Friday, June 19, 2026
Friday, June 19, 2026

Karnataka Legislative Council Elections ಪದವಿಧರ & ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿದ ಬಂಡಾಯ ಅಭ್ಯರ್ಥಿಗಳನ್ನ ಉಚ್ಚಾಟಿಸಿದ ಕಾಂಗ್ರೆಸ್

Date:

Karnataka Legislative Council Elections ಪ್ರಸ್ತುತ ನಡೆಯುತ್ತಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ಕರ್ನಾಟಕ ವಿಧಾನಪರಿಷತ್‌ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರುಗಳು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುತ್ತಾರೆ.

ಇವರುಗಳು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ದಿಸಿ ಕಾಂಗ್ರೆಸ್ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದಾರೆಂದು ಇವರ ಈ ನಡೆಯು ಪಕ್ಷ ವಿರೋಧಿ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಬಂಡಾಯ ಅಭ್ಯರ್ಥಿಗಳನ್ನು ಮಾನ್ಯ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.

Karnataka Legislative Council Elections ನೈರುತ್ಯ ಪದವೀಧರರ ಕ್ಷೇತ್ರದ ಶ್ರೀ ಎಸ್.ಪಿ. ದಿನೇಶ್, ಶಿವಮೊಗ್ಗ, ಬೆಂಗಳೂರು ಪದವೀಧರ ಕ್ಷೇತ್ರದ ಶ್ರೀ ಫರ್ಡಿನಾಂಡ್ ಲಾರೆನ್ಸ್ ಬೆಂಗಳೂರು, ನೈರುತ್ಯ ಶಿಕ್ಷಕರ ಕ್ಷೇತ್ರದ ಶ್ರೀ ಬಿ.ಆರ್. ನಂಜೇಶ್, ಚಿಕ್ಕಮಗಳೂರು,ಶ್ರೀ ಲೋಕೇಶ್ ತಾಳಿಕಟ್ಟೆ, ತಾಳಿಕಟ್ಟೆ, ಹೊಳಲ್ಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆ,ಆತ್ಮೀಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ
ಶ್ರೀ ವಿನೋದ್ ಶಿವರಾಜ್, ಬೆಂಗಳೂರು (ಬ್ಯಾಟರಾಯನಪುರ) ಇವರುಗಳನ್ನು ಉಚ್ಛಾಟನೆ ಮಾಡಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...