B.K. Sangameshwar ಭಾರತ ದೇಶಕ್ಕೆ ಮಾತ್ರವಲ್ಲದೆ ಪ್ರಪಂಚದ ಯಾವ ರಾಷ್ಟ್ರದಲ್ಲೂ ನೀಡದಂತಹ ಪಂಚ ಯೋಜನೆಗಳನ್ನು ಬಡವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ನೀಡಿ ಮಾದರಿ ಯಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಭದ್ರಾವತಿ ತಾಲೂಕು ಪಂಚಾಯತಿ ಕಚೇರಿ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಹಳೇ ಕಟ್ಟಡದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಮತ್ತು ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿರುವ ಎಸ್.ಮಣಿಶೇಖರ್ ಅವರ ಕಚೇರಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ ಕಾಳಜಿ ಹೊತ್ತ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ಅಧಿಕಾರದ ಆಸೆಗಾಗಿ ಧರ್ಮದ ಹೆಸರಲ್ಲಿ ಶ್ರೀಮಂತರಿಗೆ ಮಣೆ ಹಾಕುವ ಬಿಜೆಪಿ ಕೋಮುವಾದಿ ಪಕ್ಷದಿಂದ ಬಡವರ ಕಲ್ಯಾಣ ಅಸಾಧ್ಯ. ಇವರೊಂದಿಗೆ ಕೈಜೋಡಿಸಿರುವ ಜೆಡಿಎಸ್‌ನ ದೇವೇಗೌಡರ ಕುಮಾರಸ್ವಾಮಿಯವರ ನಿಜ ಬಣ್ಣ ಬಯಲಾಗಿದೆ.
ಬಿಜೆಪಿ ಕೇವಲ ಬೋಗಸ್ ಆಶ್ವಾಸನೆ ನೀಡಿ ಬಡವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳೆಂದಿಗೂ ನಿಲ್ಲುವುದಿಲ್ಲ. ಆರ್ಥಿಕ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಗ್ಯಾಂಟಿಗಳನ್ನು ನೀಡಿ ಮಾದರಿಯಾಗಿದ್ದಾರೆ.
ಶೇ ೯೦ ರಷ್ಟು ಯಶಸ್ವಿಯಾಗಿದೆ. ಇನ್ನುಳಿದ ಶೇ ೧೦ ಜನರಿಗೆ ಗ್ಯಾರಂಟಿ ಸಮಿತಿ ಸದಸ್ಯರು ತಲುಪಿಸುವ ಕೆಲಸ ಮಾಡಬೇಕೆಂದರು.
ಅನುಷ್ಟಾನ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್ ಮಾತನಾಡಿ, ಶಾಸಕರು ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಂತೆ ಹಾಗೂ ಬಡ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ನಮ್ಮ ಮೇಲೆ ನಂಬಿಕೆಯಿಟ್ಟು ಸ್ಥಾನಮಾನ ನೀಡಿದ್ದಾರೆ.
ಶಾಸಕರ ಸಲಹೆ ಸೂಚನೆ ಮೇರೆಗೆ ಪ್ರಾಮಾಣಿಕವಾಗಿ ಜನರಿಗೆ ತಲುಪಿಸಲು ಶ್ರಮಿಸಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆಂದರು.
B.K. Sangameshwar ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು ಮತ್ತು ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಪ್ರವೀಣ್, ಮುರುಗೇಶ್, ನಾಗೇಶ್, ತಾಪಂ ಇಓ ಗಂಗಣ್ಣ, ಸಿಡಿಪಿಓ ಸುರೇಶ್, ನಗರಸಭಾ ಸದಸ್ಯರಾದ ಮಣಿ, ಶಬ್ಬೀರ್, ಬಷೀರ್ ಆಹಮ್ಮದ್, ಬಿ.ಟಿ.ನಾಗರಾಜ್ ಹಾಜರಿದ್ದರು.
