Friday, November 8, 2024
Friday, November 8, 2024

Klive Special Article ದಾನಕ್ಕೆ ಹೆಸರಾದ ದಾನವರಾಜ ಬಲಿ ಚಕ್ರವರ್ತಿ

Date:

Klive Special Article “ದೀಪಾವಳಿ-ಬಲಿಪಾಡ್ಯಮಿ”

ಶರದೃತುವಿನ ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯವನ್ನು ದೀಪಾವಳಿ ಹಬ್ಬದ ಬಲಿಪಾಡ್ಯಮಿ
ಎಂದು ಆಚರಿಸಲಾಗುತ್ತದೆ.
ಈ ದಿನವನ್ನು ದಾನಕ್ಕೆ ಹೆಸರಾದ ದಾನವರಾಜ
ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸುವುದು
ರೂಢಿಯಲ್ಲಿದೆ.

ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತನಾದ
ಪ್ರಹ್ಲಾದನ ಮೊಮ್ಮಗ.ಬಲಿಚಕ್ರವರ್ತಿ ಬಹಳಷ್ಟು
ಪ್ರಬಲ ಮತ್ತು ಪರಾಕ್ರಮಶಾಲಿ ಅಸುರ ರಾಜ
ನಾಗಿದ್ದನು. ಇವನು ದೈತ್ಯ ಕುಲದಲ್ಲಿ ಹುಟ್ಟಿದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಠೆ ಮತ್ತುದಾನ
ಮಾಡುವುದರಲ್ಲಿ ಎಂದೂ ಹಿಂಜರಿದವನಲ್ಲ.
ಬಲಿಯು ವಿರೋಚನ ರಾಜನ ಮಗ. ವಿರೋಚನನೂ ತಂದೆ ಪ್ರಹ್ಲಾದನ ಹಾಗೆ ವಿಷ್ಣು ಭಕ್ತನಾಗಿದ್ದನು.

ಮಹಾಬಲಶಾಲಿಯಾಗಿದ್ದವನು.
ಯುದ್ಧದಲ್ಲಿ ಮಹಾಚತುರನಾಗಿದ್ದನು. ಸ್ವರ್ಗಲೋಕಕ್ಕೆ ಲಗ್ಗೆ ಹಾಕಿ ದೇವೇಂದ್ರನ ಮೇಲೆ ಯುದ್ಧಕ್ಕೆ ಹೋಗಿ ಇಂದ್ರ ನವ ಜ್ರಾಯುಧದಿಂದ ಹತನಾಗುತ್ತಾನೆ. ದಾನವ ಗುರುಗಳಾದ ಶುಕ್ರಾಚಾರ್ಯರಿಂದ ಸಂಜೀವಿನೀ ಮಂತ್ರದಿಂದ ಪುನಃ:ಜೀವ ಪಡೆಯುತ್ತಾನೆ.

ಇವನ ಮಗ ಬಲಿರಾಜ ಇದೇ ಸೇಡಿಟ್ಟುಕೊಂಡು ಅಮರಾವತಿಗೆ ಹೋಗಿ ಸ್ವರ್ಗಲೋಕದಲ್ಲಿ ದೇವೇಂದ್ರನ ಸಿಂಹಾಸನವನ್ನು ಆಕ್ರಮಿಸಿಕೊಂಡುಅವನನ್ನು ಇಂದ್ರಪದವಿಯಿಂದ ಇಳಿಸಿಬಿಡುತ್ತಾನೆ.
ಮೊದಲೇ ಇವನು ರಾಕ್ಷಸ ಸ್ವಭಾವದವನು, ಎಲ್ಲಾ ಸಜ್ಜನರಿಗೆ ಮತ್ತು ಋಷಿಮುನಿಗಳಿಗೆ ಉಪಟಳ ಶುರುವಾಗಿಬಿಡುತ್ತೆ.

