Friday, June 19, 2026
Friday, June 19, 2026

Klive Special Article ದೀನರಕ್ಷಕನಿಗೆ ನನ್ನ ಮತ…ಅಶ್ವಿನಿ ದೇವತೆಗಳೇ ಅಸ್ತು ಎನ್ನಿ

Date:

ಲೇ; ಪ್ರವೀಣ ಜವಳಿ

Klive Special Article ಇಂದಿನ ಚುನಾವಣೆಯಲ್ಲಿ ಚಲಾವಣೆ ಆಗುವುದು ನನ್ನ ಮತ,
ಅಭ್ಯರ್ಥಿಗಳ ಆಮೀಶಕ್ಕೆ ಬಲಿಯಾಗದು ನನ್ನ ಮತ,
ಹುಸಿ ಭರವಸೆಗಳಿಗೆ ಬಗ್ಗದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಹೆಂಡಕೆ, ಪುಡಿಗಾಸಿಗೆ ಬಿಕರಿಯಾಗದು ನನ್ನ ಮತ,
ವಾಚಿಗೆ ಗೋಡೆ ಗಡಿಯಾರ ಗಳಿಗೆ ವಾಲದು ನನ್ನ ಮತ,
ಮಂಚಕೆ ಬೀರಿಗೆ ಸೀರೆ ಶಾಲು ಗಳ ಎಂಜಲಿಗೆ ಕೈ ಒಡ್ಡದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಕ್ಷಣಿಕ ಸುಖಗಳಿಗೆ ಈಡಾಗಿ ರಾಜ್ಯದ ಹಿತ ಹರಾಜಾಗಲು ಬಿಡದು ನನ್ನ ಮತ,
ಪುಂಡ ಪೋಕರಿಗಳ ಆರಿಸಿ ಅನರ್ಥಗಳಿಗೆ ರಹಾದಾರಿ ಕೊಡದು ನನ್ನ ಮತ,
ಸ್ನೇಹಿತರಿಗೆ, ಬಂಧು ಬಾಂಧವರಿಗೆ ಪ್ರೋತ್ಸಾಹಿಸಿ ಅವರ ಜೊತೆ ತಾನು ಚಲಾವಣೆ ಗೊಳ್ಳುವುದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ನಿಸ್ಪೃಹ ನಿರಪೇಕ್ಷ ನಾಯಕನ ಆರಿಸುವುದು ನನ್ನ ಮತ,
ಜನಾನುರಾಗಿ ದೀನರಕ್ಷಕನ ಆಯ್ಕೆ ಮಾಡುವುದು ನನ್ನ ಮತ,
ನಮ್ಮ ರಾಜ್ಯ ವ ಸುಭೀಕ್ಷ ರಾಜ್ಯವಾಗಿಸುವುದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಬರಹ : ಪ್ರವೀಣ ಜವಳಿ
9880687985

ಪ್ರವೀಣ ಜವಳಿ
PraveenMJavali@gmail.com
98806 47945.

Klive Special Article (ಅಶ್ವಿನೀ ದೇವತೆಗಳು ದೇವತೆಗಳ ವೈದ್ಯರೆಂದೆನಿಸಿದ್ದಾರೆ. ಇವರಿಗೆ ಅಶ್ವಿನೀ ಕುಮಾರರೆಂದೂ, ಅಸ್ತು ದೇವತೆಗಳೆಂದೂ ಹೆಸರಿದೆ.

ಅಶ್ವಿನೀ ದೇವತೆಗಳು ಸದಾ ಎಲ್ಲ ಕಡೆಯು ನೆಲೆಸಿ ಜನರಾಡುವ ಒಳ್ಳೆಯ, ಕೆಟ್ಟ ಮಾತುಗಳಿಗೆಲ್ಲಾ ಅಸ್ತು ಎನ್ನುತ್ತಾರೆಂದು ನಂಬಲಾಗಿದೆ. ಹಾಗಾಗಿ ಮನುಷ್ಯ ತನ್ನ ಜೀವನದುದ್ದಕ್ಕೂ ಒಳ್ಳೆಯ ಮಾತುಗಳನ್ನಾಡುತ್ತಾ ಆರೋಗ್ಯಕರವಾಗಿ ಬದುಕಬೇಕೆನ್ನುತ್ತಾರೆ.)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...