Monday, September 21, 2026
Monday, September 21, 2026

Karnataka Police ಸೌಳಿ ಗ್ರಾಮಕ್ಕೆ ನೀರು ಪೂರೈಸುವ ಪೈಪುಗಳ ಅಪಹರಣ

Date:

Karnataka Police ತೀರ್ಥಹಳ್ಳಿ ತಾಲೂಕಿನ ಸೌಳಿ ಗ್ರಾಮದ ಸಮೀಪ ಮಾಲತಿ ನದಿ ತೀರದಲ್ಲಿ ಮೇ 7ರಂದು ರಾತ್ರಿ ದುಷ್ಕರ್ಮಿಗಳು ನೀರು ಪೂರೈಕೆಯ ಪೈಪ್‌ಗಳನ್ನು ಕತ್ತರಿಸಿದ್ದಾರೆ.
ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಪೂರೈಸುವ ಹಾಗೂ ಏಳೆಂಟು ರೈತರ ಸಾಗುವಳಿ ಜಮೀನಿಗೆ ನೀರು ಸರಬರಾಜು ಮಾಡುವ ಪೈಪ್‌ಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಈ ಕುರಿತು ಹೆಗ್ಗೋಡು ಗ್ರಾಮ ಪಂಚಾಯಿತಿ ಪಿಡಿಒ ಆಗುಂಬೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕೇಂದ್ರೀಕೃತ ಕಾಮಗಾರಿ ಅನುಷ್ಠಾನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮದಲ್ಲಿ ಈಗ ಪೈಪ್ ಕತ್ತರಿಸಿದ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
Karnataka Police ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಮಜರೆ
ಗ್ರಾಮದಲ್ಲಿ ಪೈಪ್ ಕತ್ತರಿಸಿರುವುದು
ಚುನಾವಣಾ ಬಹಿಷ್ಕಾರ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಸಮಾಧಾ ಸೃಷ್ಟಿಯಾಗಿತ್ತು. ಆ ಕಾರಣಕ್ಕೆ ಘಟ ನಡೆದಿರುವ ಶಂಕೆ ಗ್ರಾಮದಲ್ಲಿ ವ್ಯಕ್ತವಾ ಗುತ್ತಿದೆ.
ಆಗುಂಬೆ ಪೊಲೀಸರು ಮಹಜರು ನಡೆಸಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...