Thursday, September 17, 2026
Thursday, September 17, 2026

DC Shivamogga ಆಗುಂಬೆ ಹೋಬಳಿ ಬಾಳೆಹಳ್ಳಿ,ಉಳುಮಡಿ, ಸುರುಳಿಗದ್ದೆ,ಕಣಗುಲ್ ಗ್ರಾಮಗಳಲ್ಲಿ ರಸ್ತೆ ಬೇಡಿಕೆ ಇಟ್ಟು ಮತದಾನ ಬಹಿಷ್ಕಾರ

Date:

DC Shivamogga ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಬಾಳೆಹಳ್ಳಿ ಗ್ರಾಮ, ಉಳುಮಡಿ ,ಸುರುಳಿಗದ್ದೆ, ಕಣಗುಲ್ ,ಈ ಗ್ರಾಮಗಳಿಗೆ ‌ ರಸ್ತೆ ಮಾರ್ಗ ಆಗುವರೆಗೂ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸುಮಾರು 40 ರಿಂದ 45 ಕುಟುಂಬಗಳು ವಾಸವಾಗಿರುವ ಈ ಗ್ರಾಮಗಳಲ್ಲಿ ವಾಸದ ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ ರಸ್ತೆ ಸರಿ ಇಲ್ಲದ ಕಾರಣ 20 ರಿಂದ 30 ಜನ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಕೂಡ ತೊಂದರೆಯಾಗುತ್ತಿದೆ. ಇದೇ ರಸ್ತೆ ಸಮಸ್ಯೆಯಿಂದ ಇಲ್ಲಿನ ಯುವಕರಿಗೆ ಹೆಣ್ಣು ಕೂಡ ಸಿಗುತ್ತಿಲ್ಲ ಎನ್ನುವುದು ನೊಂದ ಯುವಕರ ದೂರು.

DC Shivamogga ಗ್ರಾಮಕ್ಕೆ ಕರೆಂಟಿನ ವ್ಯವಸ್ಥೆ ಇದ್ದರೂ ಕೂಡ ಸರಿಯಾದ ಟಿಸಿ ಇರದೆ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಹಾಗೆ ಗ್ರಾಮದ ಹಳ್ಳಗಳಿಗೆ ಹೋಗಲು ಇರುವ ಕಲ್ಲು ಸಂಕಗಳಿಗೆ ಸರಿಯಾದ ಮಾರ್ಗಗಳು ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ ಕೂಡಲೇ ಇವೆಲ್ಲವನ್ನೂ ಸರಿಪಡಿಸಬೇಕು ಇಲ್ಲವಾದರೆ ನಾವು ಯಾವುದೇ ರೀತಿಯಿಂದಲೂ ಮತಗಳನ್ನು ಚಲಾಯಿಸುವುದಿಲ್ಲ ಈ ಇಡೀ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...