ಎಲ್ಲಾದೇವತೆಗಳು ಋಷಿಮುನಿಗಳು ಶ್ರೀಹರಿಯಲ್ಲಿ
ಬಂದು ತಮ್ಮನ್ನು ಬಲಿಯ ಉಪಟಳದಿಂದ ರಕ್ಷಿಸಬೇಕೆಂದು ಪ್ರಾರ್ಥಿಸುತ್ತಾರೆ. ಶ್ರೀಹರಿಯು ಅವರಿಗೆ ತಾನು ದಾನವ ರಾಜನ ತೊಂದರೆಯನ್ನು
ಪರಿಹರಿಸುವುದಾಗಿ ಅಭಯವನ್ನು ಕೊಟ್ಟು ಕಳಿಸುತ್ತಾನೆ.
ಬಲಿಯು ದಾನವನಾಗಿದ್ದರೂ ಶ್ರೀಹರಿ
ಯು ಭಕ್ತನಾಗಿದ್ದನು. ಇವನಿಗೆ ಬುದ್ಧಿ ಕಲಿಸುವುದಕ್ಕಾಗಿ ಶ್ರೀಹರಿಯು ಕಶ್ಯಪ ಅದಿತಿ
ದಂಪತಿಗಳಲ್ಲಿ ಮಗನಾಗಿ “ವಾಮನ”ನಾಗಿ ಅವತರಿಸುತ್ತಾನೆ.

Klive Special Article ಬಲಿಯು ತಾನು ಶಾಶ್ವತವಾಗಿ
ಇಂದ್ರ ಪದವಿಯನ್ನು ಹೊಂದಲು ಗುರುಗಳಾದ ಶುಕ್ರಾಚಾರ್ಯರ ಉಪದೇಶದಂತೆ ಯಜ್ಞವನ್ನು
ಮಾಡುತ್ತಾನೆ. ಯಜ್ಞದ ಫಲ ದೊರಕಲು ನಿಯಮದಂತೆ ಯಜ್ಞ ಮಾಡುವಾಗ ಯಾರು ಏನನ್ನುಯಾಚಿಸಿದರೂ
ಇಲ್ಲವೆನ್ನದೆ ದಾನಕೊಡಬೇಕು. ಇಲ್ಲದೇ ಹೋದರೆ ಯಜ್ಞದ ಫಲ ಸಿದ್ಧಿಸುವುದಿಲ್ಲ.
ಇದೇ ಸರಿಯಾದ ಸಮಯವೆಂದು ವಾಮನ ರೂಪಿ ಭಗವಂತನು ವಟುವಿನ ವೇಷದಿಂದ ಬಲಿಯು ಯಜ್ಞ ಮಾಡುತ್ತಿದ್ದ ಸ್ಥಳಕ್ಕೆ ಬರುತ್ತಾನೆ.

ಬಲಿಯು ವಾಮನ ರೂಪಿ ಭಗವಂತನನ್ನು ಆದರದಿಂದ ಸ್ವಾಗತಿಸಿ,ಬಂದಉದ್ದೇಶವೇನೆಂದು ವಿಚಾರಿಸುತ್ತಾನೆ ಸಂಕೋಚಪಡದೇ ತನ್ನಿಂದ ಏನುಕೆಲಸವಾಗ
ಬೇಕೆಂಬುದನ್ನು ಸಂಕೋಚವಿಲ್ಲದೇ ತಿಳಿಸಿದರೆ ಅದನ್ನು ಈಡೇರಿಸಲು ಸಿದ್ಧನಿದ್ದೇನೆ ಎಂದು ತಿಳಿಸು
ತ್ತಾನೆ.

