Kote Anjaneya Swamy Shivamogga ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ ಶ್ರೀ ಅನಂತರಾಮ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ಗಳ ಸಹಭಾಗಿತ್ವದಲ್ಲಿ ದೇವಾಲಯದ ಆವರಣದಲ್ಲಿ, ಮೇ. ೧೫ರಿಂದ ಹನುಮ ಜಯಂತಿ ಅಂಗವಾಗಿ ಪ್ರತಿ ನಿತ್ಯ ಸಂಜೆ ೦೭.೦೦ ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೇ. ೧೫ರಂದು ಬೆಂಗಳೂರಿನ ಹೆಸರಾಂತ ಚಲನ ಚಿತ್ರ ಸಂಗೀತ ನಿರ್ದೇಶಕ, ಕಲಾವಿದ, ಬಿಗ್‌ಬಾಸ್ ಖ್ಯಾತಿಯ ವಾಸುಕಿ ವೈಭವ್ ಮತ್ತು ತಂಡದವರಿAದ ಭಕ್ತಿಭಾವ ಸಂಗಮ,
ಮೇ. ೧೬ರಂದು ಪ್ರಸಿದ್ಧ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ರವರಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸ,
ಮೇ. ೧೭ರಂದು ಬೆಂಗಳೂರಿನ ಹಾರಿಕಾ ಮಂಜುನಾಥ್‌ರವರಿAದ ಭಾರತೀಯ ಸಂಸ್ಕೃತಿ ಕುರಿತು ಉಪನ್ಯಾಸ,
ಮೇ. ೧೮ರಂದು ಪೃಥ್ವಿಗೌಡ ಕ್ರಿಯೇಷನ್ಸ್ ವತಿಯಿಂದ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರಿಂದ ಚಿರಂಜೀವಿ ಸಾವಿರದ ಹನುಮ ಕುರಿತು ಉಪನ್ಯಾಸ,
ಮೇ. ೧೯ರಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರಿಂದ ವಿಶ್ವಗುರು ಭಾರತ ಕುರಿತು ಉಪನ್ಯಾಸ,
ಮೇ. ೨೦ರಂದು ಬೆಂಗಳೂರಿನ ವೀಣಾ ಬನ್ನಂಜೆಯವರಿಂದ ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಕುರಿತು ಉಪನ್ಯಾಸ,
ಮೇ. ೨೧ರಂದು ಭಾರತೀಯ ಸಂಸ್ಕೃತಿಗೆ ಮಂದಿರಗಳ ಕೊಡುಗೆ ಕುರಿತು ದೇವಾಲಯ ಸಂವರ್ಧನ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್ ಹಾಗೂ ಭಾರತೀಯ ಸಂಸ್ಕೃತಿಗೆ ಸೋದರಿ ನಿವೇದಿತಾ ಕೊಡುಗೆ ಕುರಿತು ಪ್ರಿಯಾ ಅನಂತರಾಮನ್‌ರವರಿಂದ ಉಪನ್ಯಾಸ ನಡೆಯಲಿದೆ.
Kote Anjaneya Swamy Shivamogga ಮೇ. ೨೨ರಿಂದ ಧಾರ್ಮಿಕ ಕಾರ್ಯಕ್ರಮಗಳು
ಹನುಮ ಜಯಂತಿ ಅಂಗವಾಗಿ ಮೇ. ೨೨ರ ಬುಧವಾರ ಸ್ವಾತಿ ನಕ್ಷತ್ರ, ಬೆಳಿಗ್ಗೆ ೮.೦೦ ರಿಂದ ಶ್ರೀ ಆಂಜನೇಯರಿಗೆ ಹಾಗೂ ಶ್ರೀ ನಾರಸಿಂಹರಿಗೆ ಅಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ನಾರಸಿಂಹ ಸುದರ್ಶನ ಹೋಮ ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ ರಾತ್ರಿ ೮.೦೦ ರಿಂದ ಶ್ರೀ ಲಕ್ಷಿ÷್ಮÃನರಸಿಂಹರ ಪಲ್ಲಕ್ಕಿ ಉತ್ಸವ ಸಹಸ್ರ ನಾಮ, ತೀರ್ಥ ಪ್ರಸಾದ ವಿನಿಯೋಗ.
ಮೇ. ೨೩ರ ಗುರುವಾರ ವಿಶಾಖ ನಕ್ಷತ್ರ, ಬೆಳಿಗ್ಗೆ ೮.೦೦ ರಿಂದ ಶ್ರೀ ಆಂಜನೇಯರಿಗೆ ಅಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ರಾಮತಾರಕ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ, ರಾತ್ರಿ ೯.೦೦ ರಿಂದ ಶ್ರೀ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ತೀರ್ಥ ಪ್ರಸಾದ ವಿನಿಯೋಗ.
೨೪ರ ಶುಕ್ರವಾರ ಹನುಮಜಯಂತಿ ಅನುರಾಧ ನಕ್ಷತ್ರ, ಬೆಳಿಗ್ಗೆ ೯.೦೦ ರಿಂದ ಶ್ರೀ ಆಂಜನೇಯರಿಗೆ ಮಹಾಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ಮಾರುತಿ ಮೂಲ ಮಂತ್ರ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ಸಂಜೆ ೭.೦೦ ರಿಂದ ಶ್ರೀ ರಾಮಹನುಮರ ಎದುರು ಉತ್ಸವ ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