Thursday, February 5, 2026
Thursday, February 5, 2026

Shivamogga Police ಶಿವಮೊಗ್ಗದ ಕಾರ್ ಶೋ ರೂಮಿನ ತಿಜೋರಿಯಿಂದ ಲಕ್ಷಗಟ್ಟಲೆ ನಗದು ಅಪಹರಣ

Date:

Shivamogga Police ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ಕಾರು ಶೋರೂಮ್ ನಲ್ಲಿ ೫,೪೯,೯೪೨ ರೂ. ಹಣ ಕಳ್ಳತನವಾದ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೋರೂಮ್ ಮಾಲಕರು ದೂರು ದಾಖಲಿಸಿದ್ದಾರೆ.

ಪ್ರತಿಷ್ಠಿತ ಶೋ ರೂಮ್ ನಲ್ಲಿ ದೈನಂದಿನ ವ್ಯವಹಾರದ ಹಣವನ್ನ ಇಡಲು ಕ್ಯಾಬಿನ್ ಮಾಡಲಾಗಿದ್ದು ಕ್ಯಾಬಿನ್‌ನಲ್ಲಿ ತಿಚೋರಿಯನ್ನ ನಿರ್ಮಿಸಿ ಇಡಲಾಗಿತ್ತು.

Shivamogga Police ಕ್ಯಾಶ್ ಕೌಂಟರ್‌ನ ಗುಮಾಸ್ತರು ಪ್ರತಿನಿತ್ಯದಂತೆ ಹಣವನ್ನ ಈ ತಿಜೋರಿಯಲ್ಲಿ ಇಟ್ಟು ಹೋಗಿದ್ದರು. ಆ.೨೦ ರಂದು ೫,೪೯,೯೪೨ ರೂ. ಹಣವನ್ನು ಇಟ್ಟು ಕೀಯನ್ನು ಕ್ಯಾಬಿನ್‌ನಲ್ಲಿಟ್ಟು ಲಾಕ್ ಮಾಡಿ ಹೋಗಿದ್ದರು.
ಮರುದಿನ ಬಂದ ಗುಮಾಸ್ತರಿಗೆ ತಿಚೋರಿಯಲ್ಲಿ ಇಟ್ಟಾ ಹಣ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಹುಡುಕಿದರೂ ಸಿಗದೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ಮಾಲೀಕರು ಸಿಬ್ಬಂದಿಗಳನ್ನು ವಿಚಾರಿಸಿದಾಗ ಯಾರೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ೫,೪೯,೯೪೨ ರೂ. ಹಣ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...