Saturday, December 6, 2025
Saturday, December 6, 2025

K.S.Eshwarappa ಚುನಾವಣಾ ಪ್ರಚಾರಕ್ಕೆ ಮೋದಿ ಫೋಟೋ ಬಳಕೆ, ಈಶ್ವರಪ್ಪನವರಿಗೆ ಸದ್ಯಕ್ಕೆ ರಿಲೀಫ್

Date:

K.S.Eshwarappa ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಕೆ ಸಂಬಂಧ ಕೆ.ಎಸ್‌. ಈಶ್ವರಪ್ಪ ಕೇವಿಯಟ್‌ ಸಲ್ಲಿಸಿದ್ದರು, ಆನಂತರ ಬಿಜೆಪಿ ಪ್ರಧಾನಿಯವರ ಫೋಟೋ ಬಳಕೆಗೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಈ ವಿಚಾರ ಶಿವಮೊಗ್ಗ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಇದೀಗ ಲಭ್ಯ ಮಾಹಿತಿ ಪ್ರಕಾರ, ಮೋದಿ ಬಳಕೆ ವಿಚಾರಕ್ಕೆ ಸದ್ಯದಮಟ್ಟಿಗೆ ಇತ್ಯರ್ಥವಾಗುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ರಾಜ್ಯದ ಮಾಧ್ಯಮವೊಂದು ವರದಿ ಮಾಡಿದೆ.ಅದರ ಪ್ರಕಾರ, ವಿಚಾರಣೆ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
K.S.Eshwarappa ಅರ್ಜಿ ವಿಚಾರಣೆ ಮಾಡುತ್ತಿರುವ ಒಬ್ಬರು ನ್ಯಾಯಾಧೀಶರು ನಿವೃತ್ತರಾಗಿದ್ದಾರೆ. ಮತ್ತೊಬ್ಬರು ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಈ ನಡುವೆ ಬೇಸಿಗೆ ರಜೆ ಬಂದಿದೆ. ಹಾಗಾಗಿ ವಿಶೇಷ ಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಬೇಕಿದೆ. ಈ ಕಾರಣಗಳಿಂದ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಈಶ್ವರಪ್ಪನವರು ನರೇಂದ್ರ ಮೋದಿಯವರ ಫೋಟೋ ಬಳಸುವುದನ್ನ ತಪ್ಪಿಸಬೇಕು ಎನ್ನುವ ಬಿಜೆಪಿ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...