ವಾಮನ ನನಗೆ ನಿನ್ನ ಧನ,ಕನಕ ಮತ್ತಾವುದೇ ವಸ್ತುಗಳು ಬೇಡ,ನೀನುಕೊಡುವು
ದಾದರೆ ನನ್ನ ಮೂರು ಪಾದದಷ್ಟು ಭೂಮಿಯನ್ನು
ಕೊಡು,ಇಲ್ಲವಾದರೆ ಬೇಡ ಎಂದು ಹೇಳುತ್ತಾನೆ. ಬಲಿಚಕ್ರವರ್ತಿಗೆ ಬಹಳ ಆಶ್ಚರ್ಯವಾಗುತ್ತದೆ. ವಾಮನ ನೋಡಲು ಸಣ್ಣ ವಟು ರೂಪದಲ್ಲಿರುವ ಬಾಲಕ
ನಾಗಿ ಕಾಣುತ್ತಾನೆ.
ಆಯ್ತು ನೀವೇನು ಕೇಳಿದ್ದರೋ ಅದನ್ನು ಕೊಡಲು ಸಿದ್ಧನಿದ್ದೇನೆ ಎಂದು ಗುರುಗಳಾದ ಶುಕ್ರಾಚಾರ್ಯ
ರನ್ನು ಕರೆದು ಸಂಕಲ್ಪಮಾಡುತ್ತಾನೆ.
ಶುಕ್ರಾಚಾರ್ಯರು ಬಲಿಗೆ ಎಚ್ಚರಿಕೆ ಕೊಡುತ್ತಾರೆ,
ಬಂದಿರುವವನು ಸಾಮಾನ್ಯವಟುವಲ್ಲ, ವಾಮನ ರೂಪಿ ಭಗವಂತ ನೆಂದು.

ಆದರೂ ತಾನು ಕೊಟ್ಟ ಮಾತಿಗೆ ತಪ್ಪದೇ ವಾಮನ ರೂಪಿ ವಟುವಿಗೆ ದಾನ ಕೊಡುತ್ತಾನೆ.
ವಾಮನ ರೂಪಿ ಭಗವಂತನು ಒಂದು ಪಾದದಿಂದ ಭೂಮಂಡಲವನ್ನು, ಎರಡನೆಯ ಪಾದದಿಂದ ದೇವಲೋಕವನ್ನೆಲ್ಲ ಅಳೆದು ಮುಗಿಸಿದ. ಇನ್ನು
ಮೂರನೆಯ ಪಾದಕ್ಕೆ ಜಾಗವನ್ನು ತೋರಿಸು ಎಂದಾಗ ಬಲಿಯು ಮನಸ್ಸಿನಲ್ಲಿ ತನಗೂ ವಿಷ್ಣು
ಪರಮಾತ್ಮನು ಅನುಗ್ರಹದ ಭಾಗ್ಯ ಸಿಕ್ಕುವುದೆಂದು
ಹಿಗ್ಗಿನಿಂದ ವಟುವಾಮನನ ಮುಂದೆ ಕೈಜೋಡಿಸಿ
ಮೂರನೆಯ ಪಾದವನ್ನು ತನ್ನ ತಲೆಯಮೇಲೆ ಇಟ್ಟು ತಿನ್ನು ಕೃತಾರ್ಥನನ್ನಾಗಿ ಮಾಡುವಂತೆ ಪ್ರಾರ್ಥಿಸುತ್ತಾನೆ. ಭಗವಂತನು ಅವನ ತಲೆಯ ಮೇಲೆ ಪಾದವನ್ನಿಟ್ಟು ಪಾತಾಳಕ್ಕೆ ಅದುಮುತ್ತಾನೆ.
ಬಲಿ ಚಕ್ರವರ್ತಿಯ ಉದಾರ ದಾನ ಬುದ್ಧಿಗೆ ಮೆಚ್ಚಿ
ಅವನಿಗೆ ಸುತ ಲೋಕದಲ್ಲಿ ಸುಖವಾಗಿ ರಾಜ್ಯಭಾರ ಮಾಡಿಕೊಂಡಿರುವಂತೆ ಅನುಗ್ರಹಿಸಿಅಂತರ್ಧಾನ
ನಾಗುತ್ತಾನೆ.
ವಿಷ್ಣುವಿನ ಅನುಗ್ರಹದಿಂದ ದೇವೇಂದ್ರನಿಗೆ ತನ್ನ ಸ್ವರ್ಗಲೋಕದ ಅಧಿಪತ್ಯ ಮತ್ತೆ ದೊರೆಯುತ್ತದೆ.
ಬಲಿಯ ಸಮರ್ಪಣೆಯಿಂದ ಸಂತೋಷಗೊಂಡ ವಿಷ್ಣು ಪರಮಾತ್ಮನು,ಬಲಿಗೆ ವರ್ಷದಲ್ಲಿ ಒಂದು ದಿನ ಭೂಮಿಗೆಬಂದುಜನರಿಂದಪೂಜೆಗೊಳ್ಳುವಂತೆ ಮತ್ತು ಮುಂದೆ ಭವಿಷ್ಯದಲ್ಲಿ ಇಂದ್ರ ಪದವಿಯನ್ನು ಹೊಂದುವಂತೆ ವರ ನೀಡುತ್ತಾನೆ. ಬಲಿಯು ಪಾತಾಳದಿಂದ ವರ್ಷಕ್ಕೊಂದು ಸಾರಿ ಬರುವ ಈ ದಿನವನ್ನೇ ಬಲಿಪಾಡ್ಯಮಿಯನ್ನಾಗಿ ಆಚರಿಸಲಾಗುತ್ತದೆ. ಈ ರೀತಿಯಾಗಿ ಬಲಿಗೆ ವಿಷ್ಣುವು ಕೊಟ್ಟ ವರದಂತೆ
ದೀಪಾವಳಿ ಹಬ್ಬದಂದು ಬಲಿಯ ಪೂಜೆ ಮಾಡು
ವುದು ನಡೆದು ಬಂದಿದೆಯಲ್ಲದೆ ಮತ್ತು ಮಹತ್ವ ಪಡೆದಿದೆ. ನಾಡಿನ ಸಮಸ್ತ ಜನರಿಗೆ ಬಲಿಪಾಡ್ಯಮಿ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಲೇ: ಎನ್.ಜಯಭೀಮ ಜೊಯ್ಸ್.,ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Election Commission ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ. ಪ್ರಕಟಣೆ

Election Commission ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ –...

District Legal Services Authority ತಂಬಾಕು ಮುಕ್ತ ಯುವ ಅಭಿಯಾನಕ್ಕೆ ಹಸಿರು ನಿಶಾನೆ

District Legal Services Authority ತಂಬಾಕು ಮುಕ್ತ ಯುವ ಅಭಿಯಾನ 2.0...

DVS College of Arts, Science and Commerce ಬಸವಣ್ಣನವರ ವಚನ ಓದಿ ಅರ್ಥೈಸಿಕೊಂಡು ಜೀವನದಲ್ಲಿ‌ ಅಳವಡಿಸಿಕೊಳ್ಳಬೇಕು- ಡಾ.ಅರವಿಂದ ಜತ್ತಿ

ಕನ್ನಡತ್ವ ಮತ್ತು ಬಸವಣ್ಣ ನೆಲದ ಅಸ್ಮಿತೆಗೆ ಮೆರುಗು ನೀಡಿದ ಎರಡು ಸಂಗತಿಗಳು...

Donald Trump ಟ್ರಂಪ್, ಪುನರಾಗಮನ. ಭಾರತಕ್ಕೆ ಏನಾಗಬಹುದು

Donald Trump ಅಮೆರಿಕಕ್ಕೆ ವಿಶ್ವದ ದೊಡ್ಡಣ್ಣ ಎಂಬ ಅಡ್ಡ ಹೆಸರಿದೆ. ಅಲ್ಲಿ...