Wednesday, October 2, 2024
Wednesday, October 2, 2024

Vadiraja Tirtha ಏಪ್ರಿಲ್ 10 ರಿಂದ ಸೋದೆ “ವಾದಿರಾಜ”ರ ದರ್ಶನಕ್ಕೆ ಸಮಯ ನಿರ್ಬಂಧ- ಶ್ರೀವಿಶ್ವ ವಲ್ಲಭ ತೀರ್ಥರು

Date:

Vadiraja Tirtha ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಮೂಲವೃಂದಾವನ ಸನ್ನಿಧಿ ಸೋದಾ ಕ್ಷೇತ್ರವು ಬಹು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಈಗಾಗಲೇ ಹಲವಾರು ಕಾಮಗಾರಿಗಳು ನಡೆದಿದೆ.

ಪ್ರಕೃತ ಶ್ರೀ ವಾದಿರಾಜರ ಮಂದಿರ ನಿರ್ಮಾಣ ಕಾರ್ಯವು ಆರಂಭಗೊಳ್ಳಲಿದ್ದು ಹಳೆಯ ಕಟ್ಟಡವನ್ನು ತೆರವು ಗೊಳಿಸುವ ಕೆಲಸ ಆರಂಭಗೊಳ್ಳಲಿದೆ. ಒಟ್ಟು ಮಂದಿರ ನಿರ್ಮಾಣ ಪೂರ್ಣಗೊಳ್ಳಲು ಎರಡು ವರ್ಷಗಳ ಅವಧಿ ಬೇಕಾಗಿದೆ. ಆದ್ದರಿಂದ ಶ್ರೀ ಗುರುರಾಜರ ಹಾಗೂ ಭೂತರಾಜರ ದರ್ಶನಕ್ಕೆ ಈ ಸಂದರ್ಭದಲ್ಲಿಯೂ ಎಲ್ಲರಿಗೂ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಸೀಮಿತ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. 2024 ಏಪ್ರಿಲ್ 10 ನೇ ತಾರೀಕಿನಿಂದ ಪ್ರಾತಃ ಕಾಲ 5 ರಿಂದ 8 ರವರೆಗೆ ಹಾಗೂ ಸಂಜೆ 5.30 ರಿಂದ 7.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಉಳಿದ ಸಮಯದಲ್ಲಿ ಮಂದಿರ ನಿರ್ಮಾಣ ಕಾಮಗಾರಿ ನಡೆಯಲಿರುವದರಿಂದ ದರ್ಶನಕ್ಕೆ ಅವಕಾಶವಿಲ್ಲ .

Vadiraja Tirtha ಬಂದ ಎಲ್ಲಾ ಭಕ್ತರಿಗೆ ತೀರ್ಥಪ್ರಸಾದ ಹಾಗೂ ವಸತಿ ವ್ಯವಸ್ಥೆ ಎಂದಿನಂತೆ ಇರುತ್ತದೆ. ಇಷ್ಟಾರ್ಥ ಸಿದ್ಧಿ ಸೇವೆಯೂ ಇನ್ನು ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೆ ಇರುವುದಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...