Shimoga Institute of Medical Sciences Shivamogga ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಧುಮೇಹ ನಿಯಂತ್ರಿಸಬಹುದು ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ ಅವರು ತಿಳಿಸಿದರು.
ಇತ್ತೀಚಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ ಸಿಡಿ ಘಟಕ ವತಿಯಿಂದ ಸಿಮ್ಸ್ ಮೆಡಿಕಲ್ ಕಾಲೇಜಿನ ಎನ್‌ಸಿಡಿ ಆವರಣದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಧುಮೇಹ ಒಂದು ದೊಡ್ಡ ಕಾಯಿಲೆ ಎಂದು ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಾಥಮಿಕವಾಗಿ ನಿಯಂತ್ರಿಸಲು ನಮ್ಮ ಜೀವನ ಪದ್ದತಿ ಬದಲಾಗಬೇಕಿದೆ ಎಂದರು.
Shimoga Institute of Medical Sciences Shivamogga ಡಿಹೆಚ್‌ಓ ಡಾ.ನಟರಾಜ್ ಮಾತನಾಡಿ ಮಧುಮೇಹದಿಂದ ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ನರಗಳಿಗೆ ಹಾನಿಯಾಗುವುದು ಈ ರೀತಿ ಅನೇಕ ಕಾಯಿಲೆಗಳಿಗೆ ಮಧುಮೇಹ ಕಾರಣವಾಗುತ್ತದೆ. ಅದ್ದರಿಂದ ಮಧುಮೇಹವನ್ನು ನಿಯಂತ್ರಿಸಲು ಪ್ರತಿನಿತ್ಯ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಸೇವನೆ, ತಾಜಾ ಹಣ್ಣು, ತರಕಾರಿ, ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಮದ್ಯಪಾನ ತ್ಯಜಿಸುವುದು, ದಿನನಿತ್ಯ ನಿಗದಿತ ಚಿಕಿತ್ಸೆ ಪಾಲನೆ, ನಿಯಮಿತ ರಕ್ತದ ಸಕ್ಕರೆ ಪರೀಕ್ಷೆ ಮಾಡಿಸುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹೊಣೆ ನಿಮ್ಮ ಕೈಯಲ್ಲೇ ಇದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಎಂ.ಎಸ್. ಡಾ.ತಿಮ್ಮಪ್ಪ, ಡಿ.ಎಸ್.ಓ ಡಾ.ನಾಗರಾಜ್ ನಾಯ್ಕ್, ಡಾ.ಹರ್ಷ ಹಾಗೂ ಎನ್‌ಸಿಡಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.