Saturday, October 17, 2026
Saturday, October 17, 2026

Kumar Bangarappa ಸಚಿವ ಮಧು ಬಂಗಾರಪ್ಪ ಭಾಷೆಯ ಬಗ್ಗೆ ಹಿಡಿತವಿಲ್ಲದ ತಮ್ಮನ್ನು ಸಮರ್ಥಿಸಿಕೊಳ್ಳಲು ಟ್ರೋಲಿಗರಿಗೆ ಶಾಪ ಹಾಸ್ಯಾಸ್ಪದ- ಕುಮಾರ್ ಬಂಗಾರಪ್ಪ

Date:

Kumar Bangarappa ಸಚಿವ ಮಧು ಬಂಗಾರಪ್ಪನವರು ಭಾಷೆಯ ಬಗ್ಗೆ ಹಿಡಿತವಿಲ್ಲದ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಟ್ರೋಲ್ ಮಾಡುವ ಜನರಿಗೆ ಶಾಪ ಹಾಕುವುದು ಹಾಸ್ಯಾಸ್ಪದಿಂದ ಕೂಡಿದೆ ಅವರು ಸಭೆ,ಸಮಾರಂಭಗಳಲ್ಲಿ ಬಳಸುವ ಅಸಂಬದ್ಧ ಪದ ಬಳಕೆಯಿಂದ ಜನರು ಮಾಡುವ ಟ್ರೋಲ್ ನಿಂದ ಹೊರ ಬಂದಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದರು.

ಸೊರಬ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, . ತಾಲ್ಲೂಕಿನ ಆಡಳಿತ ಹಳಿತಪ್ಪಿದ್ದು ಭ್ರಷ್ಟಾಚಾರದಿಂದ ಕೂಡಿದೆ. ಗೊತ್ತು ಗುರಿ ಇಲ್ಲದ ಆಡಳಿತ ನಿರ್ವಹಣೆಯಿಂದ ಜನಸಾಮಾನ್ಯರ ಕೆಲಸ, ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.

Kumar Bangarappa ಬರಗಾಲದ ಸಂದರ್ಭದಲ್ಲಿ ಜನರು ತತ್ತರಿಸಿದ್ದು ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಯಾವುದೇ ಸರ್ಕಾರ ಜನರಿಗೆ ಸೌಲಭ್ಯ ಕಲ್ಪಿಸಿಕೊಡುವುದು ಆ ಸರ್ಕಾರಕ್ಕೆ ಬಿಟ್ಟ ವಿವೇಚನೆ ಆದರೆ ಅಧಿಕಾರ ಹಿಡಿಯುವ ನೆಪದಲ್ಲಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಿಗುವ ಬದಲು ಉಳ್ಳವರ ಪಾಲಾಗುತ್ತಿದೆ. ಕ್ಷೇತ್ರದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಪಟ್ಟಣದಲ್ಲಿ ವಿಸ್ತಾರ ಸೌಧ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿತ್ತು.

ಕ್ಷೇತ್ರದ ಶಾಸಕರು ಎಲ್ಲ ಸಮುದಾಯವರಿಗೂ ಅನ್ಯಾಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...