Monday, August 3, 2026
Monday, August 3, 2026

Shimoga Central Jail ವಿಚಿತ್ರ ಸುದ್ದಿ – ಜೈಲಿನಲ್ಲಿ ಮೊಬೈಲ್ ನುಂಗಿದ ಖೈದಿ

Date:

Shimoga Central Jail ಜೈಲು ಶಿಕ್ಷಾ ಬಂಧಿಯೊಬ್ಬ ನಿಷೇಧಿತ ಮೊಬೈಲ್ ನ್ನೇ ನುಂಗಿ ವಿಷಕಂಠನಾಗಲು ಹೊರಟವನನ್ನ ಆಪರೇಷನ್ ಮೂಲಕ ಉಳಿಸಿರುವ ಘಟನೆ ನಡೆದಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಪರಶುರಾಮ ಪರ್ಸ ಚಿಂಗಾರಿ ಮಾ.28 ರಂದು ಹೊಟ್ಟೆನೋವು ಎಂದು ಕೂಗತೊಡಗಿದ್ದಾನೆ. ಕರ್ತವ್ಯ ನಿರತ ಅಧಿಕಾರಿ / ಸಿಬ್ಬಂದಿಗಳು ತಿಳಿಸಿದ ತಕ್ಷಣ ಆತನಿಗೆ ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅದರೆ ಚಿಂಗಾರಿಗೆ ತನಗೆ ಹೊಟ್ಟೆನೋವು ಜಾಸ್ತಿ ಇರುವುದಾಗಿ ತಿಳಿಸಿದ ಕಾರಣ ಅದೇ ದಿನ ರಾತ್ರಿ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಚಿಂಗಾರಿಯ ಹೊಟ್ಟೆ ನೋವಿಗೆ ಆತ ಕಲ್ಲು ನುಂಗಿರುವುದೇ ಕಾರಣ ಎಂದು ತಮ್ಮ ವರದಿಯಲ್ಲಿ ವೈದ್ಯರು ನೀಡಿದ ಕಾರಣ ಸೂಕ್ತ ಚಿಕಿತ್ಸೆಯನ್ನು ನೀಡಲು ತೀರ್ಮಾನಿಸಲಾಗಿತ್ತು.

ಅದರಂತೆ ಚಿಂಗಾರಿಯನ್ನು ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ಏ. 01 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈಯರ್ ಸೆಂಟರ್ ಗೆ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.‌

ಮೆಗ್ಗಾನ್ ನಿಂದ ಬೆಂಗಳೂರಿಗೆ ಕಳುಹಿಸಲಾಗಿದೆ. ಏ.03 ರಂದು ಕೇಂದ್ರ ಕಾರಾಗೃಹ ಬೆಂಗಳೂರು ರವರು ಖೈದಿಗೆ ಹಿರಿಯ ಮುಖ್ಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿ, ಅವರ ಶಿಫಾರಸ್ಸಿನಂತೆ ಏ.6 ರಂದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಿರುತ್ತಾರೆ.

Shimoga Central Jail ಭದ್ರತಾ ಅಡಿಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ದಿನಾಂಕ: 25-04-2024 ರಂದು ಸದರಿ ಬಂದಿಯ ಹೊಟ್ಟೆಯಿಂದ 01 ಮೊಬೈಲ್ ಫೋನನ್ನು ಹೊರ ತೆಗೆದಿದ್ದಾರೆ. ಹೊಟ್ಟೆಯಲ್ಲಿ ನಿಷೇಧಿತ ವಸ್ತುವಾದ ಮೊಬೈಲ್ ದೊರೆತಿರುವುದರಿಂದ ಈತನ ವಿರುದ್ಧ ತುಂಗ ನಗರದಲ್ಲಿ ದೂರು‌ ದಾಖಲಿಸಿದ್ದಾರೆ.

ಪೇಸ್ಟ್ ನಲ್ಲಿ ಗಾಂಜಾ, ಗುದದ್ವಾರದಲ್ಲಿ ಗಾಂಜಾವನ್ನ ಜೈಲಿನಲ್ಲಿ ಸಾಗಿಸಲು ಯತ್ನಿಸಲಾಗಿತ್ತು. ಜೈಲಿನ ಬಂಧಿಗಳಿಗೆ ಚಾಕುಚೂರಿ ಸಾಗಿಸುವ ಘಟನೆ ನಡೆದಿತ್ತು.

ಜೈಲಿನಲ್ಲಿ ಕೈಗಾರಿಕಾ ಭದ್ರತಾ ಪಡೆಯನ್ನ‌ ನಿಯೋಜಿಸಿರುವುದರಿಂದ ಈ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿದೆ. ಶಿಕ್ಷಾಬಂಧಿ ಚಿಂಗಾರಿ ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...