Klive Special Article ಶಿವಮೊಗ್ಗ ಲೋಕಸಭಾಕ್ಷೇತ್ರದ ಚುನಾವಣೆ ರಾಜ್ಯದ ಗಮನ ಸೆಳೆದಿದೆ. ಏಕೆಂದರೆ ಇಲ್ಲಿ ಅಭ್ಯರ್ಥಿಗಳಲ್ಲಿ ಈರ್ವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು. ಮತ್ತೊಂದು ಮಾಜಿ ಉಪಮುಖ್ಯಮಂತ್ರಿಯೇ ಅಭ್ಯರ್ಥಿ.
ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪನವರು ಪುತ್ರನಿಗೆ ಹಾವೇರಿ ಟಿಕೆಟ್ ನಿರೀಕ್ಷಿಸಿದ್ದರು.
ಆದರೆ ಒಳರಾಜಕಾರಣದಿಂದ ಫಲಿಸಲಿಲ್ಲ. ನೇರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಗುರಿಯಾಗಿಸಿದರು.
ಶಾಸಕ ಬಿ.ವೈ.ವಿಜಯೇಂದ್ರನ ಮೇಲೂ ಕೋಪ ಬಂತು. ಹಾಲಿ ಸಂಸದ ಬಿ.ವೈ.ರಾಘವೇಂದ್ರ ನ ಮೇಲೂ ಸೇಡು ಬಂತು.
ಒಟ್ಟಿನಲ್ಲಿ ಕುಟುಂಬ ರಾಜಕಾರಣದ ನೆಪ ಹೇಳಿ ವ್ಯಗ್ರರಾದರು.
ಬಂಡಾಯ ಅಂತ ಹೇಳಲಿಲ್ಲ. ಕಳೆದ ವಿಧಾನ ಸಭ ಚುನಾವಣೆಯ ಸೀಸನ್ನಿನಲ್ಲಿ
ಬಿಜೆಪಿಯಲ್ಲಿ ಹಿರಿತನದ ಪಟ್ಟ ಪಡೆದು , ಅಘೋಷಿತ ಚುನಾವಣಾ ರಾಜಕೀಯ ಸನ್ಯಾಸ
ಪಡೆದಿದ್ದರು.
ಆದರೆ ಈಗ ದೋಸೆ ಮಗುಚಿದಂತಾಗಿದೆ.
ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಧುಮುಕೇ ಬಿಟ್ಟರು.
ರಾಜ್ಯದ ಬಿಜೆಪಿ ಕಾರ್ಯಕರ್ತರ ನೋವಿನ ಧ್ವನಿಯಾಗಿ ಸ್ಪರ್ಧೆ ಎಂದರು. ಹಿಂದುತ್ವದ ಪರ ಧ್ವನಿ ಎಂದರು. ತಮ್ಮದು ರಾಷ್ಟ್ರಭಕ್ತರ ಸಮಿತಿ . ಬಿಜೆಪಿ ತೊರೆಯುವುದಿಲ್ಲ. ನನಗೆ ಬಿಜೆಪಿ ತಾಯಿ ಇದ್ದಂತೆ ಎಂದರು.ಆದರೆ ತಾಯಿ ಪಕ್ಷದ ಅಣತಿಯನ್ನ ಧಿಕ್ಕರಿಸಿದರು. ನಾಮಪತ್ರ ವಾಪಸ್ ಪಡೆಯಲಿಲ್ಲ.
ಅಬ್ಬರದ ಪ್ರಚಾರ ನಡೆಯಿತು. ಹಾಲಿ ಸಂಸದರ ಮೇಲೆ ಅಪ ಪ್ರಚಾರದ ದೂರನ್ನೂ ದಾಖಲಿಸಿದರು. ಪ್ರಚಾರದ ಎಲ್ಲ ಗಿಮಿಕ್ಕುಗಳನ್ನೂ ಎಲ್ಲರಂತೆ ಮಾಡಬೇಕಾಯಿತು. ಮಾಡಿದರು. ಕಾಂಗ್ರೆಸ್,ಜೆಡಿಎಸ್ ,ಮುಸ್ಲೀಮರು ತಮಗೆ ಪರವಾಗಿದ್ದಾರೆಂದೂ ಸಾರಿದರು. ಅಂತೂ ಶಿವಮೊಗ್ಗ ರಾಜಕೀಯ ರಣರಂಗದಲ್ಲಿ ಒಂದು ರೀತಿ ಧೂಳೆಬ್ಬಿಸಿದ ಹಾಗೆ ಆಯಿತು.
Klive Special Article ಮೊನ್ನೆ ಮಾಧ್ಯಮಗಳೊಂದಿಗೆ
ಅವರೇ ಹೇಳಿದರಂತೆ
” ಈಶ್ವರಪ್ಪ ಅಂದ್ರೆ ಬಿಜೆಪಿ. ಬಿಜೆಪಿ ಅಂದ್ರೆ ಈಶ್ವರಪ್ಪ. ಬಹಳಷ್ಟು ಮಂದಿ ಕಮಲಕ್ಕೇ ಮತ ನೀಡಿಬಿಟ್ಟಿದ್ದಾರೆ.
ಈಶ್ವರಪ್ಪ ಪಕ್ಷೇತರ ಅಂತ ಬಹಳ ಮತದಾರರಿಗೆ ತಿಳಿದೇ ಇಲ್ಲ.”
ಚುನಾವಣೆ, ಪ್ರಚಾರದ ಎಲ್ಲ ಮಗ್ಗುಲುಗಳನ್ನ ತಿಳಿದ ,ಪಳಗಿದ ಹುಲಿ ಈಶ್ವರಪ್ಪ. ಇಲ್ಲೇಕೆ ಮುಗ್ಗರಿಸಿದರು? ಎಂಬುದೇ ಪ್ರಶ್ನೆ.