Sunday, September 27, 2026
Sunday, September 27, 2026

Prajwal Revanna ನಮ್ಮ ಕುಟುಂಬ ಬೇರೆ ಪ್ರಜ್ವಲ್ ದು ಬೇರೆ. ತಪ್ಪು ಮಾಡಿದ್ದರೆ ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು- ಕುಮಾರಸ್ವಾಮಿ

Date:

Prajwal Revanna ನಮ್ಮ ಕುಟುಂಬ ಬೇರೆ ಪ್ರಜ್ವಲ್ ದು ಬೇರೆ. ತಪ್ಪು ಮಾಡಿದ್ದರೆ ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು- ಕುಮಾರಸ್ವಾಮಿ ಹಾಸನ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಪೆನ್ ಡ್ರೈವ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಇಲ್ಲಿ ವ್ಯಕ್ತಿ ಬಗ್ಗೆ ಚರ್ಚೆ ಮಾಡಿ, ಕುಟುಂಬದ ಹೆಸರು ಏಕೆ ತರುತ್ತೀರಾ?, ದೇವೇಗೌಡರು, ಕುಮಾರಸ್ವಾಮಿ ಅಂತಾ ಹೆಸರು ಏಕೆ ತರುತ್ತೀರಾ ಎಂದು ಪ್ರಶ್ನಿಸಿದರು.

ಇದು ವೈಯಕ್ತಿಕ ಸಮಸ್ಯೆಯೇ ಹೊರತು ಕೌಟುಂಬಿಕ ಸಮಸ್ಯೆಯಲ್ಲ. ಅವರ (ರೇವಣ್ಣ) ಕುಟುಂಬ ಪ್ರತ್ಯೇಕ ಮತ್ತು ನಮ್ಮ (ನಾನು ಮತ್ತು ಪ್ರಧಾನಿ ದೇವೇಗೌಡ) ಕುಟುಂಬ ಬೇರೆ. ಪ್ರಜ್ವಲ್ ತಪ್ಪಿತಸ್ಥರಾಗಿದ್ದರೆ ಶಿಕ್ಷೆಯಾಗಬೇಕು. ಚುನಾವಣೆಗೆ ಮೂರು ದಿನಗಳ ಮೊದಲು ಈ ಪೆನ್ ಡ್ರೈವ್ ಹೊರಬಂದಿದೆ. ಇದನ್ನು ಗಮನಿಸಬೇಕು. ಈ ವಿಚಾರವು ವ್ಯಕ್ತಿಗೆ ಸಂಬಂಧಿಸಿದ್ದೇ ಹೊರತು ಕುಟುಂಬಕ್ಕೆ ಸಂಬಂಧಿಸಿದ್ದಲ್ಲ

Prajwal Revanna ನಮ್ಮ ಕುಟುಂಬ ಬೇರೆ ಪ್ರಜ್ವಲ್ ದು ಬೇರೆ. ತಪ್ಪು ಮಾಡಿದ್ದರೆ ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು- ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದಲೂ ಕ್ರಮ ಕೈಗೊಳ್ಳುತ್ತೇನೆ. ಉಪ್ಪು ತಿಂದವರು ನೀರು ಕುಡಿಯಬೇಕು. ದೇವೇಗೌಡರು ಹಾಗೂ ನಾನು ಮಹಿಳೆಯರ ಬಗ್ಗೆ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಮಹಿಳೆಯರ ಕಷ್ಟ-ಸುಖ ಕೇಳಿದ್ದೇನೆಂದು ತಿಳಿಸಿದರು.

ಈ ಹಿಂದೆ ತಾವು ಹೇಳಿದ್ದ ಪೆನ್ ಡ್ರೈವ್ ಅನ್ನು ಯಾವಾಗ ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿಯೂ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...