Klive Special Article ಅಶೋಕ ಮರ ಚನ್ನಾಗಿ ಬೆಳೆದರೆ ಇಪ್ಪತ್ತೈದು ಮುವತ್ತು ಅಡಿ ಎತ್ತರ ಬೆಳೆಯಬಲ್ಲ ಹೆಸರೇ ಸೂಚಿಸುವಂತೆ ಶೋಕ ನಾಶಮಾಡುವ ಔಷಧಿಯ ಅಳಿವಿನಂಚಿನ ಪಟ್ಟಿಯಲ್ಲಿ ಇದೆ.ಈ ಮರ ಜನವರಿ ತಿಂಗಳಿನಿಂದ ಆರಂಭವಾಗಿ ಮಾರ್ಚ್ ತನಕವೂ ಹೂಗಳನ್ನು ಪಡೆಯಬಹುದು. ಹೂ ಬಿಟ್ಟಾಗ ಮಾತ್ರ ಪತ್ತೆ ಹಚ್ಚಬಹುದಾದ ಎರಡು ಜಾತಿಯ ಗಿಡ ಇದರಲ್ಲಿ ಇದೆ ಒಂದು ಕೆಂಪು ಒಂದು ಬಿಳಿ.ಶಿವರಾತ್ರಿ ಯಲ್ಲಿ ಶಿವನಪೂಜೆ ಗೆ ಸಲ್ಲುವ ಹೂ.
ಸ್ವಲ್ಪ ಕಹಿ ಮತ್ತು ಒಗರು ರುಚಿ ಶೀತವೀರ್ಯ.
ಇದರ ಬೇರು, ಚಕ್ಕೆ, ಹೂವು, ಬೀಜ ಔಷಧಿ ಯಾಗಿ ಉಪಯೋಗ.
ವೇದನಾಹರ,ಮೂಳೆಕುಡಿಸುವ ಗುಣವುಳ್ಳ, ತ್ರಿದೋಷಹರ,ದಾಹ,ಕ್ರಿಮಿ,ಬಾವು,ಶ್ರಮ,ಶೂಲೆ, ಉದರವ್ಯಾದಿ,ವಿಷ ಮೂಲವ್ಯಾಧಿ, ರಕ್ತ ವಿಕಾರ, ಪ್ರದರ ರೋಗಗಳು ನ್ನು ಪರಿಹರಿಸುತ್ತದೆ.
1) ಮರದ ತೊಗಟೆಯಿಂದ ಕಷಾಯ ಮಾಡಿ ಸೇವನೆಯಿಂದ ಶ್ವೇತ ಪ್ರದರ ಮತ್ತು ರಕ್ತ ಪ್ರದರ ಗುಣವಾಗುತ್ತದೆ.
2) ತೊಗಟೆ ಅಥವಾ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಪಟ್ಟು ಕಟ್ಟಿದರೆ ಊತ ಮತ್ತು ನೋವು ಗುಣಮಾಡುತ್ತದೆ.
3)ತೊಗಟೆ ಕಷಾಯ ಸೇವನೆಯಿಂದ ರಕ್ತ ಶುದ್ಧ ಮಾಡುತ್ತದೆ.
4) ತೊಗಟೆ ಯ ಪುಡಿಯ ಸೇವನೆಯಿಂದ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
5) ಹೂಗಳನ್ನು ಅರೆದು ಪೇಸ್ಟ್ ಮಾಡಿ ಸೇವಿಸುವುದರಿಂದ ರಕ್ತ ಭೇದಿ ಗುಣವಾಗುತ್ತದೆ.
6) ಹೂ ಗಳನ್ನು ಒಣಗಿಸಿ ಪುಡಿ ಮಾಡಿ ಇನ್ನಿತರ ಕೆಲವು ಗಿಡಮೂಲಿಕೆಗಳನ್ನು ಸೇರಿಸಿ ನಾನು ತಯಾರಿಸುವ ಶುಗರ್ ಔಷಧಿ ಒಳ್ಳೆಯ ರೀಜರ್ಟ ಕೊಟ್ಟಿದೆ.
7) ಬೀಜದ ಚೂರ್ಣ ಸೇವನೆಯಿಂದ ಮೂತ್ರದ ತಡೆ ಮತ್ತು ಮೂತ್ರಪಿಂಡ ಶುದ್ಧಿ ಆಗುತ್ತದೆ.
8) ಇದರ ಚಕ್ಕೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುತ್ತದೆ.
9) ಇದರ ಹೂವು ಮತ್ತು ಜೀರಿಗೆ ಪುಡಿ ಸೇರಿಸಿ ನುಣ್ಣಗೆ ಅರೆದು ಆಗತಾನೆ ಕರೆದ ಹಾಲಿನಲ್ಲಿ ಕುಡಿಯುವುದರಿಂದ ಅತಿಯಾದ ರಕ್ತ ಸ್ರಾವ ಗುಣವಾಗುತ್ತದೆ.
10) ಚಕ್ಕೆಯ ಪುಡಿ ಅರ್ಧ ಚಮಚ ವನ್ನು ಹಾಲಿನ ಜೊತೆಗೆ ಸೇರಿಸಿ ಕುಡಿದು ಚಕ್ಕೆ ನೀರಿನಲ್ಲಿ ತೈದು ಹಚ್ಚಿದರೆ ಮುರಿದ ಮೂಳೆ ಬೇಗನೆ ಕೂಡುತ್ತದೆ.ವೇದನೆ ಶಾಂತವಾಗುತ್ತದೆ.
11) ಇದರ ಚಕ್ಕೆ,ಲೋಂದ್ರ,ಪುತ್ರಜೀವಿ……..ಇನ್ನಿತರ ಮೂಲಿಕೆ ಸೇರಿಸಿ ಕೆಂಪು ಸಕ್ಕರೆ ಮತ್ತು ಹಾಲು ಸೇರಿಸಿ ಮಕ್ಕಳಾಗಲು ನಾನು ಕೊಡುವ ಔಷಧಿ ಸೇವಿಸುವ ಅನೇಕ ತಾಯಂದಿರ ಮಡಿಲು ತುಂಬಿಸಿದೆ.
Klive Special Article ಬರಹ : ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯೆ, ಸೊರಬ