Sunday, August 2, 2026
Sunday, August 2, 2026

King Cobra ಹೆಬ್ರಿ ಸನಿಹ ಅತೀಭಾರದ ಕಾಳಿಂಗ ಸರ್ಪ ಸೆರೆ

Date:

King Cobra ಹನ್ನೆರಡುವರೆ ಕೆಜಿ ತೂಗುವ ಕಾಳಿಂಗ ಸರ್ಪವನ್ನು ಹೆಬ್ರಿ ಸಮೀಪದ ಸೀತಾನದಿಯ ಮನೆಯೊಂದರ ಬಳಿ ನಿನ್ನೆ ಸೆರೆಹಿಡಿಯಲಾಗಿದೆ. ಇದುವರೆಗೂ ಕಾಣಿಸಿಕೊಂಡ ಅತಿಉದ್ದದ ಕಾಳಿಂಗ ಇದಾಗಿದ್ದು, 15ಅಡಿಯಷ್ಟಿದೆ.ಇಷ್ಟು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇದೀಗ ಅಂತದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿರುವವರು ಆಗುಂಬೆಯಲ್ಲಿ ಕಾಳಿಂಗ ಸರ್ಪದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾ. ಗೌರಿಶಂಕರ್. ತಮ್ಮ ೨ ದಶಕದ ವೃತ್ತಿ ಜೀವನದಲ್ಲಿ ಡಾ.ಪಿ.ಗೌರಿ ಶಂಕರ್ ಅತಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ.
ಕಾಳಿಂಗ ಸರ್ಪ (ಒಫಿಯೋಫಾಗಸ್ ಹನ್ನಾ) ಕ್ಕೆ ಫೆಬ್ರವರಿಯಿಂದ ಮೇ ತಿಂಗಳ ನಡುವಿನ ಅವಧಿ ಸಂತಾನೋತ್ಪತ್ತಿಯ ಸಮಯ. ಈ ಟೈಂನಲ್ಲಿ ಹೆಣ್ಣು ಹಾವುಗಳನ್ನ ಹುಡುಕಿಕೊಂಡು ಹೋಗುವ ಗಂಡು ಕಾಳಿಂಗ ಮನೆ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ.. ಇದೇ ರೀತಿಯಲ್ಲಿ ಹೆಬ್ರಿಯ ಸೀತಾ ನದಿ ತೀರದಲ್ಲಿರುವ ಭಾಸ್ಕರ್ ಶೆಟ್ಟರ ಮನೆಯ ಸಮೀಪ ಕಾಳಿಂಗವೊಂದು ಪ್ರತ್ಯಕ್ಷವಾಗಿತ್ತು.
ಇದರ ಬಗ್ಗೆ ಮಾಹಿತಿ ಪಡೆದ ಡಾ.ಗೌರಿ ಶಂಕರ್ ತಮ್ಮ ಸಹೋದ್ಯೋಗಿಗಳ ಜೊತೆಗೆ ಸ್ಥಳಕ್ಕೆ ತೆರಳಿ ಸುರಕ್ಷತಾ ವಿಧಾನದೊಂದಿಗೆ ಹಾವನ್ನು ಹಿಡಿದಿದ್ದರೆ. ಇದು ನೀರಿನ ಕಾಲುವೆಗೆ ಹಾಕುವ (ತೋಡು) ದೊಡ್ಡ ಪೈಪ್‌ನಡಿಯಲ್ಲಿ ಪತ್ತೆಯಾಗಿದೆ.
ಇದನ್ನು ನೋಡಿದ ಗೌರಿಶಂಕರ್ ಕ್ಷಣಕಾಲ ದಂಗಾಗಿದ್ದಾರೆ ಅದಕ್ಕೆ ಕಾರಣವೂ ಇದೆ ಎಂದಿರುವ ಗೌರಿಶಂಕರ್ ತಮ್ಮ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಕಾಳಿಂಗವನ್ನು ನೋಡಿರಲಿಲ್ಲ. ಇಲ್ಲಿವರೆಗೂ ಗರಿಷ್ಟ ಅಂದರೆ ಸುಮಾರು 10 ಕೆಜಿ ವರೆಗಿನ ಕಾಳಿಂಗ ಸರ್ಪವನ್ನು ಹಿಡಿದಿದ್ದೇನೆ. ಆದರೆ ಸದ್ಯ ಸಿಕ್ಕಿರುವ ಹಾವಿನ ತೂಕ ಬರೋಬ್ಬರಿ 12.50 ಕೆಜಿ ಇದೆ. ಇದು ಇಷ್ಟು ದಿನದ ಅನುಭವದಲ್ಲಿ ಮೊದಲು ದಾಖಲಿಸುತ್ತಿರುವ ವಿಷಯ ಎಂದಿದ್ದಾರೆ.
King Cobra ಸಾಮಾನ್ಯವಾಗಿ12-13 ಅಡಿ ಉದ್ದದ ಕಾಳಿಂಗವನ್ನು ನೋಡಲು ಸಿಗುತ್ತದೆ. ಸುರಿಸುಮಾರು 15 ಅಡಿ ಉದ್ದದ ಹಾಗೂ ದಷ್ಟಪುಷ್ಟ ದೇಹದ ಕಾಳಿಂಗ ನೋಡಿದ್ದು ಇದೇ ಮೊದಲು ಎಂದಿದ್ದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...