Chamber of Commerce Shivamogga ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿನ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ಅಶೋಕ ನಗರದ ಎಆರ್‌ಬಿ ಕಾಲನಿಯ ಯೋಗ ಮಂದಿರದಲ್ಲಿ ಕದಂಬ ಕರೋಕೆ ಗ್ರೂಪ್ ವತಿಯಿಂದ ಆಯೋಜಿಸಿದ್ದ ಕದಂಬ ಕರೋಕೆ ಗಾಯನ ಸ್ಪರ್ಧೆ ಸೀಸನ್ 2ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತದ ಕಲಿಕೆಯಿಂದ ಮನುಷ್ಯನ ಖಿನ್ನತೆ ದೂರಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ ನೆರವಾಗುತ್ತದೆ ಎಂದು ತಿಳಿಸಿದರು.
ಕದಂಬ ಕರೋಕೆ ಗ್ರೂಪ್‌ನಲ್ಲಿ ಸಾಕಷ್ಟು ಜನ ಕಲಾವಿದರು ತಮ್ಮದೇ ಆದ ರೀತಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭದ್ರಾವತಿ ವಾಸು ಸಾರಥ್ಯದಲ್ಲಿ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಗಾಯಕ ಭದ್ರಾವತಿ ವಾಸು ಮಾತನಾಡಿ, ಕಠಿಣ ಪರಿಶ್ರಮದ ಪ್ರಯತ್ನದಿಂದ ಧ್ವನಿ ಸಂಸ್ಕರಣೆಗೆ ಪ್ರಾಮುಖ್ಯತೆ ನೀಡಬೇಕು. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಬೇಕು. ಕದಂಬ ಕರೋಕೆ ಗ್ರೂಪ್‌ನಿಂದ ಹೊಸ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಎಎಸ್‌ಐ ರವಿ ಚವ್ಹಾಣ್ ಮಾತನಾಡಿ, ಸ್ಪರ್ಧೆಗಳ ಆಯೋಜನೆಯಿಂದ ಪ್ರತಿಭಾನ್ವಿತರಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.
ಕದಂಬ ಕರೋಕೆ ಸೀಸನ್ 2ರಲ್ಲಿ ಶಿಕಾರಿಪುರ ರಾಜು ಪ್ರಥಮ, ಶಿಕಾರಿಪುರ ಗುರುರಾಜ್ ದ್ವಿತೀಯ ಹಾಗೂ ಶಿವಮೊಗ್ಗದ ಅಜಯ್ ತೃತೀಯ ಸ್ಥಾನ ಪಡೆದು ಬಹುಮಾನ ವಿಜೇತರಾದರು. ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಯುಗಳ ಗೀತೆ, ವೈಯುಕ್ತಿಕ ಗೀತೆ ಗಾಯನ, ಕನ್ನಡ, ಹಿಂದಿ ಗೀತೆಗಳನ್ನು ಕಲಾವಿದರು ಹಾಡಿದರು.
Chamber of Commerce Shivamogga ಆದ್ಯಾ ಪ್ರಶಾಂತ್, ರಾಜಶೇಖರ್, ಹೇಮಂತ್, ಅನೂಪ್, ಸುಮಾ, ಭರತ್, ಸುಮಿತ್ರಾ, ಪ್ರಿಯಾಂಕ, ಆನಂದ, ಲಕ್ಷ್ಮೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.