Ravindra Kala Kshetra Bangalore ಭದ್ರಾವತಿ ನಗರದ ಹೊಸಮನೆ ಮುಖ್ಯ ರಸ್ತೆಯ ಶ್ರೀ ಮುರುಳೀಧರ ಸಂಗೀತ ವಿದ್ಯಾಲಯ ಮತ್ತು ಬೆಂಗಳೂರಿನ ಉಲ್ಲಾಳ ಉಪ ನಗರದ ಮುರುಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ ಸಂಗೀತ ವಿದ್ವಾಂಸರ ಕುಟುಂಬದ ಕುಡಿ ೬ ನೇ ತರಗತಿಯ ೧೧ ವರ್ಷದ ಬಾಲಕಿ ಗೌರಿ ಮನೋಹರಿ ಭರತ ನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಮುಂಭಾಗದ ಜೆ.ಸಿ ರಸ್ತೆಯ ಎಡಿಎ ರಂಗ ಮಂದಿರದಲ್ಲಿ ಮೇ: ೩೦ ರಂದು ಗುರುವಾರ ಸಂಜೆ ೬ ಗಂಟೆಗೆ ನಡೆಯಲಿದೆ. ಈ ಬಾಲಕಿಯು ಬೆಂಗಳೂರಿನ ಪ್ರಸಿದ್ದ ಸಂಗೀತ ವಿದ್ವಾನ್ ಗುರು ಪ್ರವೀಣ್‌ಕುಮಾರ್ ಅವರ ಶಿಷ್ಯೆಯಾಗಿದ್ದಾರೆ. ಬಾಲಕಿಯ ತಂದೆ ಇಂಜಿನಿಯರ್ ಹೆಚ್.ಎಸ್.ಕಿರಣ್ ಮತ್ತು ತಾಯಿ ಸಂಗೀತ ಕಲಾವಿದೆ ಡಾ: ವಿದ್ಯಾಲಕ್ಷ್ಮಿ ಅವರ ಪುತ್ರಿಯಾಗಿದ್ದಾಳೆ.
Ravindra Kala Kshetra Bangalore ವಿಶೇಷವೆಂದರೆ ಬಾಲಕಿಯ ಇಡೀ ಕುಟುಂಬದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಮಂದಿ ಸಂಗೀತ ವಿದ್ವಾಂಸರಾಗಿದ್ದಾರೆ. ಬಾಲಕಿಯ ತಾಯಿ ಡಾ: ವಿದ್ಯಾಲಕ್ಷ್ಮಿ ಅವರ ತಂದೆ (ಬಾಲಕಿಯ ಅಜ್ಜ) ಮುರುಳೀಧರ ಸಂಗೀತ ವಿದ್ಯಾಲಯದ ವಿದ್ವಾನ್ ಕೆ.ಎಸ್.ಮೋಹನ್ ಕುಮಾರ್ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ತಂದೆ (ಬಾಲಕಿಯ ಮುತ್ತಜ್ಜ) ದಿವಂಗತ ಕೆ.ಮಂಜಪ್ಪ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.
Ravindra Kala Kshetra Bangalore ಚಿ.ಗೌರಿ ಮನೋಹರಿ ಭರತನಾಟ್ಯ ರಂಗಪ್ರವೇಶ
Date: