Wednesday, October 2, 2024
Wednesday, October 2, 2024

Youth Hostels Association ಮಥುರ ಪ್ಯಾರಡೈಸ್ – 25, ಆಚರಣೆ ನಿಮಿತ್ತ ಮಳೆಗಾಲದ ಚಾರಣಕ್ಕೆ ಚಾಲನೆ

Date:

Youth Hostels Association ಹವಾಗುಣ ಬದಲಾಗಿ ಬೇಸಿಗೆಯಿಂದ ಮಳೆಗಾಲ ಪ್ರಾರಂಭವಾಗಿದೆ. ಪ್ರಕೃತಿಯ ಈ ಬದಲಾವಣೆಯನ್ನು ಆಸ್ವಾದಿಸುವ ಸಲುವಾಗಿ ನಮ್ಮ ತರುಣೋದಯ ಘಟಕದ ಸದಸ್ಯರನ್ನು ಬೀಳ್ಕೊಡುತ್ತಿರುವುದಾಗಿ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.

ಪ್ರತಿ ವರ್ಷವೂ ಗೋವಾ ಯೂತ್ ಹಾಸ್ಟೇಲ್ಸ್ ಮಾನ್ಸೂನ್ ಚಾರಣ ಏರ್ಪಡಿಸಲಾಗುತ್ತಿದ್ದು, ನಮ್ಮ ಘಟಕದ ನೂರಾರು ಸದಸ್ಯರು ಪ್ರತಿ ವರ್ಷವೂ ಹೋಗಿ ಭಾಗವಹಿಸುತ್ತಾರೆ. ಈ ಸಾರಿಯು ಮುವತ್ತಮೂರು ಸದಸ್ಯರ ಪ್ರಥಮ ತಂಡ ಹೊರಟಿರುವುದಾಗಿ ತಿಳಿಸಿದ ಅವರು, ಚಾರಣದ ನೇತ್ರತ್ವ ವಹಿಸಿದ್ದ ಆ.ನ.ವಿಜಯೇಂದ್ರ ರಾವ್ ಮಥುರಾ ಪ್ಯಾರಡೈಸ್ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ತರುಣೋದಯ ಘಟಕ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹಲವಾರು ಸಂಘ ಸಂಸ್ಥೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಗರದ ಹಲವಾರು ಕಡೆ ಆಯೋಜಿಸಲು ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ 2024-25 ತೀರ್ಮಾನಿಸಿದೆ. ಆ ಪ್ರಯುಕ್ತ ಪ್ರಥಮ ಕಾರ್ಯಕ್ರಮ ಇದಾಗಿದೆ ಎಂದರು.

ಯೂತ್ ಹಾಸ್ಟೆಲ್ಸ್ ನ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಚಾರಣ ನಮ್ಮ ಮನಸ್ಸಿಗೆ ದೇಹಕ್ಕೆ ಸದೃಢತೆ ಕೊಡುವುದರ ಜೊತೆಗೆ ಚಾರಣ ಮಾಡುವಾಗ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಚಾರಣದಿಂದ ಪರಸ್ಪರರಲ್ಲಿ ಒಡನಾಟ ಸಂಪರ್ಕ ಹಾಗೂ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಸುರಕ್ಷಿತವಾಗಿ ಚಾರಣ ಮಾಡಲು ಯೂತ್ ಹಾಸ್ಟೆಲ್ ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.

Youth Hostels Association ತಂಡದ ನೇತೃತ್ವವನ್ನು ವಹಿಸಿದ್ದ ಸಾಹಸಿ ಆ.ನಾ.ವಿಜಯೇಂದ್ರ ರಾವ್ ಮಾತನಾಡಿ, ಈಗಾಗಲೇ ನಮ್ಮ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಅಂಡಮಾನ್ ಹಾಗೂ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಪ್ರವಾಸ ಹಾಗೂ ಚಾರಣವನ್ನು ಏರ್ಪಡಿಸಿದ್ದು ಯಶಸ್ವಿಯಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನ ಸದಸ್ಯರು ಯೂಥ್ ಹಾಸ್ಟೆಲ್ ನ ಸದಸ್ಯತ್ವವನ್ನು ಪಡೆದುಕೊಂಡು ಚಾರಣಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂತೇಶ್ ಕದರಮಂಡರಗಿ, ಡಾ. ಧನಂಜಯ್, ಪ್ರೊ. ನಾಗಭೂಷಣ್, ಕೆ.ಜಿ.ವೆಂಕಟೇಶ್, ವ್ಯದ್ಯಹವಾಲ್ದಾರ್, ಸವಿತಾನಾಗಭೂಷಣ್, ಶೇಖರ್ ಗೌಳೇರ್ ಮುಂತಾದವರು ಭಾವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....