K.S.Eshwarappa ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಸಾವಿರಾರು ಬೆಂಬಲಿಗರೊಡನೆ ತಮ್ಮ ನಾಮಪತ್ರ ಸಲ್ಲಿಸಿದ್ದು, ಕಣದಲ್ಲಿ ಉಳಿಯುವ ತಮ್ಮ ತಮ್ಮ ನಿರ್ಧಾರವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.
ತಮ್ಮ ಸ್ಪರ್ಧೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಇವತ್ತಿನ ಮೆರವಣಿಗೆಯೇ ಉತ್ತರ ಎಂದು ಈಶ್ವರಪ್ಪ ಎದಿರೇಟು ನೀಡಿದರು. ಒಂದೇ ಕುಟುಂಬದ ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಚುನಾವಣೆ ಗೆದ್ದ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗಲಿದೆ. ಪಕ್ಷ ಶುದ್ಧೀಕರಣ ಆಗುವ ವಿಶ್ವಾಸ ಇದೆ. ನನ್ನ ಸ್ಪರ್ಧೆ ಗ್ಯಾರಂಟಿಗೆ ಜನಸಾಗರವೇ ಸಾಕ್ಷಿ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಬಂಡಾಯ ನಾಯಕರಾಗಿ ಸಲ್ಲಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಂದಿದ್ದೇನೆ. ನಾಮಪತ್ರ ಸಲ್ಲಿಕೆಗೆ ಮೊದಲು ಬೆಂಬಲಿಗರು ಮೆರವಣಿಗೆ ನಡೆಸಿದರು. ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ ಅವರಿಗೆ ಏನು ಅನ್ಯಾಯ ಆಗಿದೆ ಅಂತಾ ತಿಳಿಸುತ್ತಾರೆ ಎಂದರು.
ಕೇವಲ ಎಂಪಿ ಆಗಲು ನಾನು ಸ್ಪರ್ಧೆ ಮಾಡಿಲ್ಲ. ಹಾಲಿ ಸಂಸದ ರಾಘವೇಂದ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಈ ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದರು.
ಮೆರವಣಿಗೆ:
K.S.Eshwarappa ಶಿವಮೊಗ್ಗ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಕುಟುಂಬ ಸಮೇತ ಆಗಮಿಸಿದ ಈಶ್ವರಪ್ಪ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಹಾಕಲಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು, ಕೇಸರಿ ಧ್ವಜ, ಹಿಂದೂತ್ವ ಪರ ಘೋಷಣೆಗಳು ಮೊಳಗಿದ್ದವು.
K.S.Eshwarappa ಅಪಾರ ಬೆಂಬಲಿಗರೊಡನೆ ಸಾಗಿ,ನಾಮಪತ್ರ ಸಲ್ಲಿಸಿದ ಹಿಂದೂಹುಲಿ ಈಶ್ವರಪ್ಪ
Date: