Consumer Disputes Redressal Commission ವಿಠಲ ಶೆಟ್ಟಿ ಎಂಬುವವರು ಪ್ರಾಂಕ್ಲಿನ್ ಇ.ವಿ.ಎಸ್.ವಿ ಎಲೆಕ್ಟ್ರಿಕ್ ವೆಹಿಕಲ್, ಹೈದರಾಬಾದ್ ಮತ್ತು ಜಿ.ಆರ್.ಪಿ. ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರ ವಿಠಲ ಶೆಟ್ಟಿಯವರು ಜಿ.ಆರ್.ಪಿ ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿಸಿದ್ದು, ಕೆಲವೇ ದಿನಗಳಲ್ಲಿ ಸ್ಕೂಟರ್ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲವೆಂದು ತಿಳಿಸಿದಾಗ, ಎದುರುದಾರರು ಬ್ಯಾಟರಿಯನ್ನು ಕೊಂಡ್ಯೋದು ರಿಪೇರಿ ಮಾಡಿ ಅಳವಡಿಸಿದ್ದಾಗಿ ತಿಳಿಸಿ ವಾಪಾಸ್ಸು ತಂದರೂ ಮತ್ತೆ ಅದೇ ಸಮಸ್ಯೆ ಉಂಟಾಗಿರುತ್ತೆದೆ. ಆದ್ದರಿಂದ ಹೊಸ ಬ್ಯಾಟರಿ ಅಳವಡಿಸಿ ವಾಹನ ಚಾಲು ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಕಂಪನಿಯವರು ಬದಲಿ ಹೊಸ ಬ್ಯಾಟರಿ ಅಳವಡಿಸಿಕೊಡಲು ನಿರಾಕರಿಸಿದ್ದಾರೆ.
Consumer Disputes Redressal Commission ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು ೧ ಮತ್ತು ೨ ನೇ ಎದುರುದಾರರು ನೋಟಿಸ್ ಪಡೆಯಲು ತಿರಸ್ಕರಿಸಿದ್ದು ಆಯೋಗದ ಮುಂದೆ ಹಾಜರಾಗಿರುವುದಿಲ್ಲ ಕಾರಣ ೧ ಮತ್ತು ೨ ನೇ ಎದುರುದಾರರನ್ನು ಏಕ ಪಕ್ಷೀಯವೆಂದು ತೀರ್ಮಾನಿಸಲಾಗಿರುತ್ತದೆ.
ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ. ಎದುರುದಾರು ಅರ್ಜಿದಾರರಿಗೆ 45 ದಿನಗಳೊಳಗಾಗಿ ದೂರುದಾರರ ಸ್ಕೂಟರ್‌ಗೆ ಹೊಸ ಬ್ಯಾಟರಿಯನ್ನು ಅಳವಡಿಸಿಕೊಡಬೇಕಾಗಿ ತಪ್ಪಿದಲ್ಲಿ ದಿನಕ್ಕೆ ೧೫೦ ರೂ. ನಂತೆ ಓಡಾಟದ ಖರ್ಚಾಗಿ ಹೊಸ ಬ್ಯಾಟರಿಯನ್ನು ಅಳವಡಿಸಿ ಸ್ಕೂಟರ್‌ನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡುವವರೆಗೂ ನೀಡಬೇಕೆಂದು ಹಾಗೂ ರೂ.೧೫೦೦೦ ಗಳನ್ನು ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಪಾವತಿಸಬೇಕೆಂದು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.
Consumer Disputes Redressal Commission ವಾಹನ ವಿಮೆ ಪರಿಹಾರ ಗ್ರಾಹಕರಿಗೆ ನೀಡಲು ಆಯೋಗದ ಆದೇಶ
Date: