Klive Special Article ಲೇ:ಎನ್.ಜಯಭೀಮ್ ಜೊಯಿಸ್.ಶಿವಮೊಗ್ಗ
“ಕರೆದರೆ ಬರಬಾರದೇ ಗುರು ರಾಘವೇಂದ್ರ/
ವರ ಮಂತ್ರಾಲಯ ಪುರ ಮಂದಿರ ತವ
ಚರಣ ಸೇವಕರು ಕರವ ಮುಗಿದು.”//
ಇದು ರಾಯರ ಮೇಲೆ “ಕಮಲೇಶ ವಿಠಲ” ಅಂಕಿತ
ದಿಂದ ಅಲಂಕೃತರಾದ ಹರಿದಾಸರಾದ ಸುರಪುರದ
ಆನಂದ ದಾಸರು ತುಂಗಭದ್ರೆಯ ಪ್ರವಾಹದಿಂದ
ಪಾರಾಗಿ ಬಂದು ಮಂತ್ರಾಲಯದಲ್ಲಿ ಶ್ರೀರಾಯರ
ಬೃಂದಾವನ ದರ್ಶನ ಮಾಡಿದಾಗ ರಚಿಸಿದ ಕೃತಿ.
ಸುರಪುರದ ಆನಂದ ದಾಸರು ಪಂಚಮುಖಿ ಪ್ರಾಣ
ದೇವರ ದರ್ಶನ ಮಾಡಿಕೊಂಡು ಶ್ರೀರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಬರುವಾಗ ದಾರಿಯಲ್ಲಿ ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ.ಬೆಳದಿಂಗಳ
ಬೆಳಕು ಹರಡಿದೆ.ಆನಂದದಾಸರು ನದಿಯದಡದಲ್ಲಿದ್ದ ಅಂಬಿಗರನ್ನು ಒತ್ತಾಯಿಸಿ
ಹರಿಗೋಲಿನಿಂದ ತುಂಗಭದ್ರೆಯನ್ನು ದಾಟಿಸಲು
ಒಪ್ಪಿಸಿ ಹರಿಗೋಲಿನಲ್ಲಿ ಕುಳಿತೇಬಿಟ್ಟರು.
ಹರಿಗೋಲು ನದಿಯ ಮಧ್ಯದಲ್ಲಿ ಬಂದಿದೆ.ಪ್ರವಾಹ
ಹೆಚ್ಚಾಗಿ ಕ್ಷಣಕ್ಷಣಕ್ಕೂ ನೀರಿನ ಸೆಳವು ಹೆಚ್ಚಿ ಹರಿಗೋಲು ಅಂಬಿಗನ ಹಿಡಿತ ತಪ್ಪಿ ತೇಲುತ್ತಾ
ಹೋಗಿ ಬಂಡೆಗೆ ತಾಗಿ ನಿಲ್ಲುತ್ತದೆ.ಅಂಬಿಗನಿಗೆ
ಈಜು ಬರುತ್ತಿದ್ದುದರಿಂದ ಅವನು ತನ್ನ ಜೀವವನ್ನು
ರಕ್ಷಿಸಿಕೊಳ್ಳುತ್ತಾನೆ.ದಾಸರಿಗೆ ಈಜು ಬಾರದ್ದರಿಂದ
ಇನ್ನೇನು ನಾನು ತುಂಗಭದ್ರೆಯ ಪಾಲಾಗುತ್ತೇನೆ,
Klive Special Article ಮಂತ್ರಾಲಯ ಪ್ರಭುಗಳೇ ತಮ್ಮನ್ನು ಕಾಪಾಡಬೇಕು ಎಂದು ಭಕ್ತಿಯಿಂದ ರಾಯರನ್ನು
ಸ್ಮರಿಸಿ ಶ್ರೀರಾಘವೇಂದ್ರಸ್ತೋತ್ರವನ್ನು ಹೇಳಿಕೊಳ್ಳುತ್ತಾ ಶ್ರೀರಾಘವೇಂದ್ರಾಯನಮಃ
ಎಂದು ಜಪವನ್ನೂ ಮಾಡತೊಡಗಿದರು.ಇಬ್ಬರು ಕಾವಿಧಾರಿಗಳು ನದಿಯ ಪ್ರವಾಹದಲ್ಲಿ ಈಜಿಕೊಂಡು ಬಂದು ಇವರನ್ನು ಕರೆದುಕೊಂಡು
ನದಿಯ ದಡವನ್ನು ಸೇರಿಸುತ್ತಾರೆ.ದಾಸರಿಗೆ
ಒಬ್ಬರುತನ್ನಹೆಸರುರಾಘಪ್ಪಎಂತಲೂ,ಮತ್ತೊಬ್ಬರುವಾದಪ್ಪ ಎಂತಲೂ ಹೇಳಿ ಅದೃಶ್ಯರಾಗುತ್ತಾರೆ.
ಮಂತ್ರಾಲಯ ತಲುಪಿದ ದಾಸರು ಗುರುರಾಯರ ಬೃಂದಾವನದ ಎದುರುನಿಂತುಕೊಂಡು ಆನಂದ ಭಾಷ್ಪ ಸುರಿಸುತ್ತಾ “ಕರೆದರೆ ಬರಬಾರದೇ”ಎಂದು ಶ್ರೀರಾಯರಮೇಲೆ ಆನಂದ ಪರವಶರಾಗಿ ಹಾಡುತ್ತಾರೆ.
ಆಗ ಅಲ್ಲಿಗೆ ದಾಸರಗುರುಗಳಾದಇಭರಾಮಪುರದ
ಶ್ರೀಅಪ್ಪಾವರುಶ್ರೀರಾಯರದರ್ಶನಕ್ಕೆಬರುತ್ತಾರೆ.
ಜ್ಞಾನಿಗಳಾದಅಪ್ಪಾವರುದಾಸರನ್ನುಪ್ರವಾಹದಿಂದಪಾರುಮಾಡಿದವರುರಾಯರುಮತ್ತುವಾದೀಂದ್ರರು ಎಂದು ಹೇಳುತ್ತಾರೆ.ಹೀಗೆ ರಾಯರು ತಮ್ಮನ್ನು ನಂಬಿದಭಕ್ತರನ್ನುಹೇಗೆಸಂಕಷ್ಟಗಳಿಂದಕಾಪಾಡು
ವರು ಎಂಬುದು ತಿಳಿಯುತ್ತದೆ.
“ರಾಯರು,ಗುರುರಾಯರು,ಗುರುರಾಜರು”ಈ ಹೆಸರನ್ನು ಕೇಳಿದರೇ ನಮ್ಮ ನರನಾಡಿಗಳೆಲ್ಲ ಭಕ್ತಿಯಿಂದ ಕಂಪಿಸುತ್ತವೆ.ಆ ಹೆಸರನ್ನು ನೆನೆದರೆ,ಮನಸ್ಸಿನಲ್ಲಿ ಒಂದು ರೀತಿಯ ಧೈರ್ಯಮೂಡುತ್ತದೆ.
ಲೋಕದಲ್ಲಿಕೆಲವರುಕೇವಲತಮಗಾಗಿಬದುಕು
ತ್ತಾರೆ.ಇನ್ನು ಕೆಲವರುತಮ್ಮಸಾಧನೆಮರೆತುಕೇವಲ ಸಮಾಜಕ್ಕಾಗಿಬದುಕುತ್ತಾರೆ.ಆದರೆವಿಶಿಷ್ಟವ್ಯಕ್ತಿಗಳು
ಕೆಲವರುತಮ್ಮ ಸಾಧನೆಯ ಜೊತೆಗೆ ಸಮಾಜಕ್ಕೆ ಒಳಿತನ್ನುಮಾಡುವ ಗುರಿ ಹೊಂದಿರುತ್ತಾರೆ.ಅಂತಹ ಸಾಧಕರಲ್ಲಿಶ್ರೀರಾಘವೇಂದ್ರಗುರುಸಾರ್ವಭೌಮರು
ಅತ್ಯುನ್ನತಶ್ರೇಣಿಯಲ್ಲಿಕಂಡುಬರುತ್ತಾರೆ.ಶ್ರೀರಾಯರುತಾವುಸಾಧನೆಯನ್ನುಮಾಡುವುದಲ್ಲದೇಆಸಾಧನೆಯ ಫಲವನ್ನು ಜಾತಿಭೇದವಿಲ್ಲದೆ ಎಲ್ಲಾ ಭಕ್ತ ಜನರಿಗೆ ಹಂಚುತ್ತಾ ತಾವುಒಬ್ಬ ನಿಸ್ವಾರ್ಥ ಯೋಗಿ
ಗಳಾಗಿದ್ದಾರೆ.
ಸನ್ಯಾಸತ್ವವನ್ನು ಸ್ವೀಕರಿಸಿದವರು ಯಾವರೀತಿ
ಬದುಕಬೇಕುಯಾವರೀತಿಯಾಗಿಸಮಾಜಮುಖಿಯಾಗಿರಬೇಕೆಂಬುದನ್ನು ತಮ್ಮನಡೆ ನುಡಿಯಲ್ಲಿ ತೋರಿಸಿಕೊಟ್ಟಮಹಾನುಭಾವರುರಾಯರು.
ಶ್ರೀರಾಯರು ತಮ್ಮ ಭಕ್ತರು ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವಂತೆ ಕೋರಿ ಶರಣು ಹೋದವರಿಗೆ ಸಂಕಷ್ಟಗಳನ್ನು ಪರಿಹರಿಸಿ ಅನುಗ್ರಹಿಸಿದ್ದಾರೆ.
ರಾಯರ ಮೊದಲನೆಯ ಅವತಾರವಾದ ಪ್ರಹ್ಲದಾವತಾರದಲ್ಲಿ,ಪ್ರಹ್ಲಾದರಾಜರು ಬಾಲ್ಯದಲ್ಲಿ
ತನ್ನ ಸ್ನೇಹಿತರಿಗೆ ಭಗವಂತನ ಆರಾಧನೆ ಎಂದರೆ ಕೇವಲ ಪ್ರತಿಮೆಯ ಪೂಜೆಯೊಂದೇ ಅಲ್ಲ,ಎಲ್ಲಾ
ಸಜ್ಜನರ ಒಳಗೆ ಭಗವಂತನನ್ನು ಕಂಡುಕೊಂಡು
ಅವರಲ್ಲಿ ಪ್ರೀತಿ ತೋರಿಸಿ,ಅವರಕಷ್ಟಗಳಿಗೆಸ್ಪಂದಿಸಿ
ಸಹಾಯ ಮಾಡುವುದೇ ನಿಜವಾದ ಭಗವಂತನ ಪೂಜೆ ಎಂದು ತಿಳಿಸುತ್ತಾರೆ.
ಅದರಂತೆ ರಾಯರು ಎಲ್ಲಾ ಭಕ್ತರಲ್ಲೂ ಭಗವಂತ
ನನ್ನು ಕಂಡು ಅವರ ಕಷ್ಟಗಳನ್ನು ಪರಿಹರಿಸುತ್ತಾ ತಮ್ಮಸಾಧನೆಯನ್ನುಪೂರ್ಣಗೊಳಿಸಿಕೊಳ್ಳುತ್ತಿ
ದ್ದಾರೆ.ಎರಡನೆಯಅವತಾರವಾದಬಾಲ್ಹೀಕರಾಜರಾಗಿಕುರುವಂಶದಲ್ಲಿ ಹುಟ್ಟಿ ಭೀಮಸೇನ ದೇವರಿಂದ ಅವರ ಅವತಾರ ಸಮಾಪ್ತಿಯಾಗುತ್ತದೆ.
ಮೂರನೆಯ ಅವತಾರದಲ್ಲಿ ವ್ಯಾಸರಾಯರಾಗಿ
ಅವತರಿಸಿವಿಜಯೀಂದ್ರತೀರ್ಥರುಮತ್ತುವಾದಿರಾಜ
ರಂತಹಜ್ಞಾನಿಗಳನ್ನುಲೋಕಕ್ಕೆಕೊಟ್ಟಂತಹಮಹಾತ್ಮರು.ಪುರಂದರದಾಸರು ಮತ್ತು ಕನಕದಾಸರಂತಹ
ಹರಿದಾಸರತ್ನಗಳಿಗೆಅಂಕಿತವನ್ನುಪ್ರದಾನಮಾಡಿರುವಮಹಾನುಭಾವರು.ಇನ್ನುನಾಲ್ಕನೆಯಅವತಾರವೇ ನಾವು ಭಕ್ತಿಯಿಂದ ಆರಾಧಿಸುತ್ತಿರುವ ಶ್ರೀರಾಘವೇಂದ್ರ ಗುರು ಸೌರ್ವಭೌಮರು.
ಈ ಕಲಿಯುಗದಲ್ಲಿ ಶ್ರೀರಾಯರು ತಾವು
ಸಂಪಾದಿಸಿದ್ದ ಪುಣ್ಯವನ್ನು ಭಕ್ತಕೋಟಿಗೆ ಧಾರೆ
ಯೆರೆಯುತ್ತಿರುವ ಕರುಣಾಮಯಿಗಳು.ರಾಯರು ಹುಟ್ಟಿದ್ದುತಮಿಳುನಾಡಿನಭುವನಗಿರಿಯಲ್ಲಿ,ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ್ದು ಆಂಧ್ರ
ಪ್ರದೇಶದ ಮಂತ್ರಾಲಯದಲ್ಲಿ.ದೇಶ ವಿದೇಶಗಳಲ್ಲಿ ಅಪಾರಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವವರು ರಾಯರು.ಶ್ರೀರಾಘವೇಂದ್ರತೀರ್ಥರುಅವರ
ವೇದಾಂತಸಾಮ್ರಾಜ್ಯದ ಪೀಠವನ್ನಲಂಕರಿಸಿದ 50 ವರ್ಷಗಳ(ಕ್ರಿಶ1621ರಿಂದಕ್ರಿಶ1671)ಅವಧಿಯಲ್ಲಿ
ಬಹಳಷ್ಟು ಗ್ರಂಥಗಳನ್ನು ರಚಿಸಿದ್ದಾರೆಂದು
ತಿಳಿದು ಬರುತ್ತದೆ.ಶ್ರೀರಾಯರು ಅಲಂಕಾರಶಾಸ್ತ್ರ,
ಕಾವ್ಯ,ಕವಿತಾ,ನಾಟಕಕಲೆ,,ನ್ಯಾಯ,ವ್ಯಾಕರಣ,ಪೂರ್ವಮೀಮಾಂಸಾ,ವೇದ,ಸ್ಮ್ರುತಿ ಇವುಗಳಲ್ಲಿ ಪಾರಂಗತರಾಗಿದ್ದರಲ್ಲದೆ ಸಂಗೀತ ಶಾಸ್ತ್ರದಲ್ಲೂ
ಪಾರಂಗತರಾಗದ್ದರೆಂದು ಅವರ ಆಪ್ತ ಶಿಷ್ಯರಾಗಿದ್ದ ಅಪ್ಪಣ್ಣಾಚಾರ್ಯರಿಂದ ತಿಳಿದುಬರುತ್ತದೆ.
“ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವತೋರೋಮುಕುಂದಇಂದಿರೆರಮಣ”
ಎಂಬ ಕೃತಿಯು ರಾಯರಿಗೆಕವಿತಾ ರಚನೆಯ ಸಾಮರ್ಥ್ಯ ಮತ್ತು ಸಂಗೀತ ಶಾಸ್ತ್ರದಲ್ಲಿಯ ನಿಪುಣತೆಗೆ ಸಾಕ್ಷಿಯಾಗಿದೆ.
ಫಾಲ್ಗುಣಮಾಸದ ಶುಕ್ಲ ಪಕ್ಷದ ದ್ವಿತೀಯದಂದು
ಶ್ರೀರಾಯರ ಪಟ್ಟಾಭಿಷೇಕ ಮಹೋತ್ಸವವೂ ಮತ್ತು ಇದೇ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ರಾಯರ ವರ್ಧಂತಿಉತ್ಸವವನ್ನುಬಹಳವಿಜೃಂಭಣೆ
ಯಿಂದ ಆಚರಿಸಲಾಗುತ್ತದೆ.
ಫಾಲ್ಗುಣಮಾಸದಶುಕ್ಲಪಕ್ಷದದ್ವಿತೀಯಾದಿಂದ ಸಪ್ತಮಿವರೆಗೆಶ್ರೀರಾಯರಿಗೆವಿಶೇಷಪೂಜೆ,ಉತ್ಸವಗಳುಮತ್ತುಪಂಡಿತರಿಂದಉಪನ್ಯಾಸಕಾರ್ಯಕ್ರಮಗಳುನಡೆಯುತ್ತವೆ.ಈಒಂದುವಾರವನ್ನು”ಶ್ರೀರಾಘವೇಂದ್ರಸಪ್ತಾಹ”ವೆಂದೂ ಆಚರಿಸಲಾಗುತ್ತದೆ.
ಶ್ರೀರಾಯರು ಶ್ರೀರುಧಿರೋದ್ಗಾರಿ ಸಂವತ್ಸರದ
ಶ್ರಾವಣ ಬಹುಳ ದ್ವಿತೀಯಾದಂದು(ಕ್ರಿ ಶ1671ನೇ ಆಗಸ್ಟ್ ಮಾಹೆ)ಸಶರೀರಾಗಿ ವೃಂದಾವನವನ್ನು ಪ್ರವೇಶ ಮಾಡಿದ್ದಾರೆ.ಈ ವಿಶೇಷವಾದ ದಿನವನ್ನು ಶ್ರೀರಾಯರ ಆರಾಧನಾ ಮಹೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.ಈ ವರ್ಷ ಶ್ರಾವಣ ಬಹುಳ ಬಿದಿಗೆಯಂದು ಆಚರಿಸುತ್ತಿರುವುದು ಶ್ರೀರಾಯರ 353ನೇವರ್ಷದಆರಾಧನಾಮಹೋತ್ಸವವಾಗಿರುತ್ತೆ
ಎನ್.ಜಯಭೀಮ್ ಜೊಯ್ಸ್.ಶಿವಮೊಗ್ಗ