Monday, April 28, 2025
Monday, April 28, 2025

JCI Shimoga ಜೆಸಿಐ ವತಿಯಿಂದ ವಲಯಮಟ್ಟದ ತರಬೇತಿ ಕಾರ್ಯಾಗಾರ

Date:

JCI Shimoga ನಗರದ ಶ್ರೀ ಸಾಯಿ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಜೆಸಿ ಸದಸ್ಯರುಗಳಿಗೆ, ಜೆಸಿಐ ಭಾರತ ಸಂಸ್ಥೆಯಿಂದ ರಾಷ್ಟ್ರೀಯ ತರಬೇತುದಾರರು ಆಗಮಿಸಿ ಮೂರು ದಿನಗಳ ಕಾಲ ತರಬೇತಿ ನೀಡಿದರು. ಮುಖ್ಯ ತರಬೇತುದಾರರಾಗಿ ಅನುರಾಧ ಜಯಶಂಕರ್, ಅಂಬಿಕಾಚಾರಿ, ರಾಘವೇಂದ್ರ ಹೊಳ್ಳ ತರಬೇತಿ ನೀಡಿದರು. 30 ಜನ ಅಭ್ಯರ್ಥಿಗಳು ತರಬೇತಿಯ ಲಾಭ ಪಡೆದರು. ಭವಿಷ್ಯದಲ್ಲಿ ಉತ್ತಮ ಭಾಷಣಗಾರರಾಗಿ ಬೆಳೆಯಲಿದ್ದಾರೆ.
JCI Shimoga ಜೆಸಿಐ ಶಿವಮೊಗ್ಗ ಸ್ಟಾರ್ ಅಥಿತ್ಯ ಪ್ರಾಯೋಜಿತ ಘಟಕವಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಜೆಸಿಐ ಭಾರತದ ಸಂಸ್ಥೆಯ ವಲಯ 24 ರ ಪದಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದಾರೆ.
ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಗರಿಕ ಹೋರಾಟ ವೇದಿಕೆಯ ವಸಂತ್ ಕುಮಾರ್, ಅಧ್ಯಕ್ಷತೆ ರವಿಕುಮಾರ್ ಡಿ, ಉದ್ಘಾಟಕರಾಗಿ ಚನ್ನ ವೀರೇಶ್ ಹಾವಣಗಿ, ವಲಯ ನಿರ್ದೇಶಕರಾಗಿ ಪ್ರವೀಣ್ ದೇಶಪಾಂಡೆ ಘಟಕದ ಅಧ್ಯಕ್ಷರಾಗಿ ನವೀನ್ ತಲಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...