Tuesday, April 7, 2026
Tuesday, April 7, 2026

World Beautician Day ಎಲ್ಲರಿಗೂ ಸರ್ಕಾರಿಉದ್ಯೋಗ ಸಾಧ್ಯವಿಲ್ಲ. ಸ್ವಂತ ಉದ್ಯೋಗ ಆರಂಭಿಸಿ – ಅಶ್ವಿನಿ.ಪಿ.ಗೌಡ

Date:

World Beautician Day ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವ- ಉದ್ಯೋಗ ಪ್ರಾರಂಭಿಸಿ , ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿರಬೇಕು ಎಂದು ಶಿವಮೊಗ್ಗ ಅಸೋಸಿಯೇಷನ್ ಬ್ಯೂಟಿಷಿಯನ್ ಅಧ್ಯಕ್ಷೆ ಅಶ್ವಿನಿ ಪಿ ಗೌಡ ಹೇಳಿದರು.

ಬಿಗ್ ಬ್ಯೂಟಿ ಪಾರ್ಲರ್ ವತಿಯಿಂದ ವಿಶ್ವ ಬ್ಯೂಟಿಷಿಯನ್ ದಿನದ ಅಂಗವಾಗಿ ಹಲವಾರು ವಷ್ಗಳಿಮದ ಬ್ಯೂಟಿಷಿಯನ್ ವೃತ್ತಿ ನಡೆಸಿಕೊಂಡು ಬಂದಿರುವ ಹಿರಿಯ ಬ್ಯೂಟಿಷಿಯನ್‌ಗಳಾದ ರೇಖಾ ಸತೀಶ್, ಲತಾ ರಮೇಶ್, ಜ್ಯೋತಿ, ಕವಿತಾ ಪಿಂಕಿ, ರಾಜಶ್ರೀ ಕಾಮತ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಮಹಿಳೆಯರಲ್ಲಿ ಈಗ ಸೌಂದರ್ಯಪ್ರಜ್ಞೆ ಹೆಚ್ಚುತ್ತಿದ್ದು, ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಸಮಾಜದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ . ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್ ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆ ಶ್ಲ್ಲಾಘನೀಯ ಎಂದರು.

ಮಹಿಳೆಯರು ಸಹ ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರು ಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರು ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಹೀಗಾಗಿ ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ಈ ಮೂಲಕ ನೀಡಬೇಕು ಎಂದು ಹೇಳಿದರು.

21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಮಹಿಳೆ ಪುರುಷನಷ್ಟೇ ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ನಗರ-ಗ್ರಾಮೀಣ ಪ್ರದೇಶವೆನ್ನದೆ ಸೌಂದರ್ಯಪ್ರಜ್ಞೆ ಎಲ್ಲ ವಯೋಮಾನದ ಮಹಿಳೆಯರಲ್ಲಿ ಮೂಡುತ್ತಿದೆ. ಬ್ಯೂಟಿ ಪಾರ್ಲರ್ ಉದ್ಯಮ ಬೇಡಿಕೆಯ ಉದ್ಯಮವಾಗಿದೆ. ಮಹಿಳೆಯರು ಕೂಡ ಯಶಸ್ವಿ ಉದ್ಯಮಿಗಳಾಗಲು ಅವಕಾಶ ಇದೆ ಎಂದರು.

World Beautician Day ಇದೇ ಸಂದರ್ಭದಲ್ಲಿ ಸಮಾಜಸೇವಕರಾದ ಲಕ್ಷ್ಮಿ ಶಿಕ್ಷಕಿ, ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪಾಲಿಕೆಯ ಮಾಜಿ ಸದಸ್ಯೆ ಗೌರಿ ಶ್ರೀನಾಥ್, ಶಿವಮೊಗ್ಗ ಬ್ಯೂಟಿಷಿಯನ್ ಸಂಘದ ಪದಾಧಿಕಾರಿಗಳಾದ ಪಲ್ಲವಿ, ಐಶ್ವರ್ಯಾ, ಭವಾನಿ, ಬಿಂದು, ಪದ್ಮಾ, ಪಾವನಿ, ಶಿಲ್ಪಾ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Channabasappa ಸಮಾಜದ ಪ್ರತಿಯೊಬ್ಬರಿಗೂ ತರಬೇತಿ ಕೇಂದ್ರದ ಪ್ರಯೋಜನ ಸಿಗಲಿ- ಎಸ್.ಎನ್.ಚನ್ನಬಸಪ್ಪ

S.N.Channabasappa ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ, ಶಿವಮೊಗ್ಗ ಇವರ...

Kuvempu University ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕರಿಗೆ ಹೆಚ್ಚಿನ ಬೇಡಿಕೆ: ಭಾಷಾ ಪ್ರೌಢಿಮೆ, ವಿಷಯಗಳ ಸಮಗ್ರ ಅರಿವು ಮುಖ್ಯ- ಹೊನ್ನಾಳಿ ಚಂದ್ರಶೇಖರ್

Kuvempu University ಪತ್ರಕರ್ತರಾಗಬೇಕಾದರೆ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ನಿರಂತರ ಓದುತ್ತಾ...