Wednesday, December 17, 2025
Wednesday, December 17, 2025

Rotary Shimoga ಕೋಟ್ಯಾಂತರ ಹಣವನ್ನ ರೋಟರಿ ದತ್ತಿನಿಧಿ ಮೂಲಕ ಸಮಾಜ‌ಮುಖಿ ಚಟುವಟಿಕೆಗೆ ಬಳಸಲಾಗುತ್ತಿದೆ- ಡಾ.ರಾಜನಂದಿನಿ ಕಾಗೋಡು

Date:

Rotary Shimoga ರೋಟರಿ ದತ್ತಿನಿಧಿ ಮುಖಾಂತರ ಕೋಟ್ಯಂತರ ರೂ.ಗೂ ಅಧಿಕ ಮೊತ್ತದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.

ಪೊಲಿಯೋ ಲಸಿಕೆ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಳಸಲಾಗಿದೆ ಎಂದು ರೋಟರಿ ದತ್ತಿನಿಧಿ ವಲಯ ಸಂಯೋಜಕಿ, ಸಾಗರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.

ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್‌ನಲ್ಲಿ ರೋಟರಿ ಫೌಂಡೇಷನ್ ಡೇ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ದತ್ತಿನಿಧಿಗೆ ಯಾರು ಬೇಕಾದರೂ ದೇಣಿಗೆ ನೀಡಬಹುದು. ನಾವು ನೀಡುವ ದೇಣಿಗೆ ತುಂಬಾ ಪವಿತ್ರ ಕಾರ್ಯಕ್ಕೂ ಸದ್ವಿನಿಯೋಗವಾಗುತ್ತದೆ ಎಂದು ತಿಳಿಸಿದರು.

Rotary Shimoga ಇದೇ ಸಂದರ್ಭದಲ್ಲಿ ರೋಟರಿ ಫೌಂಡೇಷನ್‌ಗೆ ಪ್ರತಿ ವರ್ಷ 1,000 ಡಾಲರ್ ದೇಣಿಗೆ ನೀಡುತ್ತಿರುವ ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕುರಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, 2013ರಲ್ಲಿ ಸಿಎಸ್‌ಆರ್ ನೀತಿ ಜಾರಿಗೆ ಬಂದಿದ್ದು, ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು, ಕಂಪನಿಗಳು, ಬ್ಯಾಂಕ್‌ಗಳು ಲಾಭಾಂಶದಲ್ಲಿ ಶೇ. 2ರಷ್ಟನು ಸಮಾಜದ ಉನ್ನತಿಗೆ ವೆಚ್ಚ ಮಾಡಲು ಕಾನೂನು ಅನುಕೂಲ ಮಾಡಿದೆ. ಪರಿಸರ ಕಾರ್ಯ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಸೇರಿ ಸಮಾಜಮುಖಿ ಕೆಲಸಗಳಿಗೆ ಸಿಎಸ್‌ಆರ್ ಫಂಡ್ ಉಪಯೋಗವಾಗಲಿದೆ ಎಂದು ತಿಳಿಸಿದರು.

ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜಿ.ಕಿರಣಕುಮಾರ್ ಮಾತನಾಡಿ, ರೋಟರಿ ಫೌಂಡೇಷನ್‌ಗೆ ಹೆಚ್ಚಿನ ದೇಣಿಗೆ ನೀಡುವ ಮೂಲಕ ನಮ್ಮ ಕ್ಲಬ್ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಪ್ರಮುಖರಾದ ಸುರೇಖಾ ಮುರಳೀಧರ್, ಜಿ.ಎನ್.ಪ್ರಕಾಶ್, ಕಾರ್ಯದರ್ಶಿ ಈಶ್ವರ್, ಚುಡಾಮಣಿ ಪವಾರ್, ವಿಜಯಪ್ರಕಾಶ್, ಗೀತಾ ಜಗದೀಶ್, ರಾಜಶ್ರೀ ಬಸವರಾಜ್, ಧರ್ಮೇಂದ್ರಸಿಂಗ್, ರವಿ ಕೋಟೋಜಿ, ಅರುಣ್ ದೀಕ್ಷಿತ್, ಮಂಜುನಾಥರಾವ್ ಕದಂ, ಆನಂದ್, ಅರುಣ್‌ಕುಮಾರ್, ರಾಜೀವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...