Railway Department ಬೆಂಗಳೂರಿನಲ್ಲಿ ಭಾರತ ಸರ್ಕಾರದ ರಾಜ್ಯ ರೈಲ್ವೆ ಮಂತ್ರಿಗಳಾದ ಶ್ರೀ ವಿ. ಸೋಮಣ್ಣರವರನ್ನು ರೈಲ್ವೆ ಕ್ರಿಯಾ ಸಮಿತಿ ನಿಯೋಗ ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿತು.
ಮನವಿ ಪತ್ರದಲ್ಲಿರುವ ರೈಲ್ವೆ ಬೇಡಿಕೆಗಳ ಜೊತೆಗೆ ರಾಯದುರ್ಗ ತುಮಕೂರು ನೂತನ ಬ್ರಾಡ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಸಚಿವರಲ್ಲಿ ವಿನಂತಿಸಲಾಯಿತು.
ಈ ಕಾಮಗಾರಿಯ ವೀಕ್ಷಣೆಯನ್ನು ಈ ದಿನವೇ ಮಾಡುತ್ತಿರುವುದಾಗಿ ಸಚಿವರು ತಿಳಿಸಿದರು.
ಹಿರಿಯ ನಾಗರಿಕರಿಗೆ ರೈಲ್ವೆಯಲ್ಲಿ ರಿಯಾಯಿತಿ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಲು ವಿನಂತಿಸಲಾಯಿತು.
ಮನವಿ ಪತ್ರದಲ್ಲಿ ಕೋರಿರುವ ಬಳ್ಳಾರಿ ಭಾಗಕ್ಕೆ ದೊರೆಯಬೇಕಾದ ರೈಲ್ವೆಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಂತ್ರಿಗಳು ಅಧಿಕಾರಿಗಳಿಗೆ ಸಮಿತಿಯ ಸಮಕ್ಷಮದಲ್ಲಿ ಸೂಚನೆ ನೀಡಿದ್ದಾರೆ.
ಬಳ್ಳಾರಿ ಭಾಗದ ಜನತೆಯ ಪರವಾಗಿ
ಹಾಗೂ ಬಿಜೆಪಿ ಪಕ್ಷದ ಪರವಾಗಿ ನಿಲುಗಡೆಯಾಗಿರುವ ರೈಲುಗಳನ್ನು ಪುನರಾರಂಭಿಸುವಂತೆ ಸಚಿವರಲ್ಲಿ ವಿನಂತಿಸಲಾಯಿತು.
Railway Department ರೈಲು ಸಂಖ್ಯೆ 07335 07336
ಬೆಳಗಾವಿ ಸಿಕಂದ್ರಾಬಾದ್ ಭದ್ರಾಚಲಂ ಬೆಳಗಾವಿ
ದಿನನಿತ್ಯದ ಎಕ್ಸ್ಪ್ರೆಸ್ ರೈಲು ಹಾಗೂ ರೈಲು ಸಂಖ್ಯೆ 07589 07590
ಕದರಿದೇವನಪಲ್ಲಿ ಬಳ್ಳಾರಿ ತಿರುಪತಿ
ಕದರಿದೇವನಪಲ್ಲಿ
ದಿನನಿತ್ಯದ ರೈಲು ಮತ್ತು ರೈಲು ಸಂಖ್ಯೆ 06223 06224
ಶಿವಮೊಗ್ಗ – ಬಳ್ಳಾರಿ – ಚೆನ್ನೈ, ಶಿವಮೊಗ್ಗ ಬೈ ವೀಕ್ಲಿ ಎರಡು ದಿನದ ಎಕ್ಸ್ಪ್ರೆಸ್ ರೈಲು…..ಈ ರೈಲುಗಳು ವಿಶೇಷ ರೈಲುಗಳಾಗಿ ಸಂಚರಿಸುತ್ತಿತ್ತು. ಆದರೆ ನೈರುತ್ಯ ರೈಲ್ವೆ ಅಧಿಕಾರಿಗಳು ಕಾರಣಾಂತರದಿಂದ ಇವುಗಳನ್ನು ರದ್ದು ಮಾಡಿದ್ದಾರೆ.
ಕೂಡಲೇ ಈ ರೈಲುಗಳು ಪುನರಾರಂಭವಾಗಬೇಕು ಜೊತೆಗೆ ರೆಗುಲರ್ ರೈಲುಗಳಾಗಿ ಸಂಚರಿಸಬೇಕು. ಬಳ್ಳಾರಿ ಮಾರ್ಗದಲ್ಲಿ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೂಡಾ ಬೇಕು.
ಬಳ್ಳಾರಿ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಿ ಹಿಂದಕ್ಕೆ ಬರಲು ಒಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಕೂಡಲೇ ಆರಂಭಿಸಲು ಸನ್ಮಾನ್ಯ ರೈಲ್ವೆ ಮಂತ್ರಿಗಳು ಸೂಕ್ತ ಮಾರ್ಗದರ್ಶನವನ್ನು ರೈಲ್ವೆ ಇಲಾಖೆಗೆ ನೀಡಬೇಕಾಗಿ ಕೋರಿಕೊಳ್ಳಲಾಯಿತು.
ಬಳ್ಳಾರಿ ಮಾರ್ಗದಲ್ಲಿ ಕಲ್ಬುರ್ಗಿ ಹಾಗೂ ಬೀದರ್ ಗೆ ಹೋಗಿ ಬರಲು ಒಂದೇ ಭಾರತ್ ರೈಲು ಅಥವಾ ಎಕ್ಸ್ಪ್ರೆಸ್ ರೈಲು ಆರಂಭಿಸಲು ನೈರುತ್ಯ ರೈಲ್ವೆಗೆ ಸಚಿವರು ನಿರ್ದೇಶನ ನೀಡಲು ಸಹ ಈ ಕೋರಿಕೊಳ್ಳಲಾಯಿತು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಮ್.ಮಹೇಶ್ವರ ಸ್ವಾಮಿ, ಎ.ಟಿ.ಪರಮೇಶ್ವರಪ್ಪ,
ಪರಶುರಾಮ ಶಾಸ್ತ್ರಿ ಉಪಸ್ಥಿತರಿದ್ದರು.