Thursday, July 9, 2026
Thursday, July 9, 2026

Wayanad landslide ಮೃತ ಮಗಳ ದೇಹ‌ ಸಿಗಲಿಲ್ಲ. ಕೇವಲ‌ ಕೈ ಸಿಕ್ಕಿತು. ಪುತ್ರಿಯ ಕೈಯೆಂದು ಪತ್ತೆ ಹಚ್ಚಿ ಅಂತ್ಯೇಷ್ಠಿ ನಡೆಸಿದ ತಂದೆ

Date:

Wayanad landslide ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ಮುದ್ದಿನ ಮಗಳು, ಮಗನಂತಹ ಅಳಿಯ, ಮುದ್ದಾದ ಮೊಮ್ಮಗ, ತನ್ನ ಮಡದಿ ಎಲ್ಲರೂ ಈತನ ಕಣ್ಣೆದುರೇ ಜಲ ಪ್ರವಾಹದಲ್ಲಿ ಕಣ್ಮರೆಯಾಗಿ ಬಿಟ್ಟರು.

ತನ್ನ ಕುಟುಂಬದವರಿಗಾಗಿ ಆತ ಹುಡುಕಾಡದ ಸ್ಥಳವಿಲ್ಲ. ಕೊನೆಗೆ ದೂರದಲ್ಲಿ ಉಕ್ಕಿ ಹರಿಯುತ್ತಿದ್ದ ಚಲಿಯಾರ್ ನದಿಯಲ್ಲಿ

ಮಹಿಳೆಯೊಬ್ಬರ ಕೈಯೊಂದು ಸಿಕ್ಕಿದೆ. ಇದು ಯಾರ ಕೈ? ಅವರ ಕಡೆಯವರು ಯಾರಾದರೂ ಗುರುತಿಸಬಹುದಾ ಎಂದುಕೊಂಡು ರಕ್ಷಣಾ ಕಾರ್ಯಪಡೆಯ ಸದಸ್ಯರು ಅದನ್ನು ಇಟ್ಟಿದ್ದರು. ಏಕೆಂದರೆ, ಗುರುತಿಸಲು ಸಾಧ್ಯವಾಗುವಂತಹ ಕುರುಹು ಅ ಕೈಯಲ್ಲಿತ್ತು. ಅದೆಂದರೆ, ಅದರ ಬೆರಳಲ್ಲಿ ಒಂದು ಉಂಗುರವಿತ್ತು.

ಅದನ್ನು ನೋಡಿದ ಒಬ್ಬ ವ್ಯಕ್ತಿ ಈ ಕೈ ನನ್ನ ಮಗಳದ್ದು ಎಂದು ದುಃಖಿಸಿದ್ದಾನೆ. ಮಗಳ ಕೈಯನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಅತ್ತುಬಿಟ್ಟಿದ್ದಾನೆ . ಈ ಸಾವು ಯಾರಿಗೂ ಯಾವ ತಂದೆಯ ಎದುರು ನೆಡೆಯದಿರಲಿ ಎಂದು ಎದೆಬಡಿದುಕೊಂಡು ತನ್ನ ಮನದಾಳದ ನೋವನ್ನೆಲ್ಲ ಹೊರಹಾಕಿದ್ದಾನೆ.

ಮಗಳ ದೇಹ ಸಿಗದ ಕಾರಣಕ್ಕೆ ತಾನು ಕೈಹಿಡಿದು ಸಾಕಿದ ಮಗಳು ತನ್ನ ಕೈಯಷ್ಟನ್ನೆ ಮಗಳಿಗೆ ಅಂತಿಮ ವಿದಾಯ ಹೇಳಿದ್ದಾನೆ ಆತ. ಅವನು ಬೇರಾರೂ ಅಲ್ಲ. ಅವಳ ತಂದೆ. ಸಿಕ್ಕ ಒಂದು ಕೈಯನ್ನಷ್ಟೇ ಚಿತೆಯ ಮೇಲೆ ಇಟ್ಟು ಅಗ್ನಿ ಸ್ಪರ್ಶಿಸಿ ದುಃಖಿಸುತ್ತಲೆ ಮಗಳ ಅಂತ್ಯಕ್ರಿಯೆ ಮುಗಿಸಿದ

ಈ ಘಟನೆಯಲ್ಲಿ ಸಿಕ್ಕ ಮಗಳ ಕೈಯೊಂದನ್ನೆ ಚಿತೆಗಿಟ್ಟು ಅಗ್ನಿಸ್ಪರ್ಶ ಮಾಡಿದ ನತದೃಷ್ಟ ತಂದೆಯ ಹೆಸರು ರಾಮಸ್ವಾಮಿ. ಇತನ ಪುತ್ರಿ ಜೀಶಾ. ತಂದೆಯ ಕೈ ಹಿಡಿದೇ ಬೆಳೆದ ಮುದ್ದಾದ ಮಗಳು. ರಾಮಸ್ವಾಮಿ ಅವರು ತನ್ನ ಮಗನ ಸಮಾನನಾದ ಮುರುಗನ್ ಎನ್ನುವವನಿಗೆ ಪುತ್ರಿ ಜೀಶಾಳನ್ನು ಕೈ ಹಿಡಿದು ಧಾರೆ ಎರೆದುಕೊಟ್ಟಿದ್ದರು. ಆದರೆ ಭೂಕುಸಿತದಲ್ಲಿ ಮಗಳು, ಅಳಿಯ, ಮೊಮ್ಮಗ ಅಕ್ಷಯ್ ಹಾಗೂ ರಾಮಸ್ವಾಮಿಯ ಮಡದಿ ತೆಂಕಮ್ಮ ಎಲ್ಲರೂ ಕಣ್ಮರೆಯಾಗಿಬಿಟ್ಟರು.

Wayanad landslide ಭೂಕುಸಿತ ಜಲಪ್ರವಾಹಕ್ಕೆ ಅವರೆಲ್ಲಾ ಕೊಚ್ಚಿ ಹೋಗಿದ್ದರು. ರಾಮಸ್ವಾಮಿ ಅದು ಹೇಗೋ ಬಚಾವಾಗಿ ಬಿಟ್ಟಿದ್ದರು. ಕಣ್ಮರೆಯಾದ ಕುಟುಂಬದವರಲ್ಲಿ ಮುದ್ದಾದ ಮೊಮ್ಮಗ ಅಕ್ಷಯ್ ಶವ ಮಾತ್ರ ಸಿಕ್ಕಿತ್ತು. ಉಳಿದವರ ಸುಳಿವೆ ಇಲ್ಲ. ಮೃತ ದೇಹಗಳ ಹುಡುಕಾಟಕ್ಕೆ ಮುಂದಾಗಿದ್ದ ರಕ್ಷಣಾ ಪಡೆಗೆ ಚಲಿಯಾರ್ ನದಿಯಲ್ಲಿ ಮಹಿಳೆಯೊಬ್ಬರ ಒಂದು ಕೈ ಸಿಕ್ಕಿತ್ತು. ಅದರ ಬೆರಳಲ್ಲಿ ಉಂಗುರ ಇತ್ತು.ಉಂಗುರದಲ್ಲಿ ’ಮುರುಗನ್’ ಎಂಬ ಹೆಸರಿದ್ದರಿಂದ ಅದನ್ನು ನೋಡಿದ ರಾಮಸ್ವಾಮಿ ದುಃಖ ತಡೆಯಲಾಗದೆ ನನ್ನ ಮಗಳು, ನನ್ನ ಮಗಳು.ಎಂದು ಎದೆ

ಬಡಿದುಕೊಂಡು ಅಳಲಾರಂಭಿಸಿದ್ದ. ಕಣ್ಣೀರಿಡುತ್ತಲೇ ಮಗಳ ಅಂತ್ಯಕ್ರಿಯೆಗಾಗಿ ಸಣ್ಣ ಚಿತೆಯನ್ನು ಮಾಡಿ ರೋಧಿಸುತ್ತಾ, ತಲೆಯನ್ನು ಚಚ್ಚಿಕೊಳ್ಳುತ್ತಾ, ಕೈಹಿಡಿದು ಬೆಳೆಸಿದ ಮಗಳ ಚಿತೆಯಲ್ಲಿಟ್ಟು ಅಗ್ನಿ ಸ್ಪರ್ಶಮಾಡಿದ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...