Jatra Mahotsava ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದ ಶನೇಶ್ವರ ಸ್ವಾಮಿ ಮತ್ತು ಚಕ್ಕಾಪುರದಮ್ಮ ಮೂಲ ದೇವಾಲಯ ಹಾಗೂ ಮೊರಬ ವೀರಭದ್ರ ಸ್ವಾಮಿ ದೇವಾಲಯದ 27ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗಣ ಹೋಮ, ನವಗ್ರಹ ಹೋಮ, ಕುಂಭಾಭಿಷೇಕ, ಕೆಂಡಾರ್ಚನೆ, ಮಹಾ ಮಂಗಳಾರತಿ ಮತ್ತಿತರೆ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿ0ದ ನಡೆದವು.
ಪವನ್ ಭಟ್ ನೇತೃತ್ವದಲ್ಲಿ ಹೊಸಕೊಪ್ಪದ ಕೃಷಿಕ ಎಸ್. ಕೇಶವಮೂರ್ತಿ ಮತ್ತು ದುರ್ಗಿಬಾಯಿ ದಂಪತಿ ಗಣಹೋಮ ನಡೆಸಿಕೊಟ್ಟರು. ನಂತರ ಕುಂಬಾಭಿಷೇಕ ನಡೆಯಿತು. ಮೂಲತಃ ಕೂಡ್ಲಿಗಿ ತಾಲೂಕಿನವರಾದ ನೀಲಗುಂದ ವಂಶಸ್ಥರು ಚಳ್ಳಕೆರೆಯಿಂದ ಶಿವಮೊಗ್ಗ ಮಾರ್ಗವಾಗಿ ತಂದಿದ್ದ ಮೊರಬ ವೀರಭದ್ರ ಸ್ವಾಮಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಗಳನ್ನು ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪು ಹಾಡುತ್ತ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿ ದೇವಾಲಯದ ಆವರಣಕ್ಕೆ ತರಲಾಯಿತು.
ದೇವರಿಗೆ ಗಂಗಾಭಿಷೇಕದ ನಂತರ ವಿಶೇಷ ವಸ್ತç ಹಾಗೂ ಪುಷ್ಪದೊಂದಿಗೆ ಸಿಂಗರಿಸಲಾಯಿತು.
ಅರ್ಚಕರು ಅಗ್ನಿಕುಂಡವನ್ನು ಸಿದ್ಧಗೊಳಿಸಿ ಸಾಂಪ್ರದಾಯಿಕ ಪೂಜಾವಿಧಿಗಳು ಮತ್ತು ನೈವೇದ್ಯೆ ಸಮರ್ಪಣೆ ಮಾಡಿದರು. ದೇವರ ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿ ಹಾಯ್ದರು.
Jatra Mahotsava ಭಕ್ತರು ಇವರನ್ನು ಹಿಂಬಾಲಿಸಿದರು. ಪೂಜಾ ಹಾಗೂ ಸಕಲವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಮರಳಿದ ದೇವರ ಮೂರ್ತಿಗಳಿಗೆ ಮಹಾಮಂಗಳಾರತಿ ಮಾಡಲಾಯಿತು.
ಭಕ್ತರು ದೇವಿಗೆ ಉಡಿ ತುಂಬಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.