Saturday, November 23, 2024
Saturday, November 23, 2024

Klive Special Article ಇದ್ದರೆ, ಕುಟುಂಬ ವೈದ್ಯರು ಹತ್ತಿರ. ಕ್ಷಣ ಮಾತ್ರದಿ ರೋಗದೂರ

Date:

Klive Special Article ವೈದ್ಯರಾಜ ನಮಸ್ತುಭ್ಯಮ್ ಆರೋಗ್ಯ ಸುಖ ದಾತಾರಃ (ಯಮರಾಜ ಸಹೋದರಃ ಎಂಬ ಸಾಲನ್ನಿಲ್ಲಿ ಬದಲಿಸಲಾಗಿದೆ ) ಏಕೆಂದರೆ ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿದೆಯಲ್ಲ ಅದು ನಮಗೆ ನಿಜವಾಗಿಯೂ ಅರಿವಿಗೆ ಬರುವುದು ನಮ್ಮ ಆರೋಗ್ಯ ಹದಗೆಟ್ಟಾಗಲೇ. ಹಾಗಾಗಿ ಅಂತಹ ಆರೋಗ್ಯ ದಯಪಾಲಿಸುವ ವೈದ್ಯರಾಜನಿಗೆ ನಮಸ್ಕಾರ ಎಂದಿದ್ದು. ವೈದ್ಯರ ಕುರಿತು ಇಷ್ಟು ಪೀಠಿಕೆ ಹಾಕಲು ಕಾರಣ ಏನೆಂದರೆ, ನಿನ್ನೆ ಕುಟುಂಬ ವೈದ್ಯರ ದಿನವಂತೆ. ಇತ್ತೀಚಿನ ದಿನದಲ್ಲಿ ವೈದ್ಯರನ್ನು ಎಲ್ಲೆಡೆಯೂ ಕಾಣುತ್ತೇವೆ ಆದರೆ ಕುಟುಂಬ ವೈದ್ಯರ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. ಹಿಂದೆ ಒಂದು ಕುಟುಂಬಕ್ಕೆ ಒಬ್ಬ ಕುಲ ಪುರೋಹಿತ ಒಬ್ಬ ಕುಟುಂಬ ವೈದ್ಯ ಒಬ್ಬ ಅಡಿಗೆಯವ ಒಂದು ಖಾಯಂ ರೇಷನ್ ಅಂಗಡಿ ಒಂದು ಕಾಯಂ ಬಟ್ಟೆ ಅಂಗಡಿ ಇತ್ಯಾದಿಗಳನ್ನು ಕಾಣುತ್ತಿದ್ದೆವು. ಆದರೆ ಕಾರ್ಪೊರೇಟ್ ಯುಗ ಬಂದಾಗಿನಿಂದ ಜನರಿಗೆ ಆಯ್ಕೆಗಳು ಹೆಚ್ಚಿವೆ ಅದರಂತೆ ಒಬ್ಬರ ಬಳಿಯೇ ಏನು ಯಾರು ಸಿಗುತ್ತಾರೋ ಅವರ ಬಳಿ ಹೋಗುವುದು ಎಂಬಂತೆ ಆಗಿದೆ. ಇದರಿಂದ ಅನುಕೂಲವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚು. ಬಹು ಮುಖ್ಯವಾಗಿ ನಂಬಿಕೆ ಎನ್ನುವುದು ಕಡಿಮೆಯಾಗುತ್ತಾ ಬಂದಿದೆ. ಅಂಗಡಿಯ ವ್ಯಾಪಾರ ಇರಬಹುದು, ವೈದ್ಯರಿರಬಹುದು ಎಲ್ಲದಕ್ಕೂ ಇನ್ನೊಬ್ಬರನ್ನು ಒಮ್ಮೆ ವಿಚಾರಿಸಿ ನೋಡೋಣ ಎಂಬ ಹಂತಕ್ಕೆ ನಾವಿಂದು ಬಂದಿದ್ದೇವೆ. ಯಾರ ಮೇಲೂ ನಮಗೆ ನಂಬಿಕೆ ಇಲ್ಲದಂತಾಗಿದೆ.

