Karnataka Lokayukta ಖಾತೆ ಬದಲಾವಣೆಗಾಗಿ ಲಂಚ ಪಡೆಯುತ್ತಿದ್ದ ಅಬ್ಬಲಗೆರೆ ಗ್ರಾಮಪಂಚಾಯ್ತಿ ಕಾರ್ಯದರ್ಶಿ-2 ಯೋಗೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ.
ಯಶವಂತ ಎಂಬುವವರು ಚನ್ನಾಮುಂಬಾಪುರದಲ್ಲಿನ ಸೂಡಾ ಅನುಮೋದಿತ ಅಲಿನೇಷನ್ ಜಾಗವನ್ನು ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅಬ್ಬಲಗೆರೆ ಗ್ರಾಮಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಇದಕ್ಕಾಗಿ ಗ್ರಾಮಪಂಚಾಯ್ತಿ ಕಾರ್ಯದರ್ಶಿ ಯೊಗೀಶ್ 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದನ್ನೆನ್ನಲಾಗಿದೆ.
Karnataka Lokayukta ಈ ಬಗ್ಗೆ ಯೋಗೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಅದರಂತೆ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ಎಂ.ಎಚ್ ಹಾಗೂ ಡಿವೈಎಸ್ಪಿ ಉಮೇಶ್ವರ್ ಈಶ್ವರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್ಸ್ ಪೆಕ್ಟರ್ ವೀರಬಸಪ್ಪ ಎಲ್ ಮತ್ತು ಸಿಬ್ಬಂದಿ ದೂರುದಾರ ಯಶವಂತ್ ಅವರಿಂದ 15 ಸಾವಿರ ರೂ ಲಂಚ ಪಡೆಯುತ್ತಿದ್ದ ಅಬ್ಬಲಗೆರೆ ಗ್ರಾ.ಪಂ ಕಾರ್ಯದರ್ಶಿ ಯೋಗೀಶ್ ನನ್ನು ಲಂಚದ ಹಣದ ಸಮೇತ ಬಂಧಿಸಿದ್ದಾರೆ.