Monday, May 4, 2026
Monday, May 4, 2026

Belur Gopalakrishna ಗ್ಯಾರಂಟಿ ಯೋಜನೆ ಮಾಹಿತಿ ನೀಡಿ, ಮತದಾರರನ್ನ ಓಲೈಸಿ ಮತಯಾಚಿಸಿ- ಬೇಳೂರು ಗೋಪಾಲಕೃಷ್ಣ

Date:

Belur Gopalakrishna ಕಾಂಗ್ರೆಸ್ಸಿನ ಮಹಿಳಾ ಕಾರ್ಯಕರ್ತರು, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಹಾಗೂ ಬೂತ್ ಸಮಿತಿ ಪದಾಧಿಕಾರಿಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿ, ಜನರಿಗೆ ಮನವರಿಕೆ ಮಾಡಿ ಈ ಮೂಲಕ ಮತದಾರರನ್ನು ಓಲೈಸಿ ಮತ ಯಾಚಿಸಬೇಕೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಾಗರ ಪಟ್ಟಣದ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಯೋಜನೆ ವಿವರಗಳನ್ನು ತಿಳಿಸಿ, ಜನರಿಗೆ ಇದನ್ನು ಅರ್ಥೈಸಿ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಮತ ಯಾಚನೆ ಮಾಡುವಂತೆ ತಿಳಿಹೇಳಿದರು.

Belur Gopalakrishna ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರಾದ ಬಿ. ಆರ್. ಪ್ರಭಾಕರ್, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸುಬ್ರಮಣ್ಯ, ಬಂಡಿ ರಾಮಚಂದ್ರ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಿಪ್ಪನ್‌ಪೇಟೆಯ ಫ್ಯಾನ್ಸಿ ರಮೇಶ್, ಹೆಚ್. ಡಿ. ಜಯಶೀಲಪ್ಪ, ಗುರುಶಕ್ತಿ ವಿದ್ಯಾಧರ, ಏರಿಗೆ ಉಮೇಶ್, ಡಿ.ಆರ್. ವಿನಯ್, ಬುಕ್ಕಿವರೆ ಮಹೇಂದ್ರ, ಎಂ.ಎ. ಪರಮೇಶ್, ರವಿ ನೇರಲೆ, ಸ್ವಾಮಿ ಈಶ್ವರಪ್ಪ ಗೌಡ, ಸಣ್ಣಕ್ಕಿ ಮಂಜು, ಜಯನಗರ ಗುರು, ನೇತ್ರಾವತಿ, ನೋರಾ ಮೆಟಲ್ಡ್ ಸಿಕ್ವೇರಾ, ಸಾಕಮ್ಮ, ಸಿಂಥಿಯಾ ಸೆರಾವೋ, ಶಾಹೀನಾ ಬೇಗಂ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...