ವೈದ್ಯರ ವಿಚಾರಕ್ಕೆ ಬಂದ್ರೆ ಹಿಂದಿನ ಕಾಲದಲ್ಲಿ ಒಬ್ಬ ಫಿಸಿಷಿಯನ್ ಮನೆಯ ಎಲ್ಲ ಸದಸ್ಯರ ಎಲ್ಲ ಖಾಯಿಲೆಗಳಿಗೂ ಔಷಧಿ ನೀಡುತ್ತಿದ್ದ. ಮತ್ತು ಆತನಿಗೆ ಎಲ್ಲರ ಆರೋಗ್ಯದ ಸ್ಥಿತಿಗತಿಗಳು ಚೆನ್ನಾಗಿಯೇ ತಿಳಿದಿರುತ್ತಿತ್ತು. ಒಮ್ಮೆ ವೈದ್ಯರ ಬಳಿ ಹೋದರೆ ರೋಗ ವಾಸಿಯಾಗುವುದು ನಿಶ್ಚಿತವಾಗುತ್ತಿತ್ತು. ಎಲ್ಲೋ ಅಪರೂಪದಲ್ಲಿ ಅದು ವಿಫಲವಾಗುತ್ತಿದ್ದುದು. ಕುಟುಂಬ ವೈದ್ಯರು ಸಂಪೂರ್ಣ ಕಾಳಜಿಯನ್ನು ತಮ್ಮನ್ನೇ ನಂಬಿ ಬಂದ ರೋಗಿಯ ಮೇಲೆ ವಹಿಸುತ್ತಿದ್ದರು.

Klive Special Article ವೈದ್ಯರ ಮಹತ್ವ ಈ ದಿನದಲ್ಲಿ ಬಹುವಾಗಿರುವಾಗ ನಮ್ಮ ಕುಟುಂಬ ವೈದ್ಯರೆಂದೆ ದ ಕರೆಯುವ ಡಾ. ಮೈಥಿಲಿಯವರ ಕುರಿತಾಗಿ ಹೇಳೆಲೇ ಬೇಕು. ನಾವು ಸುಮಾರು ಹತ್ತು ವರ್ಷಗಳಿಂದ ಅವರ ಬಳಿಯೇ ಚಿಕಿತ್ಸೆಯನ್ನು ಪಡೆದಿದ್ದೇವೆ. ಇದುವರೆಗೂ ನಮಗೆ ಅವರು ನೀಡಿದ ಔಷಧಿಯಿಂದ ತೊಂದರೆ ಆಯಿತು ಎಂದು ಹೇಳುವ ಸಂದರ್ಭವೇ ಬರಲಿಲ್ಲ. ನಮಗಂತೂ 24×7 ರ ಸೇವೆ ಲಭ್ಯ. ಎಂತಹ ಹೊತ್ತಿನಲ್ಲೂ ನಮಗೆ ಸ್ಪಂದಿಸುವವರು. ಅದೂ ಅಲ್ಲದೇ ಅವರ ಕೈ ಗುಣವೇ ಹಾಗೆ, ನಿಷ್ಕಲ್ಮಶ ಹೃದಯದ, ಹಣ ಮಾಡಿಕೊಳ್ಳಬೇಕೆಂಬ ಹಪಾಹಪಿ ಇಲ್ಲದ ರೋಗಿಯ ಹಾರೈಕೆ ತಮ್ಮ ಕರ್ತವ್ಯ ಎಂದು ಕಾಯಕನಿಷ್ಠ ಇರುವ ವೈದ್ಯರು ಅವರು.
ಒಮ್ಮೆ ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದ ಹಾಗೆ ವಾಂತಿ ಆರಂಭವಾಯಿತು. ಮನೆಯ ಔಷಧಿ ಕಷಾಯ ಎಲ್ಲವೂ ಮಾಡಿ ಸುಸ್ತಾಗ ನಾವು ಮೊರೆ ಹೋದದ್ದು ಡಾ.ಮೈಥಿಲಿ ಅವರ ಬಳಿ. ಒಂದು ದೂರವಾಣಿ ಕರೆ ನಾವು ಮಾಡಿದ್ದಷ್ಟೇ, ಅವರು ಸಾಧ್ಯವಾದಷ್ಟು ಏನು ಮಾಡಬೇಕೆಂದು ಹೇಳಿದರೂ ಅದು ನಿಲ್ಲದೆ ಬೆಳಗಿನ ಜಾವ 3:30ರ ಹೊತ್ತಿಗೆ ಎಂದಾಗ ಅವರೇ ಹೇಳಿದ ಆಸ್ಪತ್ರೆಗೆ ಹೋಗಿ ಸೇರಿದೆವು. ಬೆಳಗಾದರೆ ಅವರಿಗೆ ಎಂಡಿ ಪರೀಕ್ಷೆ ಅದಕ್ಕೆಂದು ದಾವಣಗೆರೆಗೆ ಹೋಗಿ ನಂತರ ಬರುತ್ತೇನೆ ಎಂದು ಹೇಳಿ ಹೋದರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಎಲ್ಲ ಮುಗಿದ ಮೇಲೆ ಗಾಲ್ ಬ್ಲಾಡರ್ ಸ್ಟೋನ್ ಆಗಿರುವುದರಿಂದ ಕೂಡಲೇ ಆಪರೇಷನ್ ಆಗಬೇಕೆಂದು ಅಲ್ಲಿನ ವೈದ್ಯರು ಹೇಳಿದರು ನಮಗೆ ಸಮಾಧಾನವಾಗದೆ ನಮ್ಮ ಡಾಕ್ಟರ್ ಬಂದು ಹೇಳಬೇಕೆಂದು ಕಾದೆವು. ಪರೀಕ್ಷೆ ಮುಗಿಸಿ ಸೀದಾ ಬಂದಿದ್ದೆ ಅವರು ನಮ್ಮ ಬಳಿ. ಆಪರೇಷನ್ ಮಾಡಿಸಿ ಅಂದಮೇಲೆ ನಾವು ಅಲ್ಲಿನ ವೈದ್ಯರಿಗೆ ಒಪ್ಪಿಗೆ ನೀಡಿದ್ದು. ಅದಾಗಿ ಕೆಲವು ದಿನಗಳ ನಂತರ ಆ ಕಾಯಿಲೆಯ ಗಾಂಭೀರ್ಯತೆಯನ್ನು ನಂತರ ನಮಗೆ ವಿವರಿಸಿದ್ದು ನೋಡಿ ಭಯವೇ ಆಯಿತು. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತಿದ್ದುದರಿಂದ ಆರಾಮಾದೆನು.
ನಮ್ಮ ಮನೆಯಲ್ಲಿ ನಾನಾಗಲಿ, ಮನೆಯವರಾಗಲಿ ಜೊತೆಯಲ್ಲಿ ಮಗನು ಕೂಡ ಬೇರೆ ಯಾವ ವೈದ್ಯರನ್ನು ಭೇಟಿಯಾಗುವುದೇ ಇಲ್ಲ. ಅವರೇ ಹೇಳಬೇಕು ಇದು ಬೇರೆಯವರ ಬಳಿ ಹೋಗಿ ಎಂದರೆ ಮಾತ್ರ ಅವರೇ ಹೇಳಿದ ಸಜೆಸ್ಟ್ ಮಾಡಿದ ಡಾಕ್ಟರ್ ಬಳಿ ಹೋಗುವುದು.
ಇನ್ನೊಮ್ಮೆ ಮಾತನಾಡುವಾಗ ನಾವು ಏನೇ ಆದರೂ ಅವರ ಅಭಿಪ್ರಾಯವನ್ನು ಮೊದಲು ಕೇಳುತ್ತಿದ್ದೆವು ಆಗ ಅವರೇ ಹೇಳಿದ ಒಂದು ಮಾತು ನನ್ನ ಕಿವಿಯಲ್ಲಿ ಇನ್ನೂ ಹಾಗೆ ಅನುರಣಿಸುತ್ತಲೇ ಇರುತ್ತದೆ. ಅದೇನೆಂದರೆ “ನಿಮಗೆ ಏನೇ ಆದರೂ ನಾನು ನನಗೆ ಹೇಗೆ ಆರೈಕೆ ಮಾಡಿಕೊಂಡು ಔಷಧಿ ಕೊಟ್ಟು ಕೊಳ್ಳುತ್ತೇನೋ ಹಾಗೆ ಯೋಚಿಸಿ ಕೊಡಬೇಕು” ಎಂದ ಮಾತು ಅವರ ಮೇಲಿನ ನಂಬಿಕೆ, ಪ್ರೀತಿ, ಗೌರವ ಎಲ್ಲವನ್ನು ಇಮ್ಮಡಿಗೊಳಿಸಿತು. ‘ತನ್ನಂತೆ ಪರರ ಬಗ್ಗೆ ದೊಡ್ಡ ಕೈಲಾಸ ಭಿನ್ನಾಣವಕ್ಕು ಸರ್ವಜ್ಞ’ ಎಂಬುದು ನೆನಪಾಯಿತು.

ಬರಿ ನಾವಷ್ಟೇ ಅಲ್ಲ ಬೇರೆ ಯಾರನ್ನು ಕಳಿಸಿದರೂ ಅಷ್ಟೇ ಆಪ್ತತೆಯಿಂದ ನೋಡಿ ಅವರ ರೋಗವಾಸಿ ಮಾಡಿದ ವೈದ್ಯರು. ಕರೋನಾ ಸಂದರ್ಭದಲ್ಲಿ ಅಂತೂ ಅವರ ಸೇವೆ ನಾವು ಮರೆಯಲಾಗುವುದಿಲ್ಲ. ಪ್ರತಿ ಹಂತದಲ್ಲೂ ನಮಗೆ ತೊಂದರೆಯಾಗದಂತೆ ನಮ್ಮನ್ನು ಕಾಪಾಡಿದ ನಮ್ಮ ವೈದ್ಯೆ ಡಾ. ಮೈಥಿಲಿ. ನಾಡಿ ನೋಡಿ ಅವರ ರೋಗ ಪತ್ತೆ ಹಚ್ಚುವ ರೀತಿ, ಅವರ ಸಮಾಧಾನದ ಆಪ್ತತೆಯ ಮಾತುಗಳು, ನಗುಮೊಗದಿಂದಲೇ ಮಾತನಾಡುತ್ತಾ ಮಾಡಿದ ಆರೈಕೆ, ನಮ್ಮ ದೇಹವನ್ನು ಪ್ರಯೋಗಾಲಯ ಮಾಡದೆ ಅವರು ಕೊಡುವ ಟ್ರೀಟ್ಮೆಂಟ್, ಪದೇ ಪದೇ ಆರಾಮಿಲ್ದೆ ಹೋದರೆ ಸುಮ್ಮನೆ ಔಷಧಿ ಕೊಡದೆ ಯಾಕೆ ಹೀಗೆ ಬರ್ತಾ ಇದ್ದೀರಾ ಅಂತ ಅದರ ಮೂಲ ಪತ್ತೆ ಹಚ್ಚಲು ತಲೆಕೆಡಿಸಿಕೊಳ್ಳುವುದು, ಅಲ್ಲದೆ ಮಗನಿಗೆ ಏನಾದರೂ ಪದೇ ಪದೇ ಹುಷಾರಿಲ್ದೆ ಹೋದರೆ ಅವನಿಗೆ ಆತ್ಮಸ್ಥೈರ್ಯ ನೀಡುವುದು ಇವೆಲ್ಲವೂ ಅವರ ಅಂತಃಕರಣದ ಆರೈಕೆಗೆ ಸಾಕ್ಷಿ. ಈ ರೀತಿಯ ವೈದ್ಯರ ಪಡೆದ ನಾವೇ ಧನ್ಯರು.
ನಮಗೆಷ್ಟೇ ಆರಾಮ್ ಇಲ್ದೆ ಹೋದ್ರು ಒಮ್ಮೆ ಅವರ ಬಳಿ ಹೋದರೆ ಸಾಕು ನಾವು ಹುಷಾರಾಗಿ ಬಿಡುತ್ತೇವೆ. ನಮ್ಮ ಎದುರಿನ ಮನೆಯವರೊಬ್ಬರು ಹೇಳ್ತಾ ಇದ್ರು ಅವರ ಕ್ಲಿನಿಕ್ ನ ಕಟ್ಟೆಯ ಮೇಲೆ ಒಂದಷ್ಟು ಸಮಯ ಕಳೆದರೂ ರೋಗ ವಾಸಿಯಾಗುತ್ತದೆ ಎಂದು. ಈ ರೀತಿಯಲ್ಲಿ ನಮ್ಮೆಲ್ಲ ರೀತಿ ರೋಗಕ್ಕೂ ಒಬ್ಬರೇ ವೈದ್ಯರಾಗಿ ನಮ್ಮನ್ನು ಆರೋಗ್ಯವಾಗಿರಲು ಕಾರಣೀಭೂತರಾದ ನಮ್ಮ ಕುಟುಂಬ ವೈದ್ಯರಾದ ಭಾರತೀ ಚಿಕಿತ್ಸಾಲಯದ ಡಾ. ಮೈಥಿಲಿಯವರಿಗೆ ಶತಕೋಟಿ ನಮನಗಳನ್ನು ಈ ಲೇಖನದ ಮೂಲಕ ಕುಟುಂಬ ವೈದ್ಯರ ದಿನದ ಈ ಸಂದರ್ಭದಲ್ಲಿ ಸಲ್ಲಿಸುತ್ತಿದ್ದೇನೆ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್, ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...