Tuesday, May 26, 2026
Tuesday, May 26, 2026

Election Commission ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ. ಪ್ರಕಟಣೆ

Date:

Election Commission ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2025 ಕ್ಕೆ ಸಂಬಂಧಿಸಿದಂತೆ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ದಿ: 09-11-2024, 10-11-2024, 23-11-2024 ಮತ್ತು 24-11-24 ರಂದು ತಮ್ಮ ಮತಗಟ್ಟೆಗಲಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿ ಪರಿಶೀಲಿಸಿಕೊಂಡು ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ.
17 ವರ್ಷ ತುಂಬಿದ ಅಥವಾ 18 ವರ್ಷ ಪೂರೈಸಿದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ಮತದಾರರ ಗುರುತಿನ ಚೀಟಿಗಳಲ್ಲಿ ಮುದ್ರಣ ದೋಷ ಉಂಟಾಗಿದ್ದರೆ ತಿದ್ದುಪಡಿ ಮಾಡಲು, ಒಂದು ಮತದಾನ ಕೇಂದ್ರದಿAದ ಮತ್ತೊಂದು ಮತದಾನ ಕೇಂದ್ರಕ್ಕೆ ವಿಳಾಸ ಬದಲಾಯಿಸಿಕೊಂಡಿದ್ದಲ್ಲಿ ವರ್ಗಾವಣೆ ಮಾಡಲು ಹಾಗೂ ಮತದಾರರು ಮೃತಪಟ್ಟಿದ್ದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅವಕಾಶವಿದೆ.
Election Commission ಮತದಾರರು ತಮ್ಮ ಮೊಬೈಲ್ ನ ವೋಟರ್ ಹೆಲ್ಪ್ಲೈನ್ ಆ್ಯಪ್ ನಲ್ಲಿ ನಮೂನೆ-6 ರಲ್ಲಿ ಸೇರ್ಪಡೆಗೆ, ನಮೂನೆ-7 ರಲ್ಲಿ ತೆಗೆದುಹಾಕಲು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗಾಗಿ, ವರ್ಗಾವಣೆಗಾಗಿ ಅವಕಾಶವಿದೆ. ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಕ್ರಿಕೆಟ್ ಪಟು ಅಕ್ಷಯ್ ನಿಧನಕ್ಕೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ಸಂತಾಪ.

Breaking News ಕ್ರಿಕೆಟ್ ಆಟ ಆಡುವಾಗಲೇ ರಣಜಿ ಕ್ರಿಕೆಟ್ ನ ಮಾಜಿ...

Aryabhata Award ಪ್ರಶಾಂತ್ ಕುಮಾರ್ ಸಿ ರಾಯ್ಕರ್ ಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ.

Aryabhata Award ಜ್ಞಾನೇಶ್ವರ ಗೋಶಾಲಾ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಸಿ...

Shimoga News ಹಾವು ಕಡಿತ ಚಿಕಿತ್ಸೆ; ನಾಟಿ ವೈದ್ಯರ ವಿರುದ್ಧ ಸೂಕ್ತ ಕ್ರಮ -ವಿ.ಅಭಿಷೇಕ್.

Shimoga News ಹಾವು ಕಡಿತ ಉಂಟಾದ ತಕ್ಷಣ ಹತ್ತಿರದ ಪಿಹೆಚ್‌ಸಿ ಅಥವಾ...

Shimoga News ಜೂನ್ 28. ಪಲ್ಸ್ ಪೋಲಿಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಅನುಷ್ಠಾನಗೊಳಿಸಿ- ಅಪರ ಜಿಲ್ಲಾಧಿಕಾರಿ ವಿ‌.ಅಭಿಷೇಕ್

Shimoga News ಶಿವಮೊಗ್ಗ ಜಿಲ್ಲೆಯಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ...