ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರದಲ್ಲಿ ನೆರವೇರಿದ ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬ್ರಹ್ಮ ವಿಷ್ಣು ಶಿವ ಅಂದರೆ ಸೃಷ್ಟಿ ಸ್ಥಿತಿ ಲಯಗಳ ಸಮ್ಮಿಲನವಾಗಿರುವ ದತ್ತಾತ್ರೇಯರ ಸಂಕೇತ ವೆಂದರೆ ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಸೃಷ್ಟಿಯಾಗುತ್ತಿರಬೇಕು ಇದು ಬ್ರಹ್ಮ ಮುಖದ ಸಂಕೇತ, ಅಂತಹ ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಉಳಿದಿರಬೇಕು ಇದು ವಿಷ್ಣು ಮುಖದ ಸಂಕೇತ, ಅಜ್ಞಾನ ಅಸಂಬದ್ಧ ವಿಚಾರಗಳು ನಾಶವಾಗಬೇಕು ಇದು ಶಿವ ಮುಖದ ಸಂಕೇತವಾಗಿದೆ ಎಂದರು. ಚಿಂತಕ ಜಗನ್ನಾಥ ನಾಡಿಗೇರ್ ಮಾತನಾಡಿ ಅಸೂಯೆ ಇಲ್ಲದವರಿಗೆ ದೇವರು ಒಲಿಯುತ್ತಾರೆ Datta Jayanti 2024 ಎನ್ನುವುದೇ ಅನಸೂಯಾ ಅತ್ರಿಯರಿಗೆ ದತ್ತಾತ್ರೇಯರು ಮಗನಾಗಿ ಬಂದುದರ ಸಂದೇಶವಾಗಿದೆ, ಇಂತಹ ಏಕೀಕೃತ ಬಹು ದೇವತಾ ಉಪಾಸನೆ ನಮ್ಮ ಸನಾತನ ಚಿಂತನೆಯ ವಿಶೇಷತೆ ಎಂದರು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಭಕ್ತವೃಂದದವರಿಂದ ಕಾಕಡಾರತಿ ಶ್ರೀ ಗಣಪತಿ ಶ್ರೀ ವೀರಾಂಜನೇಯ ಪೂಜೆ ಶ್ರೀ ದತ್ತಾತ್ರೇಯ ಮೂರ್ತಿ ಹಾಗೂ ಶ್ರೀ ಗುರುಗಳ ಪಾದುಕೆಗೆ ಏಕಾದಶವರ್ತನ ರುದ್ರಾಭಿಷೇಕ ನೆರವೇರಿತು. ಆರ್ ಜಿ ನಾಗೇಂದ್ರ ಪ್ರಸಾದ್ ಆರ್ ಹೆಚ್ ಶ್ರೀಧರ ಶ್ರೇಷ್ಠಿ ಮುಂತಾಗಿ ಟ್ರಸ್ಟಿನ ಹಾಗೂ ಆಧ್ಯಾತ್ಮ ಮಂದಿರದ ಪ್ರಮುಖರು ಅಲ್ಲಿದ್ದರು. ಶ್ರೀ ದತ್ತಾತ್ರೇಯ ಮೂರ್ತಿಗೆ ಹೂವಿನ ಅಲಂಕಾರ ಸೇವೆಯನ್ನು ಡಾ.ಜಾಧವ್ ಕುಟುಂಬ ವರ್ಗದವರು ಮಾಡಿದ್ದರು. ಅಷ್ಠಾವಧಾನ,ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆಯೂ ಏರ್ಪಾಡಾಗಿತ್ತು.
Datta Jayanti 2024 ಚಾಂಚಲ್ಯ ಮುಕ್ತ ಏಕಾಗ್ರಮನವು ಭಗವದ್ ಭಕ್ತಿಗೆ ಅವಶ್ಯ-ಡಾ.ಎಚ್.ಬಿ.ಮಂಜುನಾಥ್
Date: