Rotary Club Shimoga ಕನಕದಾಸರು ಕೀರ್ತನೆಗಳನ್ನು ರಚನೆ ಮಾಡಿ, ಅಂದಿನ ಕಾಲಘಟ್ಟದಲ್ಲಿ ಜಾತಿ ಪದ್ಧತಿ ವಿರುದ್ಧ ಕೀರ್ತನೆಗಳಿಂದ ಸಮಾಜಕ್ಕೆ ಅರಿವು ಮೂಡಿಸಿದರು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ 537ನೇ ಶ್ರೀ ಕನಕದಾಸ ಜಯಂತಿ ಆಚರಣೆಯಲ್ಲಿ ಮಾತನಾಡಿ, ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ. ಇವರ ಕೀರ್ತನೆಗಳು, ಬೋಧನೆಗಳು ಇಂದಿಗೂ ಪ್ರಸ್ತುತ ಪ್ರತಿಯೊಬ್ಬರು ಇದನ್ನು ಅರಿತು ಬಾಳಬೇಕು ಎಂದು ತಿಳಿಸಿದರು.
ಕನಕದಾಸರು ಬಾಲ್ಯದಿಂದಲೇ ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತರಾಗಿದ್ದರು. ಕನಕದಾಸ ಜಯಂತಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.
Rotary Club Shimoga ರೋಟರಿ ಪಿಡಿಜಿ ಜಿ.ಎನ್.ಪ್ರಕಾಶ್ ಮಾತನಾಡಿ, ಕನಕದಾಸರು ಅಜರಾಮರ, ದಾಸರು ಕಾಗಿನೆಲೆ ಆದಿಕೇಶವನ ಆರಾಧಕರಾಗಿದ್ದರು ಎಂದು ತಿಳಿಸಿದರು. ಶ್ರೀ ಕನಕದಾಸರ ಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ವಿರೂಪಾಕ್ಷ ಮತ್ತು ಗುರುರಾಜ್ ಅವರು ದಾಸರ ಕೀರ್ತನೆ ಹಾಡಿದರು.
ರೋಟರಿ ರಮೇಶ್ ಮಾತನಾಡಿ, ಕನಕದಾಸರು ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು ಎಂದರು. ಸಭೆಯಲ್ಲಿ ಸಂತೋಷ್, ಆನಂದ್, ಅರುಣ್ ಕುಮಾರ್, ಚಂದ್ರು ಜೆಪಿ, ಧರ್ಮೇಂದ್ರ ಸಿಂಗ್, ದೀಪ, ಜಯಶೀಲಶೆಟ್ಟಿ, ರಾಜಶ್ರೀ ಬಸವರಾಜ್, ಜ್ಯೋತಿ ಶ್ರೀರಾಮ್, ಹಾಗೂ ಗೀತಾ ಜಗದೀಶ್, ಶುಭಾ ಚಿದಾನಂದ, ಧನಂಜಯ್, ಬಲರಾಮ್, ನಟರಾಜ್, ರೋಟರಿ ಶಿವಮೊಗ್ಗ ಸೆಂಟ್ರಲ್ ಹಾಗೂ ಎಲ್ಲ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.