Thursday, June 25, 2026
Thursday, June 25, 2026

District Consumer Disputes Redressal Commission ಸೇವಾ ನ್ಯೂನ್ಯತೆ: ಮೊಬೈಲ್ ರಿಪೇರಿ ಅಸಮರ್ಪಕ, ಗ್ರಾಹಕರಿಗೆ ಪರಿಹಾರ ನೀಡಲು ಆಯೋಗ ಸೂಚನೆ

Date:

District Consumer Disputes Redressal Commission ಅರ್ಜಿದಾರರಾದ ಶಶಿಕುಮಾರ್ ಸಿ.ಎಸ್. ಎಂಬುವವರು ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‌ಕ್ಲೇವ್- ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಕ್ಸಿಯಾಮಿ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರು ಹಾಗೂ ಕ್ಸಿಯಾಮಿ ಪೋನಿನ ಆಥರೈಸ್ಡ್ ಸರ್ವಿಸ್ ಸೆಂಟರ್, ಉಡುಪಿ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಶಶಿಕುಮಾರ್ ಸಿ.ಎಸ್. ಎಂಬುವವರು ಕ್ಸಿಯಾಮಿ ಕಂಪನಿಯ ಫೋನ್‌ನ್ನು ೨೦೨೨ರಲ್ಲಿ ರೂ. ೪೦,೦೦೦/- ಗಳಿಗೆ ಖರೀದಿಸಿರುತ್ತಾರೆ. ಖರೀದಿಯ ವಾರಂಟಿ ಅವಧಿಯಲ್ಲಿ ಫೋನಿನ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಎದುರುದಾರರಲ್ಲಿ ರಿಪೇರಿಗೆ ನೀಡಿದಾಗ ಮದರ್ ಬೋರ್ಡ್ ಸಮಸ್ಯೆಯೆಂದು ಮದರ್‌ಬೋರ್ಡ್ನ್ನು ಬದಲಾಯಿಸಿ ಕೊಟ್ಟಿರುತ್ತಾರೆ. ನಂತರವೂ ಅದೇ ಸಮಸ್ಯೆ ಮುಂದುವರೆದಾಗ ಮತ್ತೆ ರಿಪೇರಿಗಾಗಿ ಕೊಟ್ಟಿರುತ್ತಾರೆ. ಆದರೆ ಎದರುದಾರರು ಫೋನ್‌ನ್ನು ರಿಪೇರಿ ಮಾಡಿ ವಾಪಸ್ಸು ಮಾಡುವುದಾಗಲಿ, ಅದರ ಬದಲು ಹೊಸ ಫೋನ್ ನೀಡುವುದಾಗಲಿ ಮಾಡಿರುವುದಿಲ್ಲವೆಂದು ಆಪಾದಿಸಿರುತ್ತಾರೆ.
ಆಯೋಗವು ಪ್ರಕರಣದ ಅಂಶಗಳು, ಪಿರ್ಯಾದಿದಾರರು ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಎದುರುದಾರರ ಫೋನಿನಲ್ಲಿರುವ ದೋಷವನ್ನು ಸರಿಪಡಿಸುವಲ್ಲಿ ವಿಫಲರಾಗಿರುತ್ತಾರೆಂದು ಹಾಗೂ ಅರ್ಜಿದಾರರು ಖರೀದಿಸಿದ ಫೋನ್ ಉತ್ಪಾದನ ದೋಷವನ್ನು ಹೊಂದಿದ್ದು, ಎದುರುದಾರರಿಂದ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
District Consumer Disputes Redressal Commission ಈ ಪ್ರಕಾರ ಫೋನ್ ಮಾರಾಟಗಾರರಾದ ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‌ಕ್ಲೇವ್ – ತೀರ್ಥಹಳ್ಳಿ ಇವರು ಅರ್ಜಿದಾರರಿಗೆ ಪೋನ್ ಖರೀದಿಯ ಮೊತ್ತ ರೂ. ೪೦.೦೦೦/- ಗಳಲ್ಲಿ ಜಿ.ಎಸ್.ಟಿ. ಯನ್ನು ಕಡಿತಗೊಳಿಸಿ ರೂ. ೩೩,೮೯೭/-ಗಳನ್ನು ಶೇ.೯% ವಾರ್ಷಿಕ ಬಡ್ಡಿಯೊಂದಿಗೆ ಲೀಗಲ್ ನೋಟೀಸ್ ನೀಡಿದ ದಿನಾಂಕದಿAದ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬAಧಿಸಿದAತೆ ಪರಿಹಾರ ರೂ.೧೫,೦೦೦/- ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. ೧೦,೦೦೦/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಜೂನ್ ೦೩ ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...