Thursday, November 21, 2024
Thursday, November 21, 2024

Girish Kasaravalli ಸಿನಿಮಾದ ಉದ್ದೇಶ ಸಾಹಿತ್ಯ ಕೃತಿಯ ಮಾಧ್ಯಮಾಂತರ.‌ಇಲ್ಲಿ ನಿರ್ದೇಶಕನಿಗೆ ಸ್ವಾತಂತ್ರ್ಯ ಅಗತ್ಯ- ಗಿರೀಶ್ ಕಾಸರವಳ್ಳಿ

Date:

Girish Kasaravalli ಏಳೆಂಟು ವರ್ಷಗಳ ಬಳಿಕ ಮತ್ತೊಂದು ಸಿನೆಮಾ ನಿರ್ದೇಶನ ಮಾಡಲು ಮುಂದಾಗಿದ್ದೇನೆ. ಬಹುತೇಕ ಸೆಪ್ಟೆಂಬರ್ ೨೩ ರಿಂದ ಚಿತ್ರೀಕರಣ ಆರಂಭ ಆಗಲಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.
ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳ ಕುರಿತು ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯ ಒಂದು ಸಿನೆಮಾ ಮಾಡುತ್ತಿದ್ದೇನೆ. ಅನಂತಮೂರ್ತಿ ಅವರ “ಆಕಾಶ ಮತ್ತು ಬೆಕ್ಕು” ಕೃತಿ ಆಧರಿತ. ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂವಾದದಲ್ಲಿ ಅವರ ಕೂರ್ಮಾವತಾರದಲ್ಲಿ ಹಲವು ಸಂಕೇತಗಳ ಒಳ ತಿರುಳು ಏನು? ಎಂಬುದಕ್ಕೆ ಕಾಸರವಳ್ಳಿ ಉತ್ತರಿಸಿ, ಸಿನೆಮಾದಲ್ಲಿ ಸಂಕೇತ ಎಂಬುದು ಮುಜುಗರ ಸಂಗತಿ. ೧೯೭೦ ರಲ್ಲಿ ಹೊಸ ಸಿನಿಮಾ ಬಂದಾಗ ಹೊಸ ಅಲೆ ಅಂತ ಕರೆದರು. ಸಿನಿಮಾ ಮೊದಲು ಅನುಭವಿಸೋಣ. ಯಾವ ದೃಶ್ಯ ಸಾಂದ್ರತೆ ಹೆಚ್ಚು ಮಾಡುತ್ತೆ ಅನ್ನುವುದು ಮುಖ್ಯ. ದಿನನಿತ್ಯದ ವ್ಯವಹಾರದಲ್ಲಿ ನೋಡಿರದ ಸಂಗತಿ ಸಿನೆಮಾಗಳಲ್ಲಿ ಕಾಣಬಹುದು. ದೃಶ್ಯ ವಿವರಗಳನ್ನು ಬಿಂಬ ಎಂದು ಕರೆಯುತ್ತೇವೆ ಎಂದರು.
ಮಾರುಕಟ್ಟೆ ಸಂಸ್ಕೃತಿಯನ್ನು ಒಪ್ಪಲ್ಲ…
ನಿಮ್ಮ ದೃಷ್ಟಿಯಿಂದ ಸಿನೆಮಾ ಸಂದೇಶವೇ, ವ್ಯಾಪಾರವೇ? ಎಂಬುದಕ್ಕೆ ಪ್ರತಿಕ್ರಿಯಿಸಿ, ನಾನು ನಿರ್ದೇಶಕ. ನಾನು ಉಪದೇಶ ಮಾಡುವವ ಅಲ್ಲ. ಮೇಷ್ಟ್ರು ಮಕ್ಕಳಿಗೆ ಪಾಠ ಮಾಡುತ್ತಾರೆ. ಕಲೆಯಲ್ಲಿ ಯಾವತ್ತೂ ಸಮಾನಾಂತರ ಇರಬೇಕು. ಪ್ರೇಕ್ಷಕರು ಯಾವತ್ತೂ ದಡ್ಡರಲ್ಲ. ಹಾಗಾಗಿ ನಿರ್ದೇಶಕ ಜಾಣ ಎಂಬ ಅರ್ಥದಲ್ಲಿ ಚಿತ್ರ ತೆಗೆಯಬಾರದು ಎಂದರು.
ಈಗ ಎಲ್ಲರೂ ಮಾರುಕಟ್ಟೆ ಸಂಸ್ಕೃತಿಯ ಕೂಸುಗಳು. ನನ್ನ ಸಿನೆಮಾವೂ ಕಮಷಿರ್ಯಲ್ ಆದರೆ ಅದು ಓಡಲ್ಲ ನಾನೇನು ಮಾಡಲಿ. ಎಲ್ಲರೂ ಹಾಕಿದ ಬಂಡವಾಳ ಬರಲಿ ಎಂದೇ ನಿರೀಕ್ಷೆ ಮಾಡುತ್ತಾರೆ. ಕೊಲೆ, ಹಿಂಸೆ, ಅತ್ಯಾಚಾರ ಬಂಡವಾಳ ಮಾಡಿಕೊಳ್ಳುವ ಮಾರುಕಟ್ಟೆ ಸಂಸ್ಕೃತಿಯನ್ನು ನಾನು ಒಪ್ಪಲ್ಲ ಎಂದರು.
ಇಲ್ಲಿ ಶಿಕ್ಷಣ ಇಲ್ಲ…
Girish Kasaravalli ಕಲಾತ್ಮಕ ಚಿತ್ರ ಸಾಮಾನ್ಯ ಜನರನ್ನು ಮುಟ್ಟುವಲ್ಲಿ ವಿಫಲ ಆಗಿರುವುದು ಯಾಕೆ? ಎಂಬ ಪ್ರಶ್ನೆಗೆ, ಸಾಮಾನ್ಯ ಜನರು ಯಾರು? ದೋಷ ನನ್ನಲ್ಲಿ ಇಲ್ಲ. ಕೇರಳದಲ್ಲಿ ಈ ತರಹ ಸಿನಿಮಾ ಓಡುತ್ತೆ. ಅವರಿಗೆ ಅದರ ಮಹತ್ವ ಗೊತ್ತಿದೆ. ಆದರೆ ಬೆಂಗಳೂರಿನಲ್ಲಿ ಓಡುವುದಿಲ್ಲ. ಒಳ್ಳೆಯ ಕಲೆ ಅನುಭವಿಸುವ ಶಿಕ್ಷಣ ಅವರಿಗೆ ಕೊಟ್ಟಿಲ್ಲ ಅಷ್ಟೇ. ಸಿನಿಮಾದಲ್ಲಿ ಸಮಸ್ಯೆ ಇಲ್ಲ ಎಂದರು.
ಪುಸ್ತಕದ ಕಥೆಯನ್ನು ಚಿತ್ರಕಥೆ ಮಾಡುವಾಗ ಯಾವ ರೀತಿ ಸವಾಲು ಬರುತ್ತವೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಸಿನೆಮಾ ಉದ್ದೇಶ ಸಾಹಿತ್ಯ ಕೃತಿಯ ಮಾಧ್ಯಮಾಂತರ. ಕೃತಿಕಾರ ಹೇಳುವ ವಿಷಯದ ಜೊತೆಗೆ ಇನ್ನೊಂದು ವಿಷಯ ಹೇಳುತ್ತೇವೆ. ನಮ್ಮ ತಿಕ್ಕಾಟ ಇರುತ್ತೆ. ನಿರ್ದೇಶಕನಿಗೆ ಇಲ್ಲಿ ಸ್ವಾತಂತ್ರ‍್ಯ ಅಗತ್ಯ ಎಂದರು.
ನಾನು ಚಿತ್ರಕಥೆ ಬರೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆ. ದ್ವೀಪ ಚಿತ್ರದ ಕಥೆ ಬರೆಯಲು ಹನ್ನೆರಡು ವರ್ಷ ತೆಗೆದುಕೊಂಡಿದ್ದೆ. ಅದು ಆನಂದದಾಯಕ ಮತ್ತು ಶ್ರಮದ ಕೆಲಸ. ನನ್ನ ಚಿತ್ರಕ್ಕೆ ನಟ, ನಟಿ ಅಷ್ಟು ಮುಖ್ಯ ಅಲ್ಲ. ಚಿತ್ರಕಥೆ ಬರೆಯುವಾಗಲೇ ಪಾತ್ರದ ಚಹರೆ ಸ್ಪಷ್ಟ ಆಗಿರುತ್ತೆ ಎಂದರು.
ಹಿರಿಯ ರಂಗಕರ್ಮಿ ಕೆ. ಜಿ. ಕೃಷ್ಣಮೂರ್ತಿ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಅಂತರಾಷ್ಟ್ರೀಯ ಸಿನೆಮಾ ಪ್ರಶಸ್ತಿಗೆ ಆಯ್ಕೆಯಾದ ೨೦ ಸಿನೆಮಾಗಳಲ್ಲಿ ಘಟಶ್ರಾದ್ಧ ಕೂಡ ಒಂದು. ಇದು ಸಣ್ಣ ವಿಷಯ ಅಲ್ಲ. ಕಾಸರವಳ್ಳಿ ಸಿನೆಮಾದಲ್ಲಿ ಪ್ರತಿ ಒಂದಕ್ಕೂ ನಟನೆ, `ಭಾಷೆ, ಉಡುಪು ಎಲ್ಲವೂ ನಿಖರತೆ ಇದೆ. ಸಿನೆಮಾ ನೋಡುವುದು ಮತ್ತು ಅರ್ಥ ಮಾಡಿಕೊಳ್ಳಲು ಕಾಸರವಳ್ಳಿ ಜೊತೆಗೆ ಸಂವಾದ ಉತ್ತಮ ಎಂದರು.
ಲೇಖಕರು ಹಾಗೂ ಗಿರೀಶ್ ಕಾಸರವಳ್ಳಿಯವರ ಒಡನಾಡಿ ಗೋಪಾಲಕೃಷ್ಣ ಪೈ, ಹರೀಶ್ ಕಾರ್ಣಿಕ್, ಜಿ.ವಿಜಯಕುಮಾರ್ ಇದ್ದರು. ಸಂವಾದವನ್ನು ಪ್ರಾಚಾರ್ಯ ಡಾ.ಕೆ.ಚಿದಾನಂದ